ಕಾಂಗ್ರೆಸ್ನ ಮಾಜಿ ಸಂಸದೆಯೂ ಆಗಿದ್ದ ನಟಿ ರಮ್ಯಾ ಕೊನೆಗೆ ರಾಜಕೀಯದಿಂದಲೂ ದೂರವೇ ಉಳಿದಿದ್ದರು. ಆದರೆ, ಕೆಲವು ದಿನಗಳಿಂದ ಕಾಂಗ್ರೆಸ್ ಪಾಳಯದಲ್ಲಿ ಮತ್ತೆ ರಮ್ಯಾ ಅವರ ಹೆಸರು ಹರಿದಾಡುತ್ತಿದೆ. ರಮ್ಯಾ ಕಾಂಗ್ರೆಸ್ನಿಂದ 8 ಕೋಟಿ ರೂ. ದೋಚಿಕೊಂಡು ಪರಾರಿಯಾಗಿದ್ದಾರೆ ಎಂಬ ಸುದ್ದಿಗಳು ಕೂಡ ಹರಿದಾಡುತ್ತಿವೆ. ಇದಕ್ಕೆ ಕೋಪಗೊಂಡಿರುವ ಸ್ಯಾಂಡಲ್ವುಡ್ ಪದ್ಮಾವತಿ ರಮ್ಯಾ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಬಹಿರಂಗವಾಗಿಯೇ ಕಿಡಿ ಕಾರಿದ್ದಾರೆ. ಅಲ್ಲದೆ, ಈ ವಿಚಾರವಾಗಿ ಸ್ಪಷ್ಟನೆ ನೀಡಿ ನನಗೆ ಸಹಾಯ ಮಾಡಿ ಎಂದು ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ (KC Venugopal) ಅವರಲ್ಲಿ ರಮ್ಯಾ ಮನವಿ ಮಾಡಿದ್ದಾರೆ.ಡಿಕೆ ಶಿವಕುಮಾರ್ ಅವರ ಬೆಂಬಲಿಗರು ನಟಿ ರಮ್ಯಾ ವಿರುದ್ಧ ವದಂತಿಗಳನ್ನು ಹರಡುತ್ತಿದ್ದಾರೆ, ಅವರನ್ನು ಟಾರ್ಗೆಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಕೆಲವು ದಿನಗಳಿಂದ ಓಡಾಡುತ್ತಿವೆ. ಕಾಂಗ್ರೆಸ್ ನಾಯಕರು ಈ ಬಗ್ಗೆ ರಮ್ಯ ಅವರನ್ನು ಕೂಡ ಟಾರ್ಗೆಟ್ ಮಾಡಿದ್ದರು. ಈ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಒಂದು ಸಮೀಕ್ಷೆಯನ್ನು ನಡೆಸಿತ್ತು, ಸಾಮಾಜಿಕ ಜಾಲತಾಣದಲ್ಲಿ ಟಿವಿ9 ಕನ್ನಡ ಡಿಜಿಟಲ್ ನಡೆಸಿದ ಸಮೀಕ್ಷೆಯಲ್ಲಿ ಬಳಕೆದಾರರೂ ಉತ್ತಮವಾಗಿ ಭಾಗವಹಿಸಿದರು ಮತ್ತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಟಿವಿ9 ಕನ್ನಡ ಡಿಜಿಟಲ್ ನಡೆಸಿದ ಸಮೀಕ್ಷೆಯಲ್ಲಿ ರಮ್ಯ ಮಾಡಿರುವ ಟ್ವಿಟ್ ಗೆ ಒಂದಿಷ್ಟು ಜನರಿಗೆ ಅವರ ವಾದ ಸರಿಯಾಗಿದೆ ಎಂದರೆ ಇನ್ನೂ ಕೆಲವರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದು ಅವರಿಗೆ ಟಾಂಗ್ ನೀಡಿದ್ದಾರೆ. ಜೊತೆಗೆ 8 ಕೋಟಿಯಷ್ಟು ವಂಚನೆ ಮಾಡಿದ್ದಾರೆ ಎಂಬ ಚರ್ಚೆಗಳು ಟಿವಿ9 ಕನ್ನಡ ಡಿಜಿಟಲ್ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳು ಬೇಕು ಬೇಡ
ಫೇಸ್ಬುಕ್
ಪುರುಷರು – 95 ಶೇಕಾಡ
ಮಹಿಳೆಯರು -2ಶೇಕಾಡ
ಪುರುಷರು– 2ಶೇಕಾಡ
ಮಹಿಳೆಯರು -1ಶೇಕಾಡ
ಇನ್ಸ್ಟಾಗ್ರಾಮ್
ಪುರುಷರು – 80ಶೇಕಾಡ
ಮಹಿಳೆಯರು -10ಶೇಕಾಡ
ಪುರುಷರು– 7ಶೇಕಾಡ
ಮಹಿಳೆಯರು -3ಶೇಕಾಡ
ಟ್ವಿಟರ್
ಪುರುಷರು– 70ಶೇಕಾಡ
ಮಹಿಳೆಯರು -30ಶೇಕಾಡ
ಪುರುಷರು–
ಮಹಿಳೆಯರು –
ಯೂಟ್ಯೂಬ್
ಪುರುಷರು– 73ಶೇಕಾಡ
ಮಹಿಳೆಯರು -10ಶೇಕಾಡ
ಪುರುಷರು– 10ಶೇಕಾಡ
ಮಹಿಳೆಯರು -7ಶೇಕಾಡ
ಇನ್ಸ್ಟಾಗ್ರಾಮ್
ಪುರುಷರು– 73ಶೇಕಾಡ
ಮಹಿಳೆಯರು -10ಶೇಕಾಡ
ಪುರುಷರು– 10ಶೇಕಾಡ
ಮಹಿಳೆಯರು -7ಶೇಕಾಡ
ಸಾರ್ವಜನಿಕರ ಅಭಿಪ್ರಾಯ
ಸಾಮಾಜಿಕ ಜಾಲತಾಣದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಹಲವು ಅಭಿಪ್ರಾಯಗಳು ವ್ಯಕ್ತವಾಗಿದೆ. ರಮ್ಯ ಅವರ ಬಗ್ಗೆ ಒಂದಿಷ್ಟು ಜನರು ಅವರು ಹೇಳಿರುವ ಮಾತು ಸತ್ಯ ಎಂದರೆ ಇನ್ನೂ ಕೆಲವರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕರ್ನಾಟಕದಲ್ಲಿ ರಾಜಕೀಯವಾಗಿ ಹಲವು ಸಂಚಲನಗಳು ನಡೆಯುತ್ತಿದೆ. ಇದರ ಜೊತೆಗೆ ರಮ್ಯ ರಾಜಕೀಯಕ್ಕೆ ಮತ್ತೆ ಬರುತ್ತಾರೆ ಎಂಬ ಮಾತುಗಳು ಕೇಳಿರುತ್ತಿದೆ.
Published On - 6:51 pm, Tue, 17 May 22