Mouth Ulcers: ಬಾಯಿ ಹುಣ್ಣು ನಿಮಗೆ ಸಾಕಷ್ಟು ತೊಂದರೆಯನ್ನುಂಟು ಮಾಡುತ್ತಿದೆಯೇ? ಆಯುರ್ವೇದ ತಜ್ಞರ ಸಲಹೆಯನ್ನು ಪಾಲಿಸಿ
TV9 Web | Updated By: ಅಕ್ಷತಾ ವರ್ಕಾಡಿ
Updated on:
Nov 16, 2022 | 10:20 AM
ಬಾಯಿ ಹುಣ್ಣುಗಳ ಸಮಸ್ಯೆಗೆ ಮುಂಬೈನ ಪ್ರಾಣ ಹೆಲ್ತ್ ಕೇರ್ ಅಂಡ್ ಅಕಾಡೆಮಿ ಫೋರ್ ಆಯುರ್ವೇದದ,ಆಯುರ್ವೇದ ಮತ್ತು ಕರುಳಿನ ತಜ್ಞರಾದ ಡಾ.ಡಿಂಪಲ್ ಜಂಗ್ಡಾ ರವರು ಪರಿಹಾರದ ಸಲಹೆಗಳನ್ನು ಸೂಚಿಸಿದ್ದಾರೆ.
1 / 6
ಗುಲ್ಕಂದ್ ಗುಲಾಬಿಯ ದಳಗಳಿಂದ ಮಾಡಲಾಗುವ ಸಿಹಿಯಾದ ತಿನಸು ಇದಾಗಿದೆ. ಪ್ರತಿ ದಿನ 2ರಿಂದ 3 ಚಮಚ ಊಟಕ್ಕಿಂತ ಮೊದಲು ಸೇವಿಸಿ. ಇದು ದೇಹದಿಂದ ಹೆಚ್ಚುವರಿ ಉಷ್ಣಾಂಶವನ್ನು ತೆಗೆದುಹಾಕುತ್ತದೆ ಮತ್ತು ಸುಡುವ ಸಂವೇದನೆ ಮತ್ತು ಬಾಯಿಯ ಹುಣ್ಣುಗಳಿಂದ ಉಂಟಾಗುವ ನೋವಿನ ಸಮಯದಲ್ಲಿ ಉತ್ತಮ ಪರಿಣಾಮವನ್ನು ನೀಡುತ್ತದೆ. ಗುಲ್ಕಂದ್ ಮಹಿಳೆಯರಲ್ಲಿ ಭಾರೀ ಮುಟ್ಟಿನ ರಕ್ತಸ್ರಾವ, ಬಿಳಿ ಸ್ರಾವ ಮತ್ತು ಇತರ ಮುಟ್ಟಿನ ಅಸ್ವಸ್ಥತೆಗಳಿಂದ ನಿವಾರಿಸುತ್ತದೆ.
2 / 6
ಬಾಯಿ ಹುಣ್ಣುಗಳಿಗೆ ತುಪ್ಪವು ಒಂದು ಒಳ್ಳೆಯ ಮನೆ ಮದ್ದಾಗಿದೆ. ಹುಣ್ಣಿನ ಮೇಲೆ ತುಪ್ಪವನ್ನು ಹಚ್ಚಿ, ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ ಮತ್ತು ನಂತರ ಅದನ್ನು ಉಗುಳಿ. ಹೀಗೆ ಪ್ರತಿ ದಿನ ಮಾಡುವುದ್ದರಿಂದ ಬಾಯಿ ಹುಣ್ಣಿನಿಂದ ಮುಕ್ತಿ ಪಡೆಯಬಹುದು.
3 / 6
ಪೇರಲೆ ಹಣ್ಣಿನ ಎಲೆಗಳನ್ನು ಚೆನ್ನಾಗಿ ತೊಳೆದು ಜಗಿಯುವುದ್ದರಿಂದ ಬಾಯಿಯ ಹುಣ್ಣಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇದ್ದರಿಂದ ಹುಣ್ಣಿನ ಗಾತ್ರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
4 / 6
ಕ್ಯಾಸ್ಟರ್ ಆಯಿಲ್ ಅಥವಾ ಹರಳೆಣ್ಣೆ ನಿಮ್ಮ ದೇಹದಿಂದ ಶಾಖವನ್ನು ನಿವಾರಿಸುತ್ತದೆ. ನೀವು ಬಾಯಿ ಹುಣ್ಣಿನ ನೋವಿನಿಂದ ಬಳಲುತ್ತಿದ್ದರೆ, ಹುಣ್ಣಿನ ಜಾಗಕ್ಕೆ ಕ್ಯಾಸ್ಟರ್ ಆಯಿಲ್ ಅನ್ನು ಹಚ್ಚಿ . ಇದು ಅಲ್ಸರ್ ಅನ್ನು ಗುಣಪಡಿಸುವುದಲ್ಲದೆ, ಅಧಿಕ ಉಷ್ಣತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
5 / 6
ಬಾಯಿ ಹುಣ್ಣಾಗಿರುವ ಜಾಗದಲ್ಲಿ ಜೇನುತುಪ್ಪವನ್ನು ಹಚ್ಚಿ, ರಾತ್ರಿಯಿಡೀ ಇರಲಿ. ಇದನ್ನು ಎರಡು- ಮೂರು ರಾತ್ರಿ ಪುನರಾವರ್ತಿಸಿ. ಜೇನುತುಪ್ಪ ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿರುವುದರಿಂದ ದೊಡ್ಡ ಗಾಯವನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಗಾಯ ವೇಗವಾಗಿ ಗುಣವಾಗಲು ಸಹಾಯ ಮಾಡುತ್ತದೆ.
6 / 6
ಒಂದು ಚಮಚ ಉಪ್ಪು ಮತ್ತು ಒಂದು ಲೋಟ ಬೆಚ್ಚಗಿನ ನೀರನ್ನು ಚೆನ್ನಾಗಿ ಮಿಶ್ರಣ ಮಾಡಿದ ನಂತರ ಈ ನೀರಿನಿಂದ ಮುಕ್ಕಳಿಸಿ. ಇದನ್ನು ದಿನದಲ್ಲಿ ಕೆಲವು ಬಾರಿ ಪುನರಾವರ್ತಿಸಿ. ಇದು ನಿಮ್ಮ ಬಾಯಿಯಿಂದ ಬ್ಯಾಕ್ಟೀರಿಯಾವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಹಿತವೆನಿಸುತ್ತದೆ. ಉಪ್ಪು ಸಹ ನಂಜು ನಿರೋಧಕವಾಗಿದ್ದು, ಅದು ಸೋಂಕು ಹರಡದಂತೆ ತಡೆಯುತ್ತದೆ.