Sign In

By signing in or creating an account, you agree with Associated Broadcasting Company's Terms & Conditions and Privacy Policy.

YS Sharmila: ರಾಜಕೀಯ ವಿಶ್ಲೇಷಣೆ | ತೆಲಂಗಾಣದಲ್ಲಿ ಹೊಸ ಪಕ್ಷ ಕಟ್ಟುವ ನಿರ್ಧಾರ ಘೋಷಿಸಿದ ವೈ.ಎಸ್.ಶರ್ಮಿಳಾ; ಟಿಆರ್​ಎಸ್ ನಾಯಕರಲ್ಲಿ ಆತಂಕ

ಈ ಮಹತ್ವದ ತೀರ್ಮಾನದ ಹಿಂದಿನ ಕಾಣದ ಕೈ ಯಾವುದು ಎಂಬ ಪ್ರಶ್ನೆ ಹೈದರಾಬಾದ್​ನಲ್ಲಿ ಚರ್ಚೆಯಾಗುತ್ತಿದೆ. ತೆಲಂಗಾಣದಲ್ಲಿ ಸತತ 2ನೇ ಬಾರಿಗೆ ಅಧಿಕಾರಕ್ಕೆ ಬಂದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್) ಪಕ್ಷದ ನಾಯಕರ ಎದೆ ಡವಗುಟ್ಟುತ್ತಿದೆ.

YS Sharmila: ರಾಜಕೀಯ ವಿಶ್ಲೇಷಣೆ | ತೆಲಂಗಾಣದಲ್ಲಿ ಹೊಸ ಪಕ್ಷ ಕಟ್ಟುವ ನಿರ್ಧಾರ ಘೋಷಿಸಿದ ವೈ.ಎಸ್.ಶರ್ಮಿಳಾ; ಟಿಆರ್​ಎಸ್ ನಾಯಕರಲ್ಲಿ ಆತಂಕ
ಹೈದರಾಬಾದ್​ನಲ್ಲಿ ಮಂಗಳವಾರ ವೈ.ಎಸ್.ಶರ್ಮಿಳಾ ರೆಡ್ಡಿ ಅಭಿಮಾನಿಗಳತ್ತ ಕೈಬೀಸಿದರು (ಎಡಚಿತ್ರ). ತಂದೆಯ ಪುತ್ಥಳಿಗೆ ನಮಿಸಿದರು.
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Feb 10, 2021 | 2:41 PM

ಹೈದರಾಬಾದ್​: ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗಿದ್ದ ವೈ.ಎಸ್.ರಾಜಶೇಖರ್ ರೆಡ್ಡಿ ಪುತ್ರಿ ವೈ.ಎಸ್ ಶರ್ಮಿಳಾ ತೆಲಂಗಾಣ ಸೇರಿದಂತೆ ದೇಶದಾದ್ಯಂತ ಸಂಚಲನ ಮೂಡಿಸುವಂತಹ ಮಹತ್ವದ ನಿರ್ಧಾರವನ್ನು ಮಂಗಳವಾರ (ಫೆ.9) ಘೋಷಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ವೈಎಸ್​ಆರ್ ಕಾಂಗ್ರೆಸ್​ ಪಕ್ಷ ಕಟ್ಟಲು 3 ಸಾವಿರ ಕಿಲೋಮೀಟರ್​ಗೂ ಅಧಿಕ ಪಾದಯಾತ್ರೆ ನಡೆಸಿದ್ದ ಶರ್ಮಿಳಾ, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಇಂದು ಹೊರಬಿದ್ದಿರುವ ಅವರ ಹೊಸ ಪಕ್ಷದ ಘೋಷಣೆ ಎಲ್ಲರ ಗಮನ ಸೆಳೆದಿದೆ.

ಶರ್ಮಿಳಾ ನಿರ್ಧಾರವನ್ನು ಅಭಿಮಾನಿಗಳು ಮನದುಂಬಿ ಸ್ವಾಗತಿಸಿದ್ದಾರೆ. ಹೈದರಾಬಾದ್​ನ ಲೋಟಸ್​ ಪಾಂಡ ಪ್ರದೇಶದಲ್ಲಿರುವ ಅವರ ಮನೆಯ ಬಳಿ ಮಂಗಳವಾರ ಭಾರಿ ಜನಸ್ತೋಮ ಕಂಡುಬಂತು. ಜೈ ತೆಲಂಗಾಣ, ಜೈ ವೈ.ಎಸ್.ರಾಜಶೇಖರ್ ರೆಡ್ಡಿ, ಜೈ ಶರ್ಮಿಲಮ್ಮ ಘೋಷಣೆಗಳು ಮೊಳಗಿದವು. ಬಡವರ ಕಣ್ಣೀರು ತಿಳಿದ ವೈಎಸ್​ಆರ್ ಕುಟುಂಬಕ್ಕೆ ಬಡವರ ಬದುಕು ಬದಲಿಸೋದು ಹೇಗೆ ಅಂತ ಗೊತ್ತು ಎಂಬ ಫ್ಲೆಕ್ಸ್​ಗಳು ರಾರಾಜಿಸಿದವು.

ಆಂಧ್ರಪ್ರದೇಶದಲ್ಲಿ ವೈಎಸ್ಆರ್ ಕಾಂಗ್ರೆಸ್​ ಪಕ್ಷವನ್ನು ಕಟ್ಟಿದ ನಂತರ ಆ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ವೈ.ಎಸ್. ಶರ್ಮಿಳಾ ಮಹತ್ವದ ಪಾತ್ರ ವಹಿಸಿದ್ದರು. ರಾಜಶೇಖರ್ ರೆಡ್ಡಿ ಪುತ್ರ ಜಗನ್ ಮೋಹನ್ ರೆಡ್ಡಿ ಜೈಲಿಗೆ ಹೋದ ನಂತರ ತಾಯಿ ವಿಜಯಮ್ಮ ಜೊತೆಗೆ ಶರ್ಮಿಳಾ ಪಕ್ಷದ ಪ್ರಚಾರದ ಹೊಣೆ ಹೊತ್ತುಕೊಂಡಿದ್ದರು.

YS Sharmila

ಆಂಧ್ರ ವಿಧಾನಸಭೆ ಚುನಾವಣೆ ಸಂದರ್ಭ ಹೀಗಿತ್ತು ಶರ್ಮಿಳಾ ಪ್ರಚಾರ ವೈಖರಿ

2012ರಲ್ಲಿ ಸುಮಾರು 3,000 ಕಿಲೋಮೀಟರ್ ಪಾದಯಾತ್ರೆ ನಡೆಸಿದ್ದ ಶರ್ಮಿಳಾ ಆಂಧ್ರಪ್ರದೇಶದಲ್ಲಿ ಸಂಚಲನಕ್ಕೆ ಕಾರಣವಾಗಿದ್ದರು. ವೈಸಿಪಿ ಪಕ್ಷ ಆಂಧ್ರಪ್ರದೇಶದಲ್ಲಿ ಅಧಿಕಾರಕ್ಕೆ ಬರುವಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು. ಇದೀಗ ತೆಲಂಗಾಣಕ್ಕಾಗಿ ನೂತನ ಪಕ್ಷ ಸ್ಥಾಪಿಸಲು ಮುಂದಾಗಿದ್ದಾರೆ. ಹೈದರಾಬಾದ್​ನಲ್ಲಿ ಮಂಗಳವಾರ ಈ ಬಗ್ಗೆ ಹೇಳಿಕೆ ಹೊರಬಿದ್ದಿದೆ. ತೆಲಂಗಾಣದಾದ್ಯಂತ ಇರುವ ರಾಜಶೇಖರ ರೆಡ್ಡಿ ಅವರ ಅಭಿಮಾನಿ ಒಕ್ಕೂಟಗಳ ನಾಯಕರೊಂದಿಗೆ ಚರ್ಚಿಸಿದ ನಂತರ ನೂತನ ಪಕ್ಷ ಅಸ್ಥಿತ್ವಕ್ಕೆ ಬರಲಿದೆ ಎನ್ನಲಾಗಿದೆ.

ಹೈದರಾಬಾದ್, ನಲಗೊಂಡ ಪ್ರದೇಶದ ನಾಯಕರೊಂದಿಗೆ ಮಂಗಳವಾರ ಸಭೆ ನಡೆಯಿತು. ಮುಂದಿನ ದಿನಗಳಲ್ಲಿ ಇತರೆ ಜಿಲ್ಲೆಗಳ ನಾಯಕರೊಂದಿಗೂ ಶರ್ಮಿಳಾ ಸಭೆ ನಡೆಸಲಿದ್ದಾರೆ.

ಹೈದರಾಬಾದ್​ನಲ್ಲಿ ಮಂಗಳವಾರ ಹೊರಬಿದ್ದ ಈ ದಿಢೀರ್ ನಿರ್ಧಾರವು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಇದು ಶರ್ಮಿಳಾರ ಸ್ವಯಂ ತೀರ್ಮಾನವೋ? ಅಥವಾ ಈ ನಿರ್ಧಾರದ ಹಿಂದೆ ಬೇರೆ ಯಾರಾದರೂ ಇದ್ದಾರೆಯೋ? ಈ ಮಹತ್ವದ ತೀರ್ಮಾನದ ಹಿಂದಿನ ಕಾಣದ ಕೈ ಯಾವುದು ಎಂಬ ಪ್ರಶ್ನೆಗಳೂ ಮುತ್ತಿನನಗರಿಯಲ್ಲಿ ಚರ್ಚೆಯಾಗುತ್ತಿವೆ. ತೆಲಂಗಾಣದಲ್ಲಿ ಸತತ 2ನೇ ಬಾರಿಗೆ ಅಧಿಕಾರಕ್ಕೆ ಬಂದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್) ಪಕ್ಷದ ನಾಯಕರ ಎದೆ ಡವಗುಟ್ಟುತ್ತಿದೆ.

Sasikala ವ್ಯಕ್ತಿ-ವ್ಯಕ್ತಿತ್ವ | ಮುಖ್ಯಮಂತ್ರಿ ಗಾದಿ ಸನಿಹದಲ್ಲಿದ್ದಾಗ ಸೆರೆಮನೆಗೆ ಬಂದ ಶಶಿಕಲಾ ಸವೆಸಿದ ಹಾದಿ ಕಲ್ಲುಮುಳ್ಳಿನದು

Published On - 10:13 pm, Tue, 9 February 21

ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ
ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ
ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?