Zika Virus: ಪುಣೆಯಲ್ಲಿ ಝಿಕಾ ವೈರಸ್​ನಿಂದ 4 ಮಂದಿ ಸಾವು, ಜೂನ್​ನಿಂದ ಇಲ್ಲಿಯವರೆಗೆ 66 ಪ್ರಕರಣಗಳು ದೃಢ

|

Updated on: Aug 07, 2024 | 9:54 AM

ಡೆಂಗ್ಯೂ ಆಯ್ತು ಇದೀಗ ಝಿಕಾ ವೈರಸ್ ಭಯ ಹೆಚ್ಚಾಗಿದೆ, ಪುಣೆಯಲ್ಲಿ ಝಿಕಾ ವೈರಸ್​ನಿಂದ 4 ಮಂದಿ ಸಾವನ್ನಪ್ಪಿದ್ದಾರೆ. ಜೂನ್​ನಿಂದ ಇಲ್ಲಿಯವರೆಗೆ 66 ಪ್ರಕರಣಗಳು ಪತ್ತೆಯಾಗಿವೆ ಅದರಲ್ಲಿ 26 ಮಂದಿ ಗರ್ಭಿಣಿಯರಿದ್ದಾರೆ.

Zika Virus: ಪುಣೆಯಲ್ಲಿ ಝಿಕಾ ವೈರಸ್​ನಿಂದ 4 ಮಂದಿ ಸಾವು, ಜೂನ್​ನಿಂದ ಇಲ್ಲಿಯವರೆಗೆ 66 ಪ್ರಕರಣಗಳು ದೃಢ
ಝಿಕಾ ವೈರಸ್
Follow us on

ಮಹಾರಾಷ್ಟ್ರದ ಪುಣೆಯಲ್ಲಿ ಝಿಕಾ ವೈರಸ್​ನಿಂದ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಜೂನ್​ನಿಂದ ಇಲ್ಲಿಯವವರೆಗೆ 66 ಪ್ರಕರಣಗಳು ದೃಢಪಟ್ಟಿದ್ದು, ಅವುಗಳಲ್ಲಿ 26 ಮಂದಿ ಗರ್ಭಣಿಯರಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೃತಪಟ್ಟವರೆಲ್ಲಾ 68-78ರ ಆಸುಪಾಸಿನವರು ಅವರ ಸಾವಿಗೆ ಝಿಕಾ ವೈರಸ್ ಮಾತ್ರ ಕಾರಣವಲ್ಲ, ಹಲವು ಆರೋಗ್ಯ ಸಮಸ್ಯೆಗಳು ಮೊದಲೇ ಇದ್ದವು ಎಂಬುದು ತಿಳಿದುಬಂದಿದೆ.

ಸೋಂಕಿತರಲ್ಲಿ 26 ಮಂದಿ ಗರ್ಭಿಣಿಯರರಿರುವ ಕಾರಣ ಸೂಕ್ಷ್ಮವಾಗಿ ಅವರನ್ನು ಗಮನಿಸಲಾಗುತ್ತಿದೆ. ಹೆಚ್ಚಿನವರ ಆರೋಗ್ಯ ಉತ್ತಮವಾಗಿದೆ.
ಪುಣೆಯಲ್ಲಿ ಜುಲೈ 1 ರಂದು ಝಿಕಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಎರಂಡ್ವಾನೆಯಲ್ಲಿ ವಾಸಿಸುತ್ತಿರುವ ಇಬ್ಬರು ಗರ್ಭಿಣಿಯರಿಗೆ ಸೋಂಕು ತಗುಲಿದೆ.

ಈ ವೈರಸ್ ಅನ್ನು ಮೊದಲು 1947 ರಲ್ಲಿ ಉಗಾಂಡಾದಲ್ಲಿ ಗುರುತಿಸಲಾಯಿತು. ಝಿಕಾ ವೈರಸ್ ಸೋಂಕು ಸೊಳ್ಳೆಯಿಂದ ಹರಡುವ ವೈರಲ್ ಸೋಂಕಾಗಿದ್ದು, ಇದು ಸಾಮಾನ್ಯವಾಗಿ ಯಾವುದೇ ಗಂಭೀರ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಕೆಲವು ರೋಗಿಗಳು ಜ್ವರ, ಕೀಲು ನೋವು, ದೇಹದ ನೋವು, ತಲೆನೋವು, ಕೆಂಪು ಕಣ್ಣುಗಳು, ವಾಂತಿ, ಅಸ್ವಸ್ಥತೆ, ಜ್ವರ ಮತ್ತು ದೇಹದ ದದ್ದುಗಳನ್ನು ಅನುಭವಿಸುತ್ತಾರೆ. ಝಿಕಾ ರೋಗಿ ಪತ್ತೆಯಾದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯೂ ಎಚ್ಚೆತ್ತುಕೊಂಡಿದೆ.

ಮತ್ತಷ್ಟು ಓದಿ: Zika Virus: ಮಹಾರಾಷ್ಟ್ರದಲ್ಲಿ ಝಿಕಾ ವೈರಸ್​ ಹೆಚ್ಚಳ, ಎಲ್ಲಾ ರಾಜ್ಯಗಳಿಗೆ ಕೇಂದ್ರದ ಸಲಹೆ

ಗರ್ಭಿಣಿಯರಲ್ಲಿ ಝಿಕಾ ವೈರಸ್ ಮೈಕ್ರೊಸೆಫಾಲಿಯನ್ನು ಉಂಟುಮಾಡಬಹುದು, ಇದರಿಂದ ಮೆದುಳಿನ ಬೆಳವಣಿಗೆಯಲ್ಲಿ ಕುಂಠಿತ ಉಂಟಾಗಲಿದೆ. ಹವಾಮಾನ ವೈಪರೀತ್ಯದಿಂದ ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ಸೇರಿದಂತೆ ಇತರೆ ರೋಗಗಳೂ ಹೆಚ್ಚಾಗತೊಡಗಿವೆ.

ಇದನ್ನು ತಡೆಯುವುದು ಹೇಗೆ? ಮನೆಗಳಲ್ಲಿ ಸೊಳ್ಳೆಗಳನ್ನು ತಪ್ಪಿಸಿ, ಸ್ವಚ್ಛವಾಗಿಡಿ, ಸೊಳ್ಳೆ ಪರದೆಗಳನ್ನು ಬಳಸಿ ಹೆಚ್ಚು ಕಾಲ ನೀರು ನಿಲ್ಲದಂತೆ ನೋಡಿಕೊಳ್ಳಿ ಎರಡು ದಿನಗಳ ಕಾಲ ಜ್ವರ ಮುಂದುವರೆದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.ಮನೆಯ ಒಳಾಂಗಣ ಹಾಗೂ ಹೊರಾಂಗಣವನ್ನು ಸ್ವಚ್ಚವಾಗಿಡಬೇಕು, ನೀರು ಸಂಗ್ರಹಣಾ ಪರಿಕರಗಳನ್ನು ವಾರಕ್ಕೊಮ್ಮೆ ಸ್ವಚ್ಚಗೊಳಿಸುವುದು ಹಾಗೂ ಮುಚ್ಚಳದಿಂದ ಮುಚ್ಚಬೇಕು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ