ಭಾರತೀಯರಿಗೆ ಸುಲಭವಾಗಿ ಇ-ವೀಸಾ ನೀಡುವ 10 ದೇಶಗಳಿವು; ಈ ಅದ್ಭುತ ತಾಣಗಳನ್ನು ಮಿಸ್ ಮಾಡಬೇಡಿ
TV9 Web | Updated By: ಸುಷ್ಮಾ ಚಕ್ರೆ
Updated on:
Jun 24, 2022 | 12:36 PM
ಇನ್ನೇನು ಮಳೆಗಾಲ ಶುರುವಾಗಿದೆ. ಈ ಮಳೆಗಾಲದಲ್ಲಿ ಯಾವುದಾದರೂ ಬೇರೆ ದೇಶಕ್ಕೆ ಒಂದು ಟ್ರಿಪ್ ಹೋಗಬೇಕೆಂದು ಪ್ಲಾನ್ ಮಾಡಿದ್ದೀರಾ? ಅಥವಾ ಈ ವರ್ಷಾಂತ್ಯದಲ್ಲಿ (ಡಿಸೆಂಬರ್) ಹೊರ ದೇಶಕ್ಕೆ ಹೋಗೋ ಪ್ಲಾನ್ ಇದೆಯಾ? ಹಾಗಾದರೆ, ಭಾರತೀಯರಿಗೆ ಸುಲಭವಾಗಿ ಇ-ವೀಸಾ ನೀಡುವ 10 ದೇಶಗಳ ಪಟ್ಟಿ ಇಲ್ಲಿದೆ.
1 / 10
ಕಾಂಬೋಡಿಯಾ:
ಸುಂದರವಾದ ದೇವಾಲಯಗಳಿಗೆ ಹೆಸರುವಾಸಿಯಾದ ಕಾಂಬೋಡಿಯಾ ದೇಶ ಸಾಕಷ್ಟು ಜನಪ್ರಿಯವಾಗಿದೆ. ಇಲ್ಲಿಗೆ ಆಗಮಿಸಿದ ನಂತರ ನೀವು ವೀಸಾ ಪಡೆಯಬಹುದಾಗಿದೆ. ಭಾರತೀಯ ಪ್ರಯಾಣಿಕರಿಗೆ, ಕಾಂಬೋಡಿಯಾವು ಗರಿಷ್ಟ 30 ದಿನಗಳ ವಾಸ್ತವ್ಯವನ್ನು ಖಾತ್ರಿಪಡಿಸುವ ಸುಲಭವಾದ ವೀಸಾವನ್ನು ನೀಡುತ್ತದೆ.
2 / 10
ಫಿಜಿ:
ಕಡಲತೀರದ ಪ್ರಿಯರಿಗೆ ಫಿಜಿ ಪ್ರಪಂಚದಲ್ಲೇ ಹೆಚ್ಚು ಬೇಡಿಕೆಯಿರುವ ಸ್ಥಳಗಳಲ್ಲಿ ಒಂದಾಗಿದೆ. ಇದರ ಸೌಂದರ್ಯ, ತೂಗಾಡುತ್ತಿರುವ ತಾಳೆ ಮರಗಳು ಮತ್ತು ಪ್ರಾಚೀನ ಕಡಲತೀರಗಳಿಂದಾಗಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ಸ್ಥಳಕ್ಕೆ ಭೇಟಿ ನೀಡಲು ಯೋಜಿಸುತ್ತಿರುವ ಭಾರತೀಯರಿಗೆ ಪೂರ್ವ ಪ್ರವೇಶ ವೀಸಾಗಳ ಅಗತ್ಯವಿಲ್ಲ. ಆದರೆ ಅವರ ಆಗಮನದ ವೀಸಾವನ್ನು ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ವಲಸೆ ಅಧಿಕಾರಿಗಳು ನೀಡುತ್ತಾರೆ. ಇದಕ್ಕೆ ನೀವು ಆರು ತಿಂಗಳವರೆಗೆ ಮಾನ್ಯವಾಗಿರುವ ನಿಮ್ಮ ಪಾಸ್‌ಪೋರ್ಟ್ ನೀಡಬೇಕಾಗುತ್ತದೆ.
3 / 10
ಇಂಡೋನೇಷ್ಯಾ:
ವೀಸಾ ಸಂಬಂಧಿತ ಸಮಸ್ಯೆಗಳ ಬಗ್ಗೆ ಚಿಂತಿಸದೆ, ಅದರ ಮೋಡಿ ಮಾಡುವ ಸೌಂದರ್ಯವನ್ನು ಅನ್ವೇಷಿಸಲು ಈ ಜನಪ್ರಿಯ ತಾಣಕ್ಕೆ ಭೇಟಿ ನೀಡಿ. ಇಂಡೋನೇಷ್ಯಾಕ್ಕೆ ಭೇಟಿ ನೀಡುವ ಭಾರತೀಯ ಪ್ರಯಾಣಿಕರು ಪ್ರವಾಸೋದ್ಯಮ ಅಥವಾ ವ್ಯಾಪಾರ ಉದ್ದೇಶಗಳಿಗಾಗಿ ಅಲ್ಪಾವಧಿಗೆ ಪ್ರಯಾಣಿಸುತ್ತಿದ್ದರೆ ವೀಸಾದ ಅಗತ್ಯವಿರುವುದಿಲ್ಲ. ನೀವು ಇಂಡೋನೇಷ್ಯಾದಲ್ಲಿ ಇಳಿದ ನಂತರ, ಅಲ್ಲೇ ಸುಲಭವಾಗಿ ಆಗಮನದ ವೀಸಾವನ್ನು ಪಡೆಯಬಹುದು.
4 / 10
ಲಾವೋಸ್:
ಅದ್ಭುತವಾದ ಪ್ರಕೃತಿ ಸೌಂದರ್ಯ, ಸೊಂಪಾದ ಕಾಡು, ಸುಂದರವಾದ ಹಳ್ಳಿಗಳು, ಹಚ್ಚಹಸಿರಿನ ಭತ್ತದ ಗದ್ದೆಗಳು ಮತ್ತು ದೊಡ್ಡ ಪರ್ವತಗಳಿಂದ ಸುತ್ತುವರೆದಿರುವ ದೇಶ ಲಾವೋಸ್. ಈ ಆಗ್ನೇಯ ಏಷ್ಯಾದ ತಾಣ ಖಂಡಿತ ನಿಮಗೆ ಇಷ್ಟವಾಗುತ್ತದೆ. ಭಾರತೀಯರು ಲಾವೋಸ್ ವೀಸಾಗೆ ಮುಂಚಿತವಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅವರು ಲಾವೋಸ್‌ನಲ್ಲಿ ಇಳಿಯುವಾಗ ಎಲ್ಲ ಸೂಕ್ತ ದಾಖಲಾತಿಗಳನ್ನು ಹೊಂದಿದ್ದರೆ ಸುಲಭವಾಗಿ ವೀಸಾವನ್ನು ಪಡೆಯಬಹುದು.
5 / 10
ಮಲೇಷ್ಯಾ:
ಪ್ರಯಾಣಿಕರಿಗೆ ಪ್ರಯಾಣದ ತೊಂದರೆಯಿಲ್ಲದಂತೆ ಮಾಡಲು ಭಾರತೀಯರು ಈಗ ಆಗಮನದ ವೀಸಾವನ್ನು ಪಡೆಯಬಹುದು ಮಲೇಷ್ಯಾ ಇತ್ತೀಚೆಗೆ ಘೋಷಿಸಿದೆ. ನಗರ ಮತ್ತು ದಟ್ಟವಾದ ನಗರ ಕಾಡುಗಳನ್ನು ವೀಕ್ಷಿಸಲು ಈ ತಾಣಕ್ಕೆ ಭೇಟಿ ನೀಡಿ. ಕೌಲಾಲಂಪುರ್‌ನಲ್ಲಿ ಒಂದೆರಡು ದಿನಗಳನ್ನು ಕಳೆದ ನಂತರ ನೀವು ಕಡಲತೀರಗಳಲ್ಲಿ ವಿಶ್ರಾಂತಿ ಪಡೆಯಬಹುದು. ಅಥವಾ ನೀರೊಳಗಿನ ಪ್ರಪಂಚವನ್ನು ವೀಕ್ಷಿಸಲು ಸ್ಕೂಬಾ ಡೈವಿಂಗ್‌ನಲ್ಲಿ ಪಾಲ್ಗೊಳ್ಳಬಹುದು.
6 / 10
ಮಾಲ್ಡೀವ್ಸ್:
ಮಾಲ್ಡೀವ್ಸ್‌ಗೆ ಯಾವುದೇ ಪರಿಚಯದ ಅಗತ್ಯವಿಲ್ಲ. ಇದು ಪ್ರವಾಸಿಗರ ಹಾಟ್‌ಸ್ಪಾಟ್ ಆಗಿ ಜನಪ್ರಿಯವಾಗಿದೆ. ಭಾರತೀಯ ಪ್ರಯಾಣಿಕರು ಮಾಲ್ಡೀವ್ಸ್‌ಗೆ ಭೇಟಿ ನೀಡಲು ಸುಲಭವಾಗಿ ಇ-ವೀಸಾ ಪಡೆಯಬಹುದು. ಇ-ವೀಸಾ 30 ದಿನಗಳವರೆಗೆ ಮಾನ್ಯವಾಗಿರುತ್ತದೆ.
7 / 10
ಸೀಶೆಲ್ಸ್:
ನೀವು ಈ ದೇಶದ ಬಗ್ಗೆ ಇನ್ನೂ ತಿಳಿದಿಲ್ಲವೆಂದರೆ ಒಮ್ಮೆ ಗೂಗಲ್ ಮಾಡಿ ನೋಡಿ. ಸೀಶೆಲ್ಸ್ ಎಂಬ ಈ ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡಿದರೆ ನಿಮ್ಮ ರಜೆಯನ್ನು ಅತ್ಯದ್ಭುತವಾಗಿ ಕಳೆಯಬಹುದು. ಇಲ್ಲಿನ ಮಾಹೆ ದ್ವೀಪ, ವಿಕ್ಟೋರಿಯಾ ಮತ್ತು ಪ್ಲಾಟ್ಟೆಯಂತಹ ಸ್ಥಳಗಳನ್ನು ನಿಮ್ಮ ಪ್ರವಾಸದಲ್ಲಿ ಸೇರಿಸಿಕೊಳ್ಳಿ. ಇದು ಭಾರತೀಯ ನಾಗರಿಕರಿಗೆ ವೀಸಾ ಮುಕ್ತ ದೇಶವಾಗಿದೆ.
8 / 10
ಸಿಂಗಾಪುರ್:
ಉತ್ತಮ ಸಂಪರ್ಕ ಹೊಂದಿರುವ ವಿಮಾನಗಳು ಮತ್ತು ಸುಲಭವಾದ ಇ-ವೀಸಾ ಅರ್ಜಿ ಪ್ರಕ್ರಿಯೆಯೊಂದಿಗೆ ಸಿಂಗಾಪುರವು ಭಾರತೀಯ ಪ್ರಯಾಣಿಕರಿಗೆ ಹೆಚ್ಚು ಆದ್ಯತೆಯ ತಾಣವಾಗಿದೆ. ಪ್ರಯಾಣಿಕರಿಗೆ ಇದು ಬಹಳಷ್ಟು ಕೊಡುಗೆಗಳನ್ನು ನೀಡುತ್ತದೆ.
9 / 10
ಥೈಲ್ಯಾಂಡ್:
ಈ ಆಗ್ನೇಯ ಏಷ್ಯಾದ ದೇಶವು ಅದರ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಶ್ರೀಮಂತ ದೇವಾಲಯಗಳು ಮತ್ತು ಪ್ರಾಚೀನ ಕಡಲತೀರಗಳಿಗಾಗಿ ಭಾರತೀಯರಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಇಲ್ಲಿ ನೀವು ಫಿ ಫಿಲ್, ಕೊಹ್ ಸಮುಯಿ ಮತ್ತು ಕೊಹ್ ಫಾ ನ್ಗಾನ್ ದ್ವೀಪಗಳನ್ನು ಮಿಸ್ ಮಾಡಿಕೊಳ್ಳುವಂತಿಲ್ಲ. ಥೈಲ್ಯಾಂಡ್ ಭಾರತೀಯ ನಾಗರಿಕರಿಗೆ ಆಗಮನದ ವೀಸಾವನ್ನು ಸಹ ನೀಡುತ್ತದೆ. ಆದರೆ ನೀವು ಪ್ರವಾಸೋದ್ಯಮ ಉದ್ದೇಶಗಳಿಗಾಗಿ ಮಾತ್ರ ಭೇಟಿ ನೀಡುತ್ತಿರುವಿರಿ ಎಂಬುದನ್ನು ಖಚಿತಪಡಿಸಬೇಕು.
10 / 10
ವಿಯೆಟ್ನಾಂ:
ಕೈಗೆಟುಕುವ ವಿಮಾನದ ಟಿಕೆಟ್‌ಗಳು ಮತ್ತು ಬಜೆಟ್ ತಾಣವಾಗಿರುವುದರಿಂದ ವಿಯೆಟ್ನಾಂ ಬಹುತೇಕ ಎಲ್ಲಾ ಪ್ರಯಾಣಿಕರ ಇಚ್ಛೆಯ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಜೊತೆಗೆ, ಈ ಸ್ಥಳಕ್ಕೆ ಭೇಟಿ ನೀಡಲು ನೀವು ಸುಲಭವಾದ ಇ-ವೀಸಾವನ್ನು ಪಡೆಯಬಹುದು