ಶರ್ಮಿಲಾ ತಮ್ಮ ವೈಎಸ್ಆರ್ ತೆಲಂಗಾಣ ಪಾರ್ಟಿಯನ್ನು ಜುಲೈ 8ರಂದು ಲಾಂಚ್ ಮಾಡಲಿದ್ದಾರೆ

|

Updated on: Jul 05, 2021 | 10:02 PM

ಹೈದರಾಬಾದ್:  ತೆಲಂಗಾಣ ರಾಜಕೀಯ ವಲಯಗಳಲ್ಲಿ ಪ್ರಸ್ತುತವಾಗಿ ಅತಿಹೆಚ್ಚು ಚರ್ಚೆಯಲ್ಲಿರುವ ವ್ಯಕ್ತಿಯೆಂದರೆ ಅದು ನಿಸ್ಸಂದೇಹವಾಗಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ಮತ್ತು ಹಿಂದೆ ಇದೇ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದಿವಂಗತ ವೈ ಎಸ್ ರಾಜಶೇಖರ್ ರೆಡ್ಡಿ (ವೈಎಸ್ಆರ್) ಅವರ ಪುತ್ರಿ ವೈ ಎಸ್ ಶರ್ಮಿಲಾ. ತಮ್ಮದೇ ಆದ ಒಂದು ಪಕ್ಷವನ್ನು ರಚಿಸಲು ಅವರು ಕಳೆದ ಫೆಬ್ರುವರಿಯಿದ ಶ್ರಮಿಸುತ್ತಿದ್ದಾರೆ. ಆದರೆ ಪಕ್ಷವನ್ನು ವಿದ್ಯುಕ್ತವಾಗಿ ಯಾವಾಗ ಲಾಂಚ್ ಮಾಡಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇರಲಿಲ್ಲ. ಪಕ್ಷದ ಧ್ಯೇಯ […]

ಶರ್ಮಿಲಾ ತಮ್ಮ ವೈಎಸ್ಆರ್ ತೆಲಂಗಾಣ ಪಾರ್ಟಿಯನ್ನು ಜುಲೈ 8ರಂದು ಲಾಂಚ್ ಮಾಡಲಿದ್ದಾರೆ
ವೈ ಎಸ್​ ಶರ್ಮಿಲಾ
Follow us on

ಹೈದರಾಬಾದ್:  ತೆಲಂಗಾಣ ರಾಜಕೀಯ ವಲಯಗಳಲ್ಲಿ ಪ್ರಸ್ತುತವಾಗಿ ಅತಿಹೆಚ್ಚು ಚರ್ಚೆಯಲ್ಲಿರುವ ವ್ಯಕ್ತಿಯೆಂದರೆ ಅದು ನಿಸ್ಸಂದೇಹವಾಗಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ಮತ್ತು ಹಿಂದೆ ಇದೇ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದಿವಂಗತ ವೈ ಎಸ್ ರಾಜಶೇಖರ್ ರೆಡ್ಡಿ (ವೈಎಸ್ಆರ್) ಅವರ ಪುತ್ರಿ ವೈ ಎಸ್ ಶರ್ಮಿಲಾ. ತಮ್ಮದೇ ಆದ ಒಂದು ಪಕ್ಷವನ್ನು ರಚಿಸಲು ಅವರು ಕಳೆದ ಫೆಬ್ರುವರಿಯಿದ ಶ್ರಮಿಸುತ್ತಿದ್ದಾರೆ. ಆದರೆ ಪಕ್ಷವನ್ನು ವಿದ್ಯುಕ್ತವಾಗಿ ಯಾವಾಗ ಲಾಂಚ್ ಮಾಡಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇರಲಿಲ್ಲ. ಪಕ್ಷದ ಧ್ಯೇಯ ವಾಕ್ಯವನ್ನು ಅವರು ತಯಾರು ಮಾಡಿಕೊಂಡಿದ್ದಾರೆ. ರಾಜಣ್ಣನ ರಾಜ್ಯವನ್ನು ತೆಲಂಗಾಣದಲ್ಲಿ ಸ್ಥಾಪಿಸಲಾಗುವುದು ಎನ್ನುವುದು ಅವರ ಪಕ್ಷದ ಸ್ಲೋಗನ್ ಆಗಿದೆ. ಪಕ್ಷವನ್ನು ಲಾಂಚ್ ಮಾಡುವ ಮೊದಲು ವೈಎಸ್ಆರ್ ಅವರ ಅಭಿಮಾನಿಗಳಿಂದ ರಾಜ್ಯದೆಲ್ಲೆಡೆ ಹಲವಾರು ಸಭೆಗಳನ್ನು ನಡೆಸಲಾಗಿದೆ ಮತ್ತು ಜನಾಭಿಪ್ರಾಯವನ್ನು ಕಲೆಹಾಕಲಾಗಿದೆ. ಪಕ್ಷದ ಕಾರ್ಯಕರ್ತರು ರಾಜ್ಯದೆಲ್ಲೆಡೆ ನಿರುದ್ಯೋಗ ಸಮಸ್ಯೆ ಬಗ್ಗೆ ಚರ್ಚೆಗಳನ್ನು ಸಹ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ ವೈಎಸ್ಆರ್ ಜಯಂತಿ ಆಗಿರುವ ಜುಲೈ 8ರಂದು ಶರ್ಮಿಲಾ ಅವರು ಪಕ್ಷವನ್ನು ಲಾಂಚ್ ಮಾಡಲಿದ್ದಾರೆ. ಅಂದಹಾಗೆ ಅವರು ತಮ್ಮ ಪಕ್ಷಕ್ಕೆ ಇಟ್ಟಿರುವ ಹೆಸರು ವೈಎಸ್ಆರ್ ತೆಲಂಗಾಣ ಪಾರ್ಟಿ. ಪಕ್ಷದ ರೀತಿ-ನೀತಿಗಳು, ಅಜೆಂಡಾ ಮೊದಲಾದವುಳನ್ನೆಲ್ಲ ಶರ್ಮಿಲಾ ಅಂದೇ ಪ್ರಕಟಿಸಲಿದ್ದಾರೆಂದು ಮೂಲಗಳ ಮೂಲಕ ತಿಳಿದು ಬಂದಿದೆ. ಪಕ್ಷದ ಧ್ವಜವನ್ನು ಸಹ ಜುಲೈ 8 ರಂದು ಶರ್ಮಿಲಾ ಅನಾವರಣ ಮಾಡಲಿದ್ದಾರೆ.

ಪಕ್ಷದ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ಶರ್ಮಿಲಾ ಪಕ್ಷದ ಧ್ವಜದ ಶೇಕಡಾ 80ರಷ್ಟು ಭಾಗ ತಿಳಿನೀಲಿ ಮತ್ತು ಉಳಿದ ಭಾಗ ಕಡುನೀಲಿ ಬಣ್ಣದಿಂದ ಕೂಡಿದೆ. ಧ್ವಜದ ಮಧ್ಯೆ ಭಾಗದಲ್ಲಿ ತೆಲಂಗಾಣ ರಾಜ್ಯದ ಭೂಪಟವಿದ್ದು ಅದರಲ್ಲಿ ಅವರ ತಂದೆ ವೈಎಸ್ಆರ್ ಅವರ ಚಿತ್ರವನ್ನು ವಿನ್ಯಾಸಗೊಳಿಸಲಾಗಿದೆ.

ತೆಲಂಗಾಣದಲ್ಲಿ ನವರಂಗ ಪಕ್ಷಿಗೆ ಬಹಳ ಮಹತ್ವವಿದೆ. ವಿಜಯದಶಮಿ ಹಬ್ಬದಂದು ಈ ಪಕ್ಷಿಯನ್ನು ನೋಡುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಇದನ್ನು ಅದೃಷ್ಟ ಮತ್ತು ಯಶಸ್ಸಿನ ಸಂಕೇತವೆಂದು ನಂಬಲಾಗತ್ತದೆ. ದಸರಾ ಹಬ್ಬದಂದು ಈ ಪಕ್ಷಿಯನ್ನು ನೋಡಲು ಜನ ತಮ್ಮ ತಮ್ಮ ಹೊಲ-ಗದ್ದೆಗಳಿಗೆ ಹೋಗುತ್ತಾರೆ.

ಶರ್ಮಿಲಾ ಅವರು ಜುಲೈ 8 ರಂದು ಬೆಂಗಳೂರಿನಿಂದ ಹೊರಟು ಬೆಳಗ್ಗೆ 8 ಗಂಟೆ ಹೊತ್ತಿಗೆ ಇಡುಪ್ಪೂಜಾ ತಲುಪಿ ಅಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಅಲ್ಲಿಂದ ಒಂದು ವಿಶೇಷ ಹೆಲಿಕಾಪ್ಟರ್ನಲ್ಲಿ ಮಧ್ಯಾಹ್ನ ಸುಮಾರು 2 ಗಂಟೆಗೆ ಬೇಗಂ ಪೇಟ್ ವಿಮಾನ ನಿಲ್ದಾಣಕ್ಕೆ ಹೋಗಲಿದ್ದಾರೆ. ಅದಾದ ಮೇಲೆ ಅವರು 3 ಗಂಟೆಗೆ ಪಂಜಗುಟ್ಟ ಕೂಡು ರಸ್ತೆಯಲ್ಲಿರುವ ಅವರ ತಂದೆಯ ವಿಗ್ರಹಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ.

ನಂತರ ಅವರು ಜೆಆರ್ಸಿ ಕನ್ವೆನ್ಷಲ್ ಹಾಲ್ಗೆ ಹೋಗಿ ಸಾಯಂಕಾಲ 5 ಗಂಟೆಗೆ ಪಕ್ಷವನ್ನು ಅಧಿಕೃತವಾಗಿ ಲಾಂಚ್ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: YS Sharmila: ರಾಜಕೀಯ ವಿಶ್ಲೇಷಣೆ | ತೆಲಂಗಾಣದಲ್ಲಿ ಹೊಸ ಪಕ್ಷ ಕಟ್ಟುವ ನಿರ್ಧಾರ ಘೋಷಿಸಿದ ವೈ.ಎಸ್.ಶರ್ಮಿಳಾ; ಟಿಆರ್​ಎಸ್ ನಾಯಕರಲ್ಲಿ ಆತಂಕ