Vishwakarma: ಮಹಾನ್ ವಾಸ್ತುಶಿಲ್ಪಿ ವಿಶ್ವಕರ್ಮ ಬಗ್ಗೆ ನಿಮಗೆಷ್ಟು ಗೊತ್ತು!?

Vishwakarma Jayanti 2023: ಕಲೆಗೆ ತಕ್ಕ ಬೆಲೆ ಸಿಗಬೇಕು ಎನ್ನುವುದಾದರೆ ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗದೆ ಅರ್ಥಪೂರ್ಣ ಅನುಸರಣೆಯಾಗಬೇಕು. ಯಾವುದೇ ವ್ಯಕ್ತಿ ಅಥವಾ ವಿಚಾರವನ್ನು ಸಂಪೂರ್ಣವಾಗಿ ತಿಳಿದುಕೊಂಡಾಗ ಮಾತ್ರ ಅದರ ಬಗ್ಗೆ ಒಂದು ಗೌರವ ಹಾಗೂ ಅಭಿಮಾನ ಬರಲು ಸಾಧ್ಯ. ಈ ನಿಟ್ಟಿನಲ್ಲಿ ವಿಶ್ವಕರ್ಮ ಬಗ್ಗೆ ತಿಳಿಸಿಕೊಡುವ ಒಂದು ಪ್ರಯತ್ನ ಇಲ್ಲಿದೆ. ಮೊನ್ನೆ ಭಾನುವಾರ ಬ್ರಹ್ಮಾಂಡದ ವಾಸ್ತುಶಿಲ್ಪಿ ಭಗವಾನ್ ವಿಶ್ವಕರ್ಮ ಅವರ ಜನ್ಮ ದಿನಾಚರಣೆ ನೆರವೇರಿತು.

Vishwakarma: ಮಹಾನ್ ವಾಸ್ತುಶಿಲ್ಪಿ ವಿಶ್ವಕರ್ಮ ಬಗ್ಗೆ ನಿಮಗೆಷ್ಟು ಗೊತ್ತು!?
ವಾಸ್ತುಶಿಲ್ಪಿ ವಿಶ್ವಕರ್ಮ ಬಗ್ಗೆ ನಿಮಗೆಷ್ಟು ಗೊತ್ತು!?
Follow us
ರಾಮ್​, ಮೈಸೂರು
| Updated By: ಸಾಧು ಶ್ರೀನಾಥ್​

Updated on: Sep 20, 2023 | 2:58 PM

ಹಿತ್ತಲ ಗಿಡ ಮದ್ದಲ್ಲ ಅನ್ನೋ ಮಾತಿಗೆ ಅತ್ಯಂತ ಸೂಕ್ತವಾಗಿರೋದು ನಮ್ಮ ವಿಶ್ವಕರ್ಮರು. ಜಯಂತಿ ದಿನ ನೆನಪಿಸಿಕೊಂಡು ಗುಣಗಾನ ಮಾಡುವವರು ಜಯಂತಿ ಮುಗಿಯುತ್ತಿದ್ದಂತೆ ಮರೆತು ಮುಂದಡಿಯಿಡೋದು ವಿಪರ್ಯಾಸವಲ್ಲದೆ ಮತ್ತೀನೇನು. ಇದು ನಿಲ್ಲಬೇಕು ಕಲೆಗೆ ತಕ್ಕ ಬೆಲೆ ಸಿಗಬೇಕು ಎನ್ನುವುದಾದರೆ ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗದೆ ಅರ್ಥಪೂರ್ಣ ಅನುಸರಣೆಯಾಗಬೇಕು. ಯಾವುದೇ ವಿಚಾರವನ್ನು ಸಂಪೂರ್ಣವಾಗಿ ತಿಳಿದುಕೊಂಡಾಗ ಮಾತ್ರ ಅದರ ಬಗ್ಗೆ ಒಂದು ಗೌರವ ಹಾಗೂ ಅಭಿಮಾನ ಬರಲು ಸಾಧ್ಯ ಈ ನಿಟ್ಟಿನಲ್ಲಿ ವಿಶ್ವಕರ್ಮ ಬಗ್ಗೆ ತಿಳಿಸಿಕೊಡುವ ಒಂದು ಸಣ್ಣ ಪ್ರಯತ್ನ ಈ ಲೇಖಕರದು.

ಪುರಾಣಗಳಲ್ಲಿ ವಿಶ್ವಕರ್ಮ

ವಿಶ್ವಕರ್ಮ ಮೂಲತಃ ಸಂಸ್ಕೃತದಿಂದ ಬಂದ ಪದ. ಸಂಸ್ಕೃತದಲ್ಲಿ ವಿಶ್ವಕರ್ಮ ಎಂದರೆ ಎಲ್ಲವನ್ನು ಸಾಧಿಸುವವನು ಎಂದರ್ಥ. ಎಲ್ಲದರ ಕರ್ತೃ ಅಂತಲೂ ಅರ್ಥೈಸಬಹುದು. ಋಗ್ವೇದದ ಪ್ರಕಾರ ಸೃಷ್ಟಿ ದೇವತೆಯ ಅಮೂರ್ತ ರೂಪ. ಈ ರೂಪವವನ್ನು ನೀಡಿದ್ದು ವಿಶ್ವಕರ್ಮನ ಮೂಲಕ. ಅಂಗೀರಸ ಮತ್ತು ವಾಸ್ತುದೇವನ ಪುತ್ರ ವಿಶ್ವಕರ್ಮ. ಬ್ರಹ್ಮ ದೇವರು ವಿಶ್ವಕರ್ಮನನ್ನು ಭೂಮಿಯ ಮೇಲೆ ಸೃಷ್ಟಿಸಿದರು ಎನ್ನುವ ಉಲ್ಲೇಖವಿದೆ.

ವಿಶ್ವಕರ್ಮ ಭೂಮಿಯಲ್ಲಿ ಅರಮನೆಗಳನ್ನು, ಮಹಲುಗಳನ್ನು, ವಾಹನಗಳನ್ನು, ಆಯುಧಗಳನ್ನು ಸೇರಿದಂತೆ ಇನ್ನಿತರ ತಾಂತ್ರಿಕ ವಸ್ತುಗಳನ್ನು ನಿರ್ಮಿಸಿದನು ಅನ್ನೋದು ನಂಬಿಕೆ. ಇದರ ಜೊತೆಗೆ ವಿಶ್ವಕರ್ಮನು ಇಂದ್ರಪುರಿ, ದ್ವಾರಕಾ, ಹಸ್ತಿನಾಪುರ, ಸ್ವರ್ಗಲೋಕ, ಲಂಕಾ ಇತ್ಯಾದಿಗಳನ್ನು ನಿರ್ಮಿಸಿದ್ದಾನೆ. ಆದ್ದರಿಂದ ಪ್ರತಿ ವರ್ಷ ವಿಶ್ವಕರ್ಮ ಜನ್ಮ ವಾರ್ಷಿಕೋತ್ಸವದಂದು ಉಪಕರಣಗಳನ್ನು, ಯಂತ್ರಗಳನ್ನು ಮತ್ತು ಕೈಗಾರಿಕಾ ಘಟಕಗಳನ್ನು ಪೂಜಿಸಲಾಗುತ್ತದೆ. ಜಗನ್ನಾಥ ಪುರಿಯಲ್ಲಿ ಜಗನ್ನಾಥ ದೇವಾಲಯದ ನಿರ್ಮಾಣ, ಪುಷ್ಪಕ ವಿಮಾನ ನಿರ್ಮಾಣ, ಎಲ್ಲಾ ದೇವತೆಗಳ ಅರಮನೆಗಳ ನಿರ್ಮಾಣ, ಕರ್ಣ ಕುಂಡಲಿ, ವಿಷ್ಣುವಿನ ಸುದರ್ಶನ ಚಕ್ರ, ಭಗವಾನ್‌ ಶಂಕರನ ತ್ರಿಶೂಲ, ಇತ್ಯಾದಿಗಳನ್ನು ವಿಶ್ವಕರ್ಮ ನಿರ್ಮಿಸಿದ್ದಾನೆ‌.

ಮಹಾನ್ ವಾಸ್ತುಶಿಲ್ಪಿ ವಿಶ್ವಕರ್ಮ -ಪುರಾಣದಿಂದ ಮುಂದುವರಿದ ವಿಶ್ವಕರ್ಮ ಪರಂಪರೆ

ವಿಶ್ವಕರ್ಮನಿಗೆ ಮನು, ಮಾಯಾ, ತ್ವಷ್ಟ, ಶಿಲ್ಪಿ ಮತ್ತು ದೈವಜ್ಞ ಎಂಬ ಐದು ಗಂಡು ಮಕ್ಕಳಿದ್ದರು. ಈ ಐವರು ವಿವಿಧ ಶೈಲಿಯ ವಾಸ್ತುಶಿಲ್ಪದ ಕರಕುಶಲತೆಯನ್ನು ಚೆನ್ನಾಗಿ ತಿಳಿದಿದ್ದರು. ಕಬ್ಬಿಣದಲ್ಲಿ ಮನು, ಮರದಲ್ಲಿ ಮಾಯಾ, ಕಂಚು ಮತ್ತು ತಾಮ್ರದಲ್ಲಿ ತಷ್ಟ, ಕಲ್ಲಿನ ಶಿಲೆ ಶಿಲ್ಪಿ ಮತ್ತು ಚಿನ್ನ ಮತ್ತು ಬೆಳ್ಳಿಯಲ್ಲಿ ದೈವ ಪರಿಣಿತಿಯನ್ನು ಪಡೆದಿದ್ದರು. ರಾಜ ಪ್ರಿಯವ್ರತನು ವಿಶ್ವಕರ್ಮನ ಮಗಳಾದ ಬಹಿಷ್ಮೃತಿಯನ್ನು ಮದುವೆಯಾದನು. ಈ ದಂಪತಿಗಳಿಗೆ ಅಗ್ನಿಧ್ರ, ಯಜ್ಞಬಾಹು, ಮೇಧಾತಿಥಿ ಸೇರಿದಂತೆ ಇನ್ನಿತರ 10 ಮಕ್ಕಳು ಜನಿಸಿದರು. ಪ್ರಿಯವ್ರತನ ಎರಡನೆಯ ಹೆಂಡತಿಯಿಂದ ಉತ್ತಮ, ತಾಮಸ ಮತ್ತು ರೈವತ ಈ ಮೂವರು ಗಂಡು ಮಕ್ಕಳು ಜನಿಸಿದರು, ಅವರು ತಮ್ಮ ಹೆಸರಿನೊಂದಿಗೆ ಮನ್ವಂತರಗಳ ಆಡಳಿತಗಾರರಾದರು. ಮಹಾರಾಜ ಪ್ರಿಯವ್ರತನ 10 ಪುತ್ರರಲ್ಲಿ ಕವಿ, ಮಹಾವೀರ ಮತ್ತು ಸಾವನ ಈ ಮೂವರು ನೈಷ್ಠಿಕ ಬ್ರಹ್ಮಚಾರಿಗಳಾಗಿದ್ದರು ಮತ್ತು ಅವರು ಸನ್ಯಾಸಿಗಳ ಧರ್ಮವನ್ನು ಸ್ವೀಕರಿಸಿದರು.

Also Read: ವಿಶ್ವಕರ್ಮ ಬ್ರಹ್ಮಾಂಡ ಶಿಲ್ಪಿ, ಪ್ರಧಾನಿ ಮೋದಿ ನವ ಭಾರತದ ಶಿಲ್ಪಿ: ಯೋಗಿ ಆದಿತ್ಯನಾಥ್

ವಿಶ್ವಕರ್ಮರ ಈ ಕಾಯಕವನ್ನು ಇಂದಿಗೂ ಅವರ ವಂಶಸ್ಥರು ಮುಂದುವರಿಕೊಂಡು ಬರುತ್ತಿದ್ದಾರೆ. ಅದು ಅವರ ವಂಶಸ್ಥರ ವೃತ್ತಿಯಾಗಿದ್ದರು ಸಹಾ ಅವರಿಗೆ ಎಂದು ಲಾಭ ಮುಖ್ಯ ಧ್ಯೇಯೋದ್ದೇಶವಾಗಿರಲಿಲ್ಲ. ಈಗಲೂ ಆಗಿಲ್ಲ. ವಿಶ್ವಕರ್ಮರಿಗೆ ಇದು ತಮ್ಮ ಪೂರ್ವಜರಿಂದ ದೈವದತ್ತವಾಗಿ ರಕ್ತಗತವಾಗಿ ಬಂದ ಕಲೆ. ಅದನ್ನು ಉಳಿಸಿ ಬೆಳೆಸುವುದಷ್ಟೇ ಅವರ ಮುಖ್ಯ ಗುರಿ‌. ವಿಶ್ವಕರ್ಮರು ಪ್ರಪಂಚದಾದ್ಯಂತ ಹರಿದು, ಹಂಚಿ ಹರಡಿ ಹೋಗಿದ್ದಾರೆ. ವಿಶ್ವಕರ್ಮ ಜನಾಂಗದವರನ್ನು ಬೂದು ಗಾಜು ಹಾಕಿ ಹುಡುಕಬೇಕು ಅಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಅವರ ಕೆಲಸವನ್ನು ಮೆಚ್ಚಿ ತಲೆದೂಗುವ, ಹಾಡಿ ಹೊಗಳುವ, ಅದನ್ನು ಅನುಭವಿಸುವ ಯಾರೊಬ್ಬರು ಅವರ ಶ್ರೇಯೋಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನವನ್ನು ಮಾಡದಿರುವುದು ದುರಂತ. ಇದು ಇದೇ ರೀತಿ ಮುಂದುವರಿದರೆ. ಹುಲಿ ಸಂರಕ್ಷಣೆ, ಅವನತಿಯ ಅಂಚಿನ ಅಪರೂಪದ ಪ್ರಾಣಿಗಳ ಸಂರಕ್ಷಣೆಯಂತೆ, ವಿಶ್ವಕರ್ಮ ಜನಾಂಗದವರನ್ನು ರಕ್ಷಿಸಿ ಅನ್ನೋ ಕೂಗು ಕೇಳಿ ಬರುತ್ತದೆ.

ಮಹಾನ್ ವಾಸ್ತುಶಿಲ್ಪಿ ವಿಶ್ವಕರ್ಮ: ಸ್ವಾರ್ಥಿಗಳ ನಡುವೆ ಮರೆಯಾಗುತ್ತಿರುವ ಪ್ರತಿಭಾವಂತರು

ಕಲೆಗೆ ಬೆಲೆಯಿರುವವರೆಗೂ ವಿಶ್ವಕರ್ಮ ಜನಾಂಗ ಯಾವುದೇ ಕಾರಣಕ್ಕೂ ಅಳಿಯುವುದಿಲ್ಲ. ಆದರೆ ಇತ್ತೀಚೆಗೆ ಕಲೆಯನ್ನು ಆಸ್ವಾದಿಸುವ ಗೌರವಿಸುವ ಜನ ಕಲೆಯ ರೂವಾರಿಯನ್ನು ಮರೆಯುತ್ತಿದ್ದಾರೆ. ಹೌದು ಯಾವುದೇ ಅದ್ಬುತ ಕಲಾ ಕೃತಿ ನೋಡಿದರು ಅದರ ಹಿಂದೆ ಒಬ್ಬ ವಿಶ್ವಕರ್ಮನ ಪರಿಶ್ರಮವಿರುತ್ತದೆ. ಜಗತ್ತಿನ ಯಾವ ಮೂಲೆಯಲ್ಲಿದ್ದರು ಅದು ವಿಶ್ವಕರ್ಮನ ಕೈ ಚಳಕವೇ ಅದರಲ್ಲಿ ಎರಡು ಮಾತಿಲ್ಲ. ಅವರು ಯಾವುದೇ ಕಲಾಕೃತಿಯನ್ನು ಮೂಡಿಸಿದರು ಅದರಲ್ಲಿ ಜೀವಕಳೆಯಿರುತ್ತದೆ. ಅವರ ಶ್ರಮ, ಶ್ರದ್ದೆ ಅದರಲ್ಲಿ ಎದ್ದು ಕಾಣುತ್ತಿರುತ್ತದೆ. ಆದರೆ ವಿಶ್ವಕರ್ಮರ ಕಲೆಗೆ ತಕ್ಕ ಬೆಲೆ ಸಿಗುತ್ತಿಲ್ಲ ಅನ್ನೋದೆ ದುರಂತ.

ವಿಶ್ವಕರ್ಮ ಉಳಿದರೆ ಸಂಸ್ಕೃತಿ ಉಳಿಯಲಿದೆ

ಭಾರತರ ಸಂಸ್ಕೃತಿಗಳ ತವರೂರು. ಇಲ್ಲಿನ ಕಲೆ ಸಂಸ್ಕೃತಿ ಪರಂಪರೆಗೆ ಮಾರು ಹೋಗದವರೇ ಇಲ್ಲ. ವಿಶ್ವದ ಬಹುತೇಕರು ಭಾರತದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವುದು ಇದೇ ಕಾರಣಕ್ಕೆ ಅಂದರೂ ಅತಿಶೋಯುಕ್ತಿಯಾಗಲಾರದು. ಭಾರತದ ಕಲೆ ಸಂಸ್ಕೃತಿ ಪರಂಪರೆ ಶ್ರೀಮಂತರಾಗಲು ವಿಶ್ವಕರ್ಮ ಸಮುದಾಯದವರ ಕೊಡುಗೆ ಅಪಾರ. ಇಂತಹ ವಿಶ್ವಕರ್ಮರನ್ನು ರಕ್ಷಣೆ ಮಾಡಲು ಎಲ್ಲರೂ ಕೈ ಜೋಡಿಸಬೇಕಿದೆ. ವಿಶ್ವಕರ್ಮ ಉಳಿದರೆ ಸಂಸ್ಕೃತಿ ಕಲೆ ಪರಂಪರೆ ಉಳಿಯಲಿದೆ. ಈ ನಿಟ್ಟಿನಲ್ಲಿ ನಮ್ಮನ್ನಾಳುವ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಪ್ರಮುಖವಾಗಿ ನಮ್ಮ ಜನರು ಮನಸು ಮಾಡಬೇಕಿದೆ. ಸರ್ಕಾರಗಳು ಹಂಚಿ ಹರಡಿ ಹೋಗಿರುವ ವಿಶ್ವಕರ್ಮ ಜನಾಂಗದವರನ್ನು ಮತ್ತೆ ಒಗ್ಗೂಡಿಸಬೇಕಿದೆ. ನಂತರ ಅವರ ಕಲೆಯನ್ನು ಗುರುತಿಸಿ ಅವರ ಪ್ರತಿಭೆಯನ್ನು ಗುರುತಿಸಿ ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ತರ ಕೆಲಸ ಮಾಡಬೇಕಿದೆ. ಈ ಮೂಲಕ ಅದು ಭವಿಷ್ಯಕ್ಕೆ ಅರ್ಥಪೂರ್ಣವಾಗಿ ಹಸ್ತಾಂತರವಾಗುತ್ತದೆ. ಆಗ ಮಾತ್ರ ಅಪರೂಪದ ವಿಶ್ವಕರ್ಮ ಕಲೆ ಮುಂದಿನ ಪೀಳಿಗೆಗೂ ಮುಂದುವರಿಯುತ್ತದೆ. ಇಂದು ವಿಶ್ವಕರ್ಮ ಜಯಂತಿಯ ದಿನ ಇಂತಹದೊಂದು ಅರ್ಥಪೂರ್ಣ ನಿರ್ಣಯವನ್ನು ಎಲ್ಲರೂ ಕೈಗೊಳ್ಳಲಿ‌. ಜಯಂತಿ ಒಂದು ದಿನದ ಆಚರಣೆಗೆ ಸೀಮಿತವಾಗದೆ ವರ್ಷ ಪೂರ್ತಿ ಅನುಷ್ಠಾನವಾಗುವಂತಾಗಲಿ ಅನ್ನೋದೆ ನಮ್ಮ ಆಶಯ.

ಜೈ ವಿಶ್ವಕರ್ಮ – ಜೈ ಭಾರತ 

ಶಿವಣ್ಣನ ರೀತಿ ಡೈಲಾಗ್ ಹೇಳಲು ಯಾರಿಗೆ ಸಾಧ್ಯ? ವೇದಿಕೆಯಲ್ಲಿ ಎಲ್ಲರೂ ಸುಸ್ತ್
ಶಿವಣ್ಣನ ರೀತಿ ಡೈಲಾಗ್ ಹೇಳಲು ಯಾರಿಗೆ ಸಾಧ್ಯ? ವೇದಿಕೆಯಲ್ಲಿ ಎಲ್ಲರೂ ಸುಸ್ತ್
ರಾಧಿಕ ಕರಿಯ ಅಂತ ಕರೆದ್ರೆ ಓಕೆ, ಜಮೀರ್ ಕರೆದ್ರೆ ಯಾಕೆ? ತೇಜಸ್ವಿನಿ ಗೌಡ
ರಾಧಿಕ ಕರಿಯ ಅಂತ ಕರೆದ್ರೆ ಓಕೆ, ಜಮೀರ್ ಕರೆದ್ರೆ ಯಾಕೆ? ತೇಜಸ್ವಿನಿ ಗೌಡ
‘ಭೈರತಿ ರಣಗಲ್ ಸೀಕ್ವೆಲ್ ಬರಲಿದೆ’: ಸಕ್ಸಸ್ ಮೀಟ್​ನಲ್ಲಿ ಶಿವಣ್ಣ ಮಾಹಿತಿ
‘ಭೈರತಿ ರಣಗಲ್ ಸೀಕ್ವೆಲ್ ಬರಲಿದೆ’: ಸಕ್ಸಸ್ ಮೀಟ್​ನಲ್ಲಿ ಶಿವಣ್ಣ ಮಾಹಿತಿ
ನಿರ್ದೇಶಕ ದೂರಿನ ಮೇರೆಗೆ ನಟನನ್ನು ಬಂಧಿಸಿರುವ ಚಂದ್ರಾ ಲೇಔಟ್ ಪೊಲೀಸರು
ನಿರ್ದೇಶಕ ದೂರಿನ ಮೇರೆಗೆ ನಟನನ್ನು ಬಂಧಿಸಿರುವ ಚಂದ್ರಾ ಲೇಔಟ್ ಪೊಲೀಸರು
ತೆಲಂಗಾಣದಲ್ಲಿ ಬಿಆರ್​ಎಸ್​ ನಾಯಕಿಯ ಗಂಡನಿಗೆ ಸುತ್ತಿಗೆಯಿಂದ ಹೊಡೆದ ಯುವಕ
ತೆಲಂಗಾಣದಲ್ಲಿ ಬಿಆರ್​ಎಸ್​ ನಾಯಕಿಯ ಗಂಡನಿಗೆ ಸುತ್ತಿಗೆಯಿಂದ ಹೊಡೆದ ಯುವಕ
ಒಟ್ಟಿಗೆ ಸ್ನಾನಕ್ಕೆ ಹೋದ ಹನುಮ, ಧನರಾಜ್; ಕಣ್ಣು ಮುಚ್ಚಿಕೊಂಡ ಮನೆ ಮಂದಿ
ಒಟ್ಟಿಗೆ ಸ್ನಾನಕ್ಕೆ ಹೋದ ಹನುಮ, ಧನರಾಜ್; ಕಣ್ಣು ಮುಚ್ಚಿಕೊಂಡ ಮನೆ ಮಂದಿ
ಕ್ರಿಕೆಟ್​ನಲ್ಲಿ ಪಾಕ್​ ಗೆದ್ದರೆ ಕಾಂಗ್ರೆಸ್ ಪಟಾಕಿ ಸಿಡಿಸುತ್ತದೆ: ಅಶೋಕ
ಕ್ರಿಕೆಟ್​ನಲ್ಲಿ ಪಾಕ್​ ಗೆದ್ದರೆ ಕಾಂಗ್ರೆಸ್ ಪಟಾಕಿ ಸಿಡಿಸುತ್ತದೆ: ಅಶೋಕ
ವಿಕ್ರಂಗೌಡ ಮೊದಲು ವಿಮೋಚನಾರಂಗದೊಂದಿಗೆ ಗುರುತಿಸಿಕೊಂಡಿದ್ದ: ಗ್ರಾಮಸ್ಥ
ವಿಕ್ರಂಗೌಡ ಮೊದಲು ವಿಮೋಚನಾರಂಗದೊಂದಿಗೆ ಗುರುತಿಸಿಕೊಂಡಿದ್ದ: ಗ್ರಾಮಸ್ಥ
ಕುಕ್ಕರ್ ಬ್ರ್ಯಾಂಡ್ ಜನರನ್ನು ಸಿದ್ದರಾಮಯ್ಯ ಬ್ರದರ್ಸ್ ಅನ್ನುತ್ತಾರೆ: ಅಶೋಕ
ಕುಕ್ಕರ್ ಬ್ರ್ಯಾಂಡ್ ಜನರನ್ನು ಸಿದ್ದರಾಮಯ್ಯ ಬ್ರದರ್ಸ್ ಅನ್ನುತ್ತಾರೆ: ಅಶೋಕ
ಐದಾರು ನಕ್ಸಲರಿಗೆ ಶೋಧ: ಶರಣಾಗತಿಗೆ ಆದ್ಯತೆ..ಇಲ್ಲದಿದ್ರೆ ಎನ್‌ಕೌಂಟರ್​?
ಐದಾರು ನಕ್ಸಲರಿಗೆ ಶೋಧ: ಶರಣಾಗತಿಗೆ ಆದ್ಯತೆ..ಇಲ್ಲದಿದ್ರೆ ಎನ್‌ಕೌಂಟರ್​?