- Kannada News Photo gallery A baby elephant died in the womb of a mother elephant in Bannerghatta National Park
Bannerghatta National Park and Zoo: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಗಜ ಗರ್ಭದಲ್ಲೇ ಭ್ರೂಣ ಸಾವು
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ನಲವತ್ತೇಳು ವರ್ಷದ ಸುವರ್ಣ ಎಂಬ ತಾಯಿ ಆನೆ ಭ್ರೂಣದಲ್ಲೇ ಶಿಶು ಆನೆ ಮೃತಪಟ್ಟಿದೆ. ತಾಯಿ ಆನೆಯ ಆರೋಗ್ಯದಲ್ಲೂ ಸಮಸ್ಯೆ ಎದುರಾಗಿದೆ.
Updated on:Apr 20, 2023 | 3:30 PM

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ತಾಯಿ ಆನೆ ಭ್ರೂಣದಲ್ಲೇ ಮರಿಆನೆ ಮೃತಪಟ್ಟಿದೆ.

ನಲವತ್ತೇಳು ವರ್ಷದ ಸುವರ್ಣ ಎಂಬ ಆನೆಗೆ ಪ್ರಸವ ವೇದನೆ ಮುಗಿದರೂ ಮರಿ ಜನನ ಆಗದ ಹಿನ್ನೆಲೆ ವೈದ್ಯರು ಆನೆ ಹೊಟ್ಟೆ ತಪಾಸಣೆ ಮಾಡಿದಾಗ ಭ್ರೂಣದಲ್ಲೇ ಮರಿ ಆನೆ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.

ಸುವರ್ಣ ಜೀವ ಉಳಿಸಲು ವೈದ್ಯರು ಪ್ರಯತ್ನ ಪಟ್ಟಿದ್ದಾರೆ. ಕಳೆದ ರಾತ್ರಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ಸುವರ್ಣಳಿಗೆ ಪ್ರಾಣಿ ಶಸ್ತ್ರ ಚಿಕಿತ್ಸೆ ತಜ್ಞರನ್ನು ಕರೆಸಿ ಚಿಕಿತ್ಸೆ ಕೊಡಿಸಲಾಗಿದೆ.

ತಾಯಿ ಆನೆ ಉಳಿಸಿಕೊಳ್ಳಲು ವೈದ್ಯರು ಶತ ಪ್ರಯತ್ನ ಮಾಡಿದ್ದಾರೆ. ಆನೆ ಸ್ಥಿತಿ ಕಂಡು ಪಾರ್ಕ್ ಸಿಬ್ಬಂದಿ ಕಳವಳ.

ಹಲವಾರು ಜಾತಿಯ ಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ಯಗಳಿಗೆ ನೆಲೆಯಾಗಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ದಾಖಲೆ ಆದಾಯ ಗಳಿಸಿದೆ.

2022-23ನೇ ಸಾಲಿನ ಪ್ರಸಕ್ತ ವರ್ಷದಲ್ಲಿ ಒಟ್ಟು 53 ಕೋಟಿ, 89 ಲಕ್ಷ, 75 ಸಾವಿರದಷ್ಟು ಆದಾಯವನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಗಳಿಸಿದೆ.
Published On - 3:12 pm, Thu, 20 April 23




