
ಅಮೆರಿಕಾದಲ್ಲಿ 24 ವರ್ಷದ ಯುವತಿ 85 ವರ್ಷದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಈ ಮೂಲಕ ಪ್ರೀತಿಗೆ ಕಣ್ಣಿಲ್ಲ, ವಯಸ್ಸಿನ ಹಂಗಿಲ್ಲ ಎನ್ನುವುದನ್ನು ಸಾಬೀತು ಮಾಡಿದೆ.

ಬಟ್ಟೆ ತೊಳೆಯುವ ಕೆಲಸ ಮಾಡುತ್ತಿದ್ದ ಮಿರಾಕಲ್ ಪೋಗ್ಳನ್ನು ಚಾರ್ಲ್ಸ್ ಪೋಗ್ 2019ರಲ್ಲಿ ಭೇಟಿಯಾಗಿದ್ದರು.

ಭೇಟಿ ಸ್ನೇಹಕ್ಕೆ ತಿರುಗಿ ಬಳಿಕ ಗೆಳೆತನ ಪ್ರೀತಿಗಿ ತಿರುಗಿದೆ. ಈ ಇಬ್ಬರು ಮದುವೆಯಾಗುವ ಮೂಲಕ ಗಮನಸೆಳೆದಿದ್ದಾರೆ.

ನಾವಿಬ್ಬರೂ ಭೇಟಿಯಾದಾಗ ಯಾವುದೇ ಭಾವನೆ ಇರಲಿಲ್ಲ. ಆದ್ರೆ, ಚಾರ್ಲ್ಸ್ ಅವರು ದಿನ ಕಳೆದಂತೆ ಹತ್ತಿರವಾದರು. ನನ್ನಲ್ಲೊಂದು ವಿನೀತ ಭಾವ ಮೂಡಿಸಿದರು. ಅವರ ಜತೆ ಇದ್ದರೆ ಖುಷಿಯಿಂದ ಇರುತ್ತೇನೆ ಎಂದು ಅನಿಸಿತು. ಹೀಗಾಗಿ ವಯಸ್ಸಿನ ಹಂಗು ತೊರೆದು ಮದುವೆಯಾದೆ ಎಂದು ಮಿರಾಕಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮದುವೆಯಾದ ವಧು ಹಾಗೂ ವರನ ನಡುವೆ 61 ವರ್ಷ ಅಂತರವಿದೆ. ಆದರೂ ಇಬ್ಬರು ಪ್ರೀತಿಸಿ ಮದುವೆಯಾಗಿದ್ದು, ಮದುವೆಯಾದ ಫೋಟೋಗಳು ವೈರಲ್ ಆಗಿವೆ

ನಾನು ಅವರ ವಯಸ್ಸನ್ನು ಎಂದಿಗೂ ಕೇಳಿರಲಿಲ್ಲ. ಅವರು 100 ಅಥವಾ 55 ವಯಸ್ಸಿನವರಾಗಿದ್ದರು ಇಂಜರಿಯುತ್ತಿರಲಿಲ್ಲ, ಯಾಕಂದ್ರೆ ನಾನು ಅವನನ್ನು ಇಷ್ಟಪಡುತ್ತಿದ್ದೆ. ಅವನು 60 ಅಥವಾ 70 ಆಗಿರಬಹುದು ಎಂದು ನಾನು ಭಾವಿಸಿದ್ದೆ. ಏಕೆಂದರೆ ಅವನು ತುಂಬಾ ಚೆನ್ನಾಗಿ ಕಾಣುತ್ತಾನೆ ಎಂದಿದ್ದಾಳೆ ಮಿರಾಕಲ್

ಮಿರಾಕಲ್ ಹೇಳುವ ಪ್ರಕಾರ ಆಕೆಯ ತಾಯಿ ತಮಿಕಾ ಫಿಲಿಪ್ಸ್ ವಯಸ್ಸು 45, ಮತ್ತು ಅಜ್ಜ ಜೋ ಬ್ರೌನ್ ಅವರಿಗೆ 72 ವರ್ಷ. ಇವರು ನಮ್ಮ ಮದುವೆಗೆ ಮೊದಲಿನಿಂದಲು ಬೆಂಬಲಿಸಿದ್ದರು. ಆದ್ರೆ, ತಂದೆ ಕರೀಮ್ ಫಿಲಿಪ್ಸ್ರನ್ನು ಮನವೊಲಿಸಲು ಕಷ್ಟವಾಯಿತು ಎಂದಿದ್ದಾರೆ.