ಚೆನ್ನೈ: ತಮಿಳುನಾಡಿನ ತಿರುಚಿನಾಪಳ್ಳಿಯ ಪ್ರತಿಷ್ಠಿತ ಜವಳಿ ಮಳಿಗೆಯೊಂದಕ್ಕೆ ಭೇಟಿ ಕೊಡುವ ಗ್ರಾಹಕರ ಆರೋಗ್ಯದ ಹಿತಾಸಕ್ತಿಗಾಗಿ ಅಂಗಡಿ ಮಾಲೀಕರು ಒಂದು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಜಫೀರಾ ಮಳಿಗೆಗೆ ಬರುವ ಎಲ್ಲಾ ಗ್ರಾಹಕರ ಥರ್ಮಲ್ ಸ್ಕ್ರೀನಿಂಗ್ ಮಾಡುವುದರ ಜೊತೆ ಅವರಿಗೆ ಸ್ಯಾನಿಟೈಸರ್ ಸಹ ನೀಡುತ್ತಾಳೆ. ಅಷ್ಟೇ ಅಲ್ಲ, ಅಂಗಡಿಗೆ ಬಂದಿರುವ ಎಲ್ಲಾ ಗ್ರಾಹಕರ ಮೇಲೆ ನಿಗಾ ವಹಿಸುವುದರ ಜೊತೆಗೆ ಅವರು ಮಾಸ್ಕ್ ಧರಿಸಿದ್ದಾರಾ ಎಂದು ಚೆಕ್ ಸಹ ಮಾಡುತ್ತಾಳೆ.
ಲಾಕ್ಡೌನ್ ಪ್ರಾರಂಭವಾದ ಸಮಯದಿಂದ ಕೊರೊನಾ ವಾರಿಯರ್ಸ್ರ ಸಹಾಯಕ್ಕಾಗಿ ನಾವು ಇಂಥ ರೋಬೋಗಳನ್ನು ತಯಾರಿಸುತ್ತಿದ್ದೇವೆ. ಅದರಲ್ಲೆ ಜಫೀರಾ ಸಹ ಒಂದು.
ಇದು ಎಲ್ಲಾ ಕಾರ್ಯಗಳ ಜೊತೆಗೆ, ಅಂಗಡಿ ಮಾಲೀಕರಿಗೆ ಪ್ರತಿದಿನ ಮಳಿಗೆಗೆ ಭೇಟಿ ಕೊಟ್ಟ ಗ್ರಾಹಕರ ಸಂಖ್ಯೆ ಮತ್ತ ಇನ್ನಿತ್ತರ ಮಾಹಿತಿಯನ್ನು ಈ-ಮೇಲ್ ಮುಖಾಂತರ ರವಾನಿಸುವ ವ್ಯವಸ್ಥೆ ಮಾಡಿದ್ದೇವೆ ಎಂದು ಜಫೀರಾ ರೋಬೋವನ್ನು ವಿನ್ಯಾಸಗೊಳಿಸಿರುವ ಆಶಿಕ್ ರಹಮಾನ್ ತಿಳಿಸಿದ್ದಾರೆ.
Published On - 12:01 pm, Thu, 27 August 20