Updated on:Dec 27, 2022 | 12:03 PM
ಸಲ್ಮಾನ್ ಖಾನ್ ಅವರು ಇಂದು (ಡಿಸೆಂಬರ್ 27) ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ಮಂದಿಗಾಗಿ ಡಿಸೆಂಬರ್ 26ರಂದು ರಾತ್ರಿ ಅದ್ದೂರಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಈ ಪಾರ್ಟಿಯಲ್ಲಿ ಪೂಜಾ ಹೆಗ್ಡೆ ಭಾಗಿ ಆಗಿದ್ದಾರೆ.
ಪೂಜಾ ಹೆಗ್ಡೆ ಅವರು ಸಲ್ಮಾನ್ ಖಾನ್ ಜತೆ ಕ್ಲೋಸ್ ಆಗಿದ್ದಾರೆ. ಇದಕ್ಕೆ ಕಾರಣ ‘ಕಿಸಿ ಕಾ ಭಾಯ್, ಕಿಸಿ ಕಿ ಜಾನ್’ ಸಿನಿಮಾ.
ಈ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿ. ಈ ಕಾರಣದಿಂದ ಸಲ್ಮಾನ್ ಖಾನ್ ಹಾಗೂ ಪೂಜಾ ಹೆಗ್ಡೆ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಬೆಳೆದಿದೆ.
ಸಲ್ಮಾನ್ ಖಾನ್ ಬರ್ತ್ಡೇಗೆ ಪೂಜಾ ಹೆಗ್ಡೆಗೂ ಆಹ್ವಾನ ಇತ್ತು. ಅವರು ಕೂಡ ಬರ್ತ್ಡೇ ಪಾರ್ಟಿಯಲ್ಲಿ ಮಿಂಚಿದ್ದಾರೆ.
ಪೂಜಾ ಹೆಗ್ಡೆ ಬರ್ತ್ಡೇ ಪಾರ್ಟಿಯಲ್ಲಿ ಕಾಣಿಸಿಕೊಂಡ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿವೆ.
Published On - 11:41 am, Tue, 27 December 22