ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದಿದೆ. ಈ ರಾಜ್ಯಗಳಲ್ಲಿ ಗುರುವಾರ ಅಂದರೆ ಮಾರ್ಚ್ 10 ರಂದು ಮತ ಎಣಿಕೆ ಆರಂಭವಾಗಿದೆ. ಮತ ಎಣಿಕೆಯ ಸುತ್ತಲೂ ಪೊಲೀಸ್ ಕಾವಲು ನಿಯೋಜಿಸಲಾಗಿದ್ದು, ಹಲವೆಡೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ. (ಪಿಟಿಐ)
ಲಕ್ನೋದ ಹೆಚ್ಚುವರಿ ಸಿಇಒ ಬಿ.ಡಿ. ರಾಮ್ ತಿವಾರಿ ಸ್ಟ್ರಾಂಗ್‌ರೂಮ್ ಹೊರಗೆ ಸಿಎಪಿಎಫ್ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ. ಅಂಚೆ ಮತಗಳು ಮತ್ತು ಇವಿಎಂ ಮತಗಳ ಎಣಿಕೆಯು ಇಂದು ಬೆಳಿಗ್ಗೆ 8 ಮತ್ತು 8:30 ಕ್ಕೆ ಪ್ರಾರಂಭವಾಗುತ್ತದೆ.
Published On - 11:12 am, Thu, 10 March 22