Mahesh Babu: ಬಿಲ್ ಗೇಟ್ಸ್​ ಪಾಲಿನ ಸ್ಪೆಷಲ್​ ವ್ಯಕ್ತಿಗಳಲ್ಲಿ ಮಹೇಶ್​ ಬಾಬುಗೂ ಸಿಕ್ತು ಸ್ಥಾನ; ಭೇಟಿ ನಂತರದ ಬೆಳವಣಿಗೆ ಇದು

Bill Gates | Mahesh Babu: ಕಾರಣ ಇಲ್ಲದೇ ಈ ಗಣ್ಯವ್ಯಕ್ತಿಗಳು ಭೇಟಿ ಆಗಿರಲು ಸಾಧ್ಯವೇ ಇಲ್ಲ. ಮಹೇಶ್​ ಬಾಬು ಮತ್ತು ಬಿಲ್​ ಗೇಟ್ಸ್​ ಸೇರಿ ದೊಡ್ಡದಾಗಿ ಏನನ್ನೋ ಪ್ಲಾನ್​ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

Mahesh Babu: ಬಿಲ್ ಗೇಟ್ಸ್​ ಪಾಲಿನ ಸ್ಪೆಷಲ್​ ವ್ಯಕ್ತಿಗಳಲ್ಲಿ ಮಹೇಶ್​ ಬಾಬುಗೂ ಸಿಕ್ತು ಸ್ಥಾನ; ಭೇಟಿ ನಂತರದ ಬೆಳವಣಿಗೆ ಇದು
ಮಹೇಶ್​ ಬಾಬು, ಬಿಲ್​ ಗೇಟ್ಸ್​, ನಮ್ರತಾ ಶಿರೋಡ್ಕರ್​
TV9kannada Web Team

| Edited By: Madan Kumar

Jul 01, 2022 | 7:45 AM

ನಟ ಮಹೇಶ್​ ಬಾಬು (Mahesh Babu) ಅವರಿಗೆ ಸೂಪರ್​ ಸ್ಟಾರ್​ ಪಟ್ಟ ಇದೆ. ದೇಶಾದ್ಯಂತ ಅವರಿಗೆ ಫ್ಯಾನ್ಸ್​ ಇದ್ದಾರೆ. ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲದೇ ಇನ್ನಿತರ ಭಾಷೆಯ ಪ್ರೇಕ್ಷಕರು ಕೂಡ ಅವರ ಸಿನಿಮಾಗಳನ್ನು ಇಷ್ಟಪಡುತ್ತಾರೆ. ವಿದೇಶದಲ್ಲೂ ಅವರು ಹವಾ ಮಾಡಿದ್ದಾರೆ. ಇತ್ತೀಚೆಗೆ ಅವರು ಬಿಲ್​ ಗೇಟ್ಸ್ (Bill Gates)​ ಭೇಟಿ ಮಾಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಜಗತ್ತಿನ ಶ್ರೀಮಂತ ಮತ್ತು ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾದ ಬಿಲ್​ ಗೇಟ್ಸ್​ ಅವರನ್ನು ಭೇಟಿ ಮಾಡುವುದು ಎಂದರೆ ಸಣ್ಣ ಮಾತಲ್ಲ. ಮಹೇಶ್​ ಬಾಬು ಅವರು ಸಡನ್​​ ಆಗಿ ಪತ್ನಿ ನಮ್ರತಾ ಶಿರೋಡ್ಕರ್​ (Namrata Shirodkar) ಜೊತೆ ಹೋಗಿ ಅವರನ್ನು ಮೀಟ್​ ಮಾಡಿದ್ದು ಯಾಕೆ ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ. ವಿಶೇಷ ಏನೆಂದರೆ ಬಿಲ್​ ಗೇಟ್ಸ್​ ಪಾಲಿನ ಸ್ಪೆಷಲ್​ ವ್ಯಕ್ತಿಗಳ ಪಟ್ಟಿಯಲ್ಲಿ ಈಗ ಮಹೇಶ್​ ಬಾಬು ಕೂಡ ಸೇರಿಕೊಂಡಿದ್ದಾರೆ.

ಹೌದು, ಬಿಲ್​ ಗೇಟ್ಸ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಒಂದಷ್ಟು ವ್ಯಕ್ತಿಗಳನ್ನು ಮತ್ತು ಸಂಸ್ಥೆಗಳನ್ನು ಫಾಲೋ ಮಾಡುತ್ತಾರೆ. ಆ ಪೈಕಿ ಈಗ ಮಹೇಶ್​ ಬಾಬು ಕೂಡ ಸೇರಿಕೊಂಡಿದ್ದಾರೆ. ಅಮೆರಿಕದಲ್ಲಿ ಇಬ್ಬರ ಭೇಟಿಯ ನಂತರದಲ್ಲಿ ಈ ಬೆಳವಣಿಗೆ ಆಗಿದೆ. ಟ್ವಿಟರ್​ ಮತ್ತು ಇನ್​ಸ್ಟಾಗ್ರಾಮ್​ನಲ್ಲಿ ಮಹೇಶ್​ ಬಾಬು ಅವರ ಖಾತೆಗಳನ್ನು ಬಿಲ್​ ಗೇಟ್ಸ್​ ಫಾಲೋ ಮಾಡಲು ಆರಂಭಿಸಿದ್ದಾರೆ. ಅವರು ಫಾಲೋ ಮಾಡುತ್ತಿರುವ ಏಕೈಕ ಟಾಲಿವುಡ್​ ಹೀರೋ ಮಹೇಶ್​ ಬಾಬು ಮಾತ್ರ ಎಂಬುದು ಫ್ಯಾನ್ಸ್​ ಪಾಲಿಗೆ ಹೆಮ್ಮೆ​ ತಂದಿದೆ.

ಕಾರಣ ಇಲ್ಲದೇ ಈ ಗಣ್ಯವ್ಯಕ್ತಿಗಳು ಭೇಟಿ ಆಗಿರಲು ಸಾಧ್ಯವೇ ಇಲ್ಲ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಮಹೇಶ್​ ಬಾಬು ಅವರು ದೊಡ್ಡದಾಗಿ ಏನನ್ನೋ ಪ್ಲಾನ್​ ಮಾಡುತ್ತಿದ್ದಾರೆ. ಆ ಕಾರಣದಿಂದಲೇ ಈ ಭೇಟಿ ನಡೆದಿದೆ. ಅವರ ಮುಂದಿನ ಚಿತ್ರಕ್ಕೆ ಬಿಲ್​ ಗೇಟ್ಸ್​ ಹಣ ಹೂಡುವ ಸಾಧ್ಯತೆ ಇರಬಹುದೇ ಎಂದು ಕೂಡ ಅಭಿಮಾನಿಗಳು ಊಹಿಸುತ್ತಿದ್ದಾರೆ. ಇದಕ್ಕೆಲ್ಲ ಸ್ವತಃ ಮಹೇಶ್​ ಬಾಬು ಕಡೆಯಿಂದಲೇ ಉತ್ತರ ಬರಬೇಕಿದೆ.

ಈ ವರ್ಷ ತೆರೆಕಂಡ ‘ಸರ್ಕಾರು ವಾರಿ ಪಾಟ’ ಸಿನಿಮಾ ಸೂಪರ್​ ಹಿಟ್​ ಆಯಿತು. ಆ ಚಿತ್ರದ ಯಶಸ್ಸಿನ ಬಳಿಕ ಕುಟುಂಬದ ಜೊತೆ ಮಹೇಶ್​ ಬಾಬು ಅವರು ವಿದೇಶಕ್ಕೆ ಪ್ರವಾಸ ತೆರಳಿದ್ದಾರೆ. ಪತ್ನಿ ನಮ್ರತಾ ಶಿರೋಡ್ಕರ್​ ಹಾಗೂ ಮಕ್ಕಳ ಜೊತೆ ಅವರು ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಈ ಗ್ಯಾಪ್​ನಲ್ಲೇ ಅವರು ಬಿಲ್​ ಗೇಟ್ಸ್​ ಭೇಟಿ ಮಾಡಿದ್ದಾರೆ. ಶೀಘ್ರದಲ್ಲೇ ಮುಂದಿನ ಸಿನಿಮಾ ಕೆಲಸಗಳಲ್ಲಿ ಮಹೇಶ್​ ಬಾಬು ತೊಡಗಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಮಹೇಶ್​ ಬಾಬು ಕುಟುಂಬದ ಫಾರಿನ್​ ಟ್ರಿಪ್​

ಇದನ್ನೂ ಓದಿ

ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ‘ಸರ್ಕಾರು ವಾರಿ ಪಾಟ’; ಮಹೇಶ್​ ಬಾಬು ಸಿನಿಮಾ ದಾಖಲೆ

Follow us on

Related Stories

Most Read Stories

Click on your DTH Provider to Add TV9 Kannada