IPL 2023: ಮಿನಿ ಹರಾಜಿಗೂ ಮುನ್ನ ತಂಡದಿಂದ ಗೇಟ್​ಪಾಸ್; ಈ ದಿಗ್ಗಜರ ಐಪಿಎಲ್ ಪಯಣ ಭಾಗಶಃ ಅಂತ್ಯ

IPL 2023: ಎಲ್ಲಾ 10 ತಂಡಗಳು ಐಪಿಎಲ್ 2023 ರತ್ತ ಮೊದಲ ಹೆಜ್ಜೆ ಇಟ್ಟಿವೆ. ಮಿನಿ ಹರಾಜಿಗೆ ಪ್ರವೇಶಿಸುವ ಮೊದಲು ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಂಡು, ಬೇಡವಾದ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿವೆ.

TV9 Web
| Updated By: ಪೃಥ್ವಿಶಂಕರ

Updated on: Nov 16, 2022 | 3:35 PM

ಎಲ್ಲಾ 10 ತಂಡಗಳು ಐಪಿಎಲ್ 2023 ರತ್ತ ಮೊದಲ ಹೆಜ್ಜೆ ಇಟ್ಟಿವೆ. ಮಿನಿ ಹರಾಜಿಗೆ ಪ್ರವೇಶಿಸುವ ಮೊದಲು  ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಂಡು, ಬೇಡವಾದ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿವೆ. ಈ ಬಿಡುಗಡೆಯಾದ ಆಟಗಾರರ ಪಟ್ಟಿಯಲ್ಲಿ ಹಲವು ದಿಗ್ಗಜ ಆಟಗಾರರ ಹೆಸರು ಇರುವುದು ಈಗ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಅಂತಹ ಕೆಲವು ಆಟಗಾರರ ಪಟ್ಟಿ ಇಲ್ಲಿದೆ.

1 / 6
ಕೀರನ್ ಪೊಲಾರ್ಡ್- ಐಪಿಎಲ್ 2023 ಕ್ಕೆ ಸಂಬಂಧಿಸಿದಂತೆ ಮುಂಬೈ ಇಂಡಿಯನ್ಸ್ ತಮ್ಮ ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡುವ ಮೊದಲೇ ಕೀರನ್ ಪೊಲಾರ್ಡ್ ಐಪಿಎಲ್​ಗೆ ನಿವೃತ್ತಿ ಘೋಷಿಸಿದ್ದಾರೆ. ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ, ಮುಂಬೈ 6 ಕೋಟಿ ರೂ.ಗೆ ಪೊಲಾರ್ಡ್ ಅವರನ್ನು ಖರೀದಿಸಿತ್ತು. ಆದಾಗ್ಯೂ, ಪೊಲಾರ್ಡ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ಮುಂಬೈ ಆಯ್ಕೆ ಮಾಡಿಕೊಂಡಿದೆ.

2 / 6
ಡ್ವೇನ್ ಬ್ರಾವೋ- ಡ್ವೇನ್ ಬ್ರಾವೋ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಧೋನಿಯ ಕಿರಿಯ ಸಹೋದರನಂತೆ. ಸಿಎಸ್​ಕೆಯ ಈ ಮ್ಯಾಚ್ ವಿನ್ನರ್, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ಒಬ್ಬರು. ಮೂಲ ಬೆಲೆ 2 ಕೋಟಿ ರೂಪಾಯಿಗೆ ಹರಾಜಿಗೆ ಎಂಟ್ರಿಕೊಟ್ಟಿದ್ದ ಬ್ರಾವೋ, 4.40 ಕೋಟಿ ರೂಪಾಯಿಗೆ ಚೆನ್ನೈ ಪಾಲಾಗಿದ್ದರು. ಆದಾಗ್ಯೂ, ಈಗ ಐಪಿಎಲ್ 2023 ರಲ್ಲಿ, ಬ್ರಾವೋ ಹಳದಿ ಜೆರ್ಸಿಯಲ್ಲಿ ಕಾಣಿಸುವುದಿಲ್ಲ. ಹರಾಜಿಗೂ ಮುನ್ನ ಬ್ರಾವೋ ಅವರನ್ನು ಸಿಎಸ್​ಕೆ ಫ್ರಾಂಚೈಸಿ ಬಿಡುಗಡೆ ಮಾಡಿದೆ. ಇದರೊಂದಿಗೆ, ಬ್ರಾವೋ ಐಪಿಎಲ್‌ನಲ್ಲಿ ಮುಂದೆ ಆಡುವುದಕ್ಕೂ ಗ್ರಹಣ ಹಿಡಿದಿದೆ.

3 / 6
ರಾಬಿನ್ ಉತ್ತಪ್ಪ- ಸಿಎಸ್‌ಕೆ ಐಪಿಎಲ್ 2022 ರ ಹರಾಜಿನಲ್ಲಿ ರಾಬಿನ್ ಉತ್ತಪ್ಪ ಅವರ ಮೂಲ ಬೆಲೆ 2 ಕೋಟಿಗೆ ಖರೀದಿಸಿತು. ಆದರೆ ಐಪಿಎಲ್ 2023 ರ ಮೊದಲು, ಚೆನ್ನೈ ತಂಡವು ಅವರನ್ನು ಬಿಡುಗಡೆ ಮಾಡಿದೆ. ಈಗ ರಾಬಿನ್ ಉತ್ತಪ್ಪ ಮೇಲೆ ಬೇರೆ ಯಾವುದೇ ತಂಡ ಬಾಜಿ ಕಟ್ಟುತ್ತದೆ ಎಂಬ ನಿರೀಕ್ಷೆ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಐಪಿಎಲ್ 2023ಕ್ಕೂ ಮುನ್ನ ಉತ್ತಪ್ಪ ಅವರ ಐಪಿಎಲ್ ವೃತ್ತಿಜೀವನಕ್ಕೂ ಗ್ರಹಣ ಬೀಳುತ್ತಿದೆ.

4 / 6
ಮನೀಶ್ ಪಾಂಡೆ - 1 ಕೋಟಿ ರೂ ಮೂಲ ಬೆಲೆಯೊಂದಿಗೆ ಹರಾಜಿಗೆ ಎಂಟ್ರಿಕೊಟ್ಟಿದ್ದ ಮನೀಶ್ ಪಾಂಡೆಯನ್ನು ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ರೂ 4.60 ಕೋಟಿಗೆ ಖರೀದಿಸಿತು. ಆದರೆ, ಐಪಿಎಲ್ 2023 ರ ಮೊದಲು, ಲಕ್ನೋ ಫ್ರಾಂಚೈಸ್ ಕೂಡ ಅವರನ್ನು ಬಿಡುಗಡೆ ಮಾಡಿದೆ. ಈಗ ಮುಂದಿನ ಮಿನಿ ಹರಾಜಿನಲ್ಲಿ ಅವರನ್ನು ಖರೀದಿಸುವ ಸಾಧ್ಯತೆ ತೀರ ಕಡಿಮೆ ಇದೆ.

5 / 6
ಅಜಿಂಕ್ಯ ರಹಾನೆ - ಮೂಲ ಬೆಲೆ 1 ಕೋಟಿ ಕೊಟ್ಟು ರಹಾನೆ ಅವರನ್ನು ಕೆಕೆಆರ್ ಖರೀದಿಸಿತು. ಆದರೆ ಐಪಿಎಲ್ 2022 ರಲ್ಲಿ ರಹಾನೆ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಈಗ ಕೆಕೆಆರ್ ಅವರನ್ನು ಐಪಿಎಲ್ 2023 ರ ಮಿನಿ ಹರಾಜಿಗೂ ಮೊದಲು ಬಿಡುಗಡೆ ಮಾಡಿದೆ. ಕೋಲ್ಕತ್ತಾದ ಈ ನಿರ್ಧಾರದ ನಂತರ ರಹಾನೆ ಅವರ ಐಪಿಎಲ್ ವೃತ್ತಿಜೀವನವು ಕತ್ತಲಮಯವಾಗಿದೆ.

6 / 6
Follow us
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ