Pooja Hegde: ಒಂದೇ ವರ್ಷ ಪೂಜಾ ಹೆಗ್ಡೆ ನಟನೆಯ ನಾಲ್ಕು ಸಿನಿಮಾಗಳು ಫ್ಲಾಪ್; ಮುಂದೇನು?
ಪೂಜಾ ಹೆಗ್ಡೆ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 12 ವರ್ಷಗಳಾಗಿವೆ. ಕೇವಲ 22ನೇ ವಯಸ್ಸಿಗೆ ಅವರು ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು. ನಾಗ ಚೈತನ್ಯ, ಅಲ್ಲು ಅರ್ಜುನ್, ಜೂ.ಎನ್ಟಿಆರ್ ಮೊದಲಾದವರ ಜತೆ ತೆರೆ ಹಂಚಿಕೊಂಡಿದ್ದಾರೆ.
ನಟಿ ಪೂಜಾ ಹೆಗ್ಡೆ (Pooja Hegde) ಅವರು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಬಾಲಿವುಡ್, ಟಾಲಿವುಡ್, ಕಾಲಿವುಡ್ನಲ್ಲಿ ಅವರು ಬ್ಯುಸಿ ಇದ್ದಾರೆ. ಅವರು ಹಲವು ಹೀರೋಗಳ ಜತೆ ನಟಿಸಿದ್ದಾರೆ. ಆದರೆ, ಅವರಿಗೆ 2022 ವರ್ಷ ಅದೃಷ್ಟದಾಯಕವಾಗಿರಲಿಲ್ಲ. ಆ ವರ್ಷ ಅವರ ನಟನೆಯ ನಾಲ್ಕು ಸಿನಿಮಾಗಳು ರಿಲೀಸ್ ಆದವು. ನಾಲ್ಕೂ ಚಿತ್ರಗಳು ಫ್ಲಾಪ್ ಆದವು ಅನ್ನೋದು ಬೇಸರದ ವಿಚಾರ. ಹೀಗಾಗಿ ಈ ವರ್ಷ ಪೂಜಾ ಹೆಗ್ಡೆ ಗೆಲ್ಲಲೇಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಅದೃಷ್ಟ ಈ ವರ್ಷವಾದರೂ ಅವರ ಕೈ ಹಿಡಿಯುತ್ತದೇ ಎಂಬುದನ್ನು ಕಾದು ನೋಡಬೇಕಿದೆ.
ಪೂಜಾ ಹೆಗ್ಡೆ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 12 ವರ್ಷಗಳಾಗಿವೆ. ಕೇವಲ 22ನೇ ವಯಸ್ಸಿಗೆ ಅವರು ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು. ನಾಗ ಚೈತನ್ಯ, ಅಲ್ಲು ಅರ್ಜುನ್, ಜೂ.ಎನ್ಟಿಆರ್ ಮೊದಲಾದವರ ಜತೆ ತೆರೆ ಹಂಚಿಕೊಂಡಿದ್ದಾರೆ. ಅವರಿಗೆ ಹೆಚ್ಚು ಜನಪ್ರಿಯತೆ ಇರುವ ಹೊರತಾಗಿಯೂ ಸಿನಿಮಾಗಳು ಸದ್ದು ಮಾಡುತ್ತಿಲ್ಲ.
2022ರಲ್ಲಿ ಅವರ ನಟನೆಯ ಮೊದಲ ಸಿನಿಮಾ ‘ರಾಧೆ ಶ್ಯಾಮ್’ ತೆರೆಗೆ ಬಂತು. ರೊಮ್ಯಾಂಟಿಕ್ ಶೈಲಿಯಲ್ಲಿ ಈ ಸಿನಿಮಾ ಮೂಡಿಬಂತು. ಈ ಚಿತ್ರ ದೊಡ್ಡ ಫ್ಲಾಪ್ ಸಿನಿಮಾ ಎನಿಸಿಕೊಂಡಿತು. ದೊಡ್ಡ ಬಜೆಟ್ನಲ್ಲಿ ಸಿದ್ಧವಾದ ಈ ಚಿತ್ರ ನಿರ್ಮಾಪಕರಿಗೆ ನಷ್ಟ ತಂದಿತ್ತು. ರಾಮ್ ಚರಣ್ ನಟನೆಯ ‘ಆಚಾರ್ಯ’ ಚಿತ್ರಕ್ಕೂ ಪೂಜಾ ಹೆಗ್ಡೆ ನಾಯಕಿ ಆಗಿದ್ದರು. ಈ ಚಿತ್ರದಲ್ಲಿ ಕೆಲವೇ ದೃಶ್ಯಗಳಲ್ಲಿ ಅವರು ಬಂದು ಹೋದರು. ಈ ಸಿನಿಮಾ ಕೂಡ ದೊಡ್ಡ ಸೋಲನ್ನು ತಂದಿತ್ತು.
ದಳಪತಿ ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ ಕೂಡ 2022ರಲ್ಲಿ ರಿಲೀಸ್ ಆಯಿತು. ಈ ಚಿತ್ರ ‘ಕೆಜಿಎಫ್ 2’ ಎದುರು ರಿಲೀಸ್ ಆಗಿ ಸೋಲು ಕಂಡಿತು. 2022ರ ಕೊನೆಯ ಸಿನಿಮಾ ‘ಸರ್ಕಸ್’ ಕೂಡ ಸೋಲು ಕಂಡಿತು. ಒಂದೇ ವರ್ಷ ನಾಲ್ಕು ಚಿತ್ರಗಳು ನೆಲಕಚ್ಚಿದವು.
ಇದನ್ನೂ ಓದಿ: Pooja Hegde: ಸಲ್ಮಾನ್ ಖಾನ್ ಬರ್ತ್ಡೇ ಪಾರ್ಟಿಯಲ್ಲಿ ಪೂಜಾ ಹೆಗ್ಡೆ ಮಿಂಚಿಂಗ್; ಸಲ್ಲು ಜತೆ ಕರಾವಳಿ ಬ್ಯೂಟಿ ಕ್ಲೋಸ್
ಈ ವರ್ಷ ಪೂಜಾ ಹೆಗ್ಡೆ ಹಲವು ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಇದ್ದಾರೆ. ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಈ ಸಿನಿಮಾ ಏಪ್ರಿಲ್ 21ರಂದು ರಿಲೀಸ್ ಆಗುತ್ತಿದೆ. ಮಹೇಶ್ ಬಾಬು ಅವರ 28ನೇ ಚಿತ್ರಕ್ಕೆ ಪೂಜಾ ನಾಯಕಿ. ಈ ಎರಡು ಚಿತ್ರಗಳಿಂದ ಪೂಜಾ ಹೆಗ್ಡೆ ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ