Happy Birthday Lionel Messi: 35ನೇ ವಸಂತಕ್ಕೆ ಕಾಲಿಟ್ಟ ಕಾಲ್ಚೆಂಡಿನ ಚತುರ ಲಿಯೋನೆಲ್ ಮೆಸ್ಸಿ
Happy Birthday Lionel Messi: ಮೆಸ್ಸಿ, ಬಾರ್ಸಿಲೋನಾ ಜೊತೆಗಿನ ಸುದೀರ್ಘ 21 ವರ್ಷಗಳ ವೃತ್ತಿಜೀವನದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು (6) ಆಡಿದ್ದಾರೆ. ಬಾರ್ಸಿಲೋನಾ ಪರ ಅತಿ ಹೆಚ್ಚು ಗೋಲು (62) ಗಳಿಸಿದ್ದಾರೆ.
Updated on: Jun 24, 2022 | 2:47 PM

ಮೆಸ್ಸಿ 14 ಡಿಸೆಂಬರ್ 2000 ರಂದು ಬಾರ್ಸಿಲೋನಾ ಯೂತ್ ಅಕಾಡೆಮಿಯನ್ನು ಸೇರಿದರು. ಬಾರ್ಯಾಕಾ ತಾಂತ್ರಿಕ ನಿರ್ದೇಶಕ ರೆಸಾಕ್ ಊಟದ ಟೇಬಲ್ ಮೇಲಿದ್ದ ಟಿಶ್ಯೂ ಪೇಪರ್ ಎತ್ತಿಕೊಂಡು ಅದರ ಮೇಲೆ ಮೆಸ್ಸಿ ನಡುವಿನ ಒಪ್ಪಂದವನ್ನು ಬರೆದರು.

ಮೆಸ್ಸಿ, ಬಾರ್ಸಿಲೋನಾ ಜೊತೆಗಿನ ಸುದೀರ್ಘ 21 ವರ್ಷಗಳ ವೃತ್ತಿಜೀವನದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು (6) ಆಡಿದ್ದಾರೆ. ಬಾರ್ಸಿಲೋನಾ ಪರ ಅತಿ ಹೆಚ್ಚು ಗೋಲು (62) ಗಳಿಸಿದ್ದಾರೆ. ಅಷ್ಟೇ ಅಲ್ಲ ಬಾರ್ಸಿಲೋನಾ ಪರ ಮೆಸ್ಸಿ 34 ಟ್ರೋಫಿಗಳನ್ನು ಗೆದ್ದಿದ್ದಾರೆ.

ಲಿಯೋನೆಲ್ ಮೆಸ್ಸಿ ಬಾರ್ಸಿಲೋನಾ ತಂಡದ ಆಟಗಾರನಾಗಿ ಒಂದಕ್ಕಿಂತ ಹೆಚ್ಚು ಯಶಸ್ಸನ್ನು ಹೊಂದಿದ್ದಾರೆ. ಜೊತೆಗೆ ದೇಶದ ಜೆರ್ಸಿಯಲ್ಲಿ ಆಡುವ ಮೆಸ್ಸಿ ಪುಸ್ಕಾಸ್‌ನಂತಹ ದಂತಕಥೆಗಳನ್ನು ಮೀರಿಸಿದ್ದಾರೆ. ಅವುಗಳಲ್ಲಿ 2021 ರಲ್ಲಿ ಅರ್ಜೆಂಟೀನಾ ಕೋಪಾ ಅಮೇರಿಕಾ ಗೆದ್ದ ಹೆಮ್ಮೆಯ ಕ್ಷಣವಾಗಿದೆ.

ಬಾರ್ಸಿಲೋನಾ ಜೊತೆಗಿನ 21 ವರ್ಷಗಳ ಸಂಬಂಧವನ್ನು ಕಡಿದುಕೊಂಡ ನಂತರ ಮೆಸ್ಸಿ ಆಗಸ್ಟ್ 2021 ರಲ್ಲಿ PSG ಸೇರಿದರು. ಇದುವರೆಗೆ ಮೆಸ್ಸಿ ಪಿಎಸ್‌ಜಿ ಪರ 26 ಪಂದ್ಯಗಳಲ್ಲಿ 6 ಗೋಲು ಗಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಅರ್ಜೆಂಟೀನಾ ಜರ್ಸಿಯಲ್ಲಿ ಮೆಸ್ಸಿ 100 ಗೋಲುಗಳ ಮೈಲುಗಲ್ಲನ್ನು ದಾಟಿದ್ದರು. ಮೆಸ್ಸಿಗೆ ಶತಕ ಗೋಲುಗಳನ್ನು ಮೈಲಿಗಲ್ಲು ದಾಟಲು ಹ್ಯಾಟ್ರಿಕ್ ಅಗತ್ಯವಿತ್ತು. ಅವರು ಸ್ಪೇನ್‌ನ ಪ್ಯಾಂಪ್ಲೋನಾದಲ್ಲಿ ನಡೆದ ಸೌಹಾರ್ದ ಪಂದ್ಯದಲ್ಲಿ ತಂಡಕ್ಕಾಗಿ ಐದು ಗೋಲುಗಳನ್ನು ಗಳಿಸಿ, ಈ ದಾಖಲೆ ಪೂರ್ಣಗೊಳಿಸಿದರು.

ಲಿಯೋನೆಲ್ ಮೆಸ್ಸಿ ಅವರ ಯಶಸ್ವಿ ಫುಟ್ಬಾಲ್ ವೃತ್ತಿಜೀವನವು ಆರು ಬ್ಯಾಲನ್ ಡಿ'ಓರ್ ಪ್ರಶಸ್ತಿಗಳನ್ನು ಒಳಗೊಂಡಿದೆ. ಮೆಸ್ಸಿ 2009 ರಲ್ಲಿ ಮೊದಲ ಬಾರಿಗೆ ಬ್ಯಾಲನ್ ಡಿ'ಓರ್ ಪ್ರಶಸ್ತಿ ಗೆದ್ದರು. ನಂತರ 2010, 2011, 2012, 2015, 2019 ಮತ್ತು 2021 ರಲ್ಲಿ ಮೆಸ್ಸಿಯ ಟ್ರೋಫಿ ಕ್ಯಾಬಿನೆಟ್‌ನಲ್ಲಿ 6 ಬ್ಯಾಲನ್ ಡಿ'ಓರ್ ಟ್ರೋಫಿಗಳಿವೆ.
























