AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SSMB28: ಮಹೇಶ್​ ಬಾಬು ಹೊಸ ಲುಕ್​ ವೈರಲ್​; ಶೂಟಿಂಗ್​ ಶುರು ಮಾಡಿದ ‘ಪ್ರಿನ್ಸ್​’

Mahesh Babu New Look: ಮಹೇಶ್​ ಬಾಬು ನಟಿಸುತ್ತಿರುವ 28ನೇ ಸಿನಿಮಾಗೆ ಶೂಟಿಂಗ್​ ಆರಂಭ ಆಗಿದೆ. ನಿರ್ದೇಶಕ ತ್ರಿವಿಕ್ರಮ್​ ಶ್ರೀನಿವಾಸ್​ ಜೊತೆ ಮಹೇಶ್​ ಬಾಬು ಅವರು ಕೈ ಜೋಡಿಸಿರುವುದರಿಂದ ನಿರೀಕ್ಷೆ ಜೋರಾಗಿದೆ.

SSMB28: ಮಹೇಶ್​ ಬಾಬು ಹೊಸ ಲುಕ್​ ವೈರಲ್​; ಶೂಟಿಂಗ್​ ಶುರು ಮಾಡಿದ ‘ಪ್ರಿನ್ಸ್​’
ಮಹೇಶ್ ಬಾಬು
TV9 Web
| Edited By: |

Updated on: Sep 12, 2022 | 2:34 PM

Share

ನಟ ಮಹೇಶ್​ ಬಾಬು (Mahesh Babu) ಅವರು ಪಕ್ಕಾ ಫ್ಯಾಮಿಲಿ ಮ್ಯಾನ್​. ಪ್ರತಿ ಸಿನಿಮಾ ರಿಲೀಸ್​ ಆದ ಬಳಿಕ ಅವರು ಕುಟುಂಬದವರ ಜೊತೆ ಪ್ರವಾಸ ಮಾಡುತ್ತಾರೆ.​ ವಿದೇಶಕ್ಕೆ ತೆರಳಿ ಎಂಜಾಯ್​ ಮಾಡುತ್ತಾರೆ. ‘ಸರ್ಕಾರು ವಾರಿ ಪಾಟ’ ರಿಲೀಸ್​ ಆದ ನಂತರವೂ ಅವರು ಈ ಪದ್ಧತಿ ಮುಂದುವರಿಸಿದ್ದರು. ಈಗ ಮಹೇಶ್​ ಬಾಬು ಮತ್ತೆ ಕೆಲಸದ ಮೂಡ್​ಗೆ ಮರಳಿದ್ದಾರೆ. ಹೊಸ ಚಿತ್ರಕ್ಕಾಗಿ ಶೂಟಿಂಗ್​ ಆರಂಭಿಸಿದ್ದಾರೆ. ಖ್ಯಾತ ನಿರ್ದೇಶಕ ತ್ರಿವಿಕ್ರಮ್​ ಶ್ರೀನಿವಾಸ್​ (Trivikram Srinivas) ಜೊತೆ ಅವರು ಸಿನಿಮಾ ಮಾಡುತ್ತಿದ್ದು, ಭಾರಿ ಹುಮ್ಮಸ್ಸಿನಿಂದ ಚಿತ್ರೀಕರಣ ಶುರು ಮಾಡಲಾಗಿದೆ. ಮೊದಲ ದಿನ ಶೂಟಿಂಗ್​ ಸೆಟ್​ನಿಂದ ಒಂದು ಫೋಟೋ ಹರಿಬಿಡಲಾಗಿದೆ. ಅದರ ಜೊತೆಗೆ ಮಹೇಶ್​ ಬಾಬು ಅವರು ಹೊಸ ಲುಕ್ (Mahesh Babu New Look)​ ಗಮನ ಸೆಳೆಯುತ್ತಿದೆ.

ಮಹೇಶ್​ ಬಾಬು ಅವರ ಪತ್ನಿ ನಮ್ರತಾ ಶಿರೋಡ್ಕರ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಮಹೇಶ್​ ಬಾಬು ಅವರ ಹೊಸ ಲುಕ್​ ನೋಡಿ ಫ್ಯಾನ್ಸ್​ ಥ್ರಿಲ್​ ಆಗಿದ್ದಾರೆ. ಎಲ್ಲ ಸಿನಿಮಾದಲ್ಲಿಯೂ ಅವರು ಸ್ಟೈಲಿಶ್​ ಆಗಿ ಕಾಣಿಸಿಕೊಳ್ಳುತ್ತಾರೆ. ಈ ಬಾರಿ ಕೂಡ ಅದು ಮುಂದುವರಿಯಲಿದೆ.

ಇದನ್ನೂ ಓದಿ
Image
SSMB 28: ಮಹೇಶ್​ ಬಾಬು ಸಿನಿಮಾದಲ್ಲಿ ನಟಿಸಲ್ಲ ಎಂದ ಸ್ಟಾರ್​ ನಟಿಯರು; ಕಾರಣ ಏನು?
Image
‘ನನ್ನ ಸಿನಿಮಾದಲ್ಲಿ ಅಂಥ ನಟರು ಇರೋದೇ ಬೇಡ’: ರಾಜಮೌಳಿಗೆ ಕಂಡೀಷನ್​ ಹಾಕಿದ ಮಹೇಶ್​ ಬಾಬು?
Image
Mahesh Babu: ಬಿಲ್ ಗೇಟ್ಸ್​ ಪಾಲಿನ ಸ್ಪೆಷಲ್​ ವ್ಯಕ್ತಿಗಳಲ್ಲಿ ಮಹೇಶ್​ ಬಾಬುಗೂ ಸಿಕ್ತು ಸ್ಥಾನ; ಭೇಟಿ ನಂತರದ ಬೆಳವಣಿಗೆ ಇದು
Image
Mahesh Babu: ಪತ್ನಿ ನಮ್ರತಾ ಜತೆ ಬಿಲ್​ ಗೇಟ್ಸ್​ ಭೇಟಿ ಮಾಡಿದ ಮಹೇಶ್​ ಬಾಬು; ಫೋಟೋ ವೈರಲ್​

ಇದು ಮಹೇಶ್​ ಬಾಬು ನಟಿಸುತ್ತಿರುವ 28ನೇ ಸಿನಿಮಾ. ಇದಕ್ಕೆ ಇನ್ನೂ ಶೀರ್ಷಿಕೆ ಫೈನಲ್​ ಆಗಿಲ್ಲ. ಸದ್ಯಕ್ಕೆ SSMB28 ಎಂದು ತಾತ್ಕಾಲಿಕವಾಗಿ ಕರೆಯಲಾಗುತ್ತಿದೆ. ನಿರ್ದೇಶಕ ತ್ರಿವಿಕ್ರಮ್​ ಶ್ರೀನಿವಾಸ್​ ಜೊತೆ ಮಹೇಶ್​ ಬಾಬು ಅವರು ಕೈ ಜೋಡಿಸಿರುವುದರಿಂದ ನಿರೀಕ್ಷೆ ಜೋರಾಗಿದೆ. ಇದು ಭರ್ಜರಿ ಸಾಹಸಮಯ ಸಿನಿಮಾ ಆಗಿರಲಿದೆ ಎಂದು ಹೇಳಲಾಗುತ್ತಿದೆ. ಬರೋಬ್ಬರಿ 12 ವರ್ಷಗಳ ಬಳಿಕ ಇವರಿಬ್ಬರು ಜೊತೆಯಾಗಿ ಸಿನಿಮಾ ಮಾಡುತ್ತಿದ್ದಾರೆ.

ಈ ಚಿತ್ರದ ಬಗ್ಗೆ ಸದ್ಯಕ್ಕೆ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಸರ್ಪ್ರೈಸ್​ ಕಾದಿರಲಿದೆ ಎಂದು ಚಿತ್ರತಂಡದವರು ಹೇಳಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಮಹೇಶ್​ ಬಾಬು ಅವರಿಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸಲಿದ್ದಾರೆ. ‘ಪ್ರಿನ್ಸ್’ ಜೊತೆ ತೆರೆ ಹಂಚಿಕೊಳ್ಳಲು ಅವರು ಕಾತುರರಾಗಿದ್ದಾರೆ.

‘ಸರ್ಕಾರು ವಾರಿ ಪಾಟ’ ಸಿನಿಮಾದಿಂದ ಮಹೇಶ್​ ಬಾಬು ಅವರಗೆ ಭರ್ಜರಿ ಗೆಲುವು ಸಿಕ್ಕಿದೆ. 28ನೇ ಸಿನಿಮಾ ಬಳಿಕ ಅವರು ರಾಜಮೌಳಿ ಜೊತೆ ಕೈ ಜೋಡಿಸಲಿದ್ದಾರೆ. ಆ ಸಿನಿಮಾದ ಕುರಿತು ಅನೇಕ ಅಂತೆ-ಕಂತೆಗಳು ಕೇಳಿಬರುತ್ತಿವೆ. ಡೇಟ್ಸ್​ ನೀಡುವ ವಿಚಾರದಲ್ಲಿ ಒಂದಷ್ಟು ಗೊಂದಲ ಮೂಡಿದೆ ಎಂದು ಹೇಳಲಾಗುತ್ತಿದೆ. ಆ ಕುರಿತು ಇನ್ನಷ್ಟೇ ಸ್ಪಷ್ಟ ಚಿತ್ರಣ ಸಿಗಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?