Kannada News Photo gallery A Bidar farmer was earning millions of rupees in papaya cultivation in barren land, Karnataka news in kannada
ಬರಡು ಭೂಮಿಯಲ್ಲಿ ಚಮತ್ಕಾರ: ಪಪ್ಪಾಯ ಕೃಷಿಯಲ್ಲಿ ಲಕ್ಷಾಂತರ ರೂ ಗಳಿಸುತ್ತಿರುವ ಬೀದರ್ ರೈತ
ಸುರೇಶ ನಾಯಕ | Updated By: ಗಂಗಾಧರ ಬ. ಸಾಬೋಜಿ
Updated on:
Oct 20, 2024 | 8:41 PM
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಟಕಚಿಂಚೊಳ್ಳಿ ಗ್ರಾಮದ ಮಲ್ಲಿಕಾರ್ಜುನ್ ಮಸಾನೆ ಎಂಬ ರೈತರೊಬ್ಬರು ತಮ್ಮ ಬರಡು ಭೂಮಿಯಲ್ಲಿ ಪಪ್ಪಾಯ ಕೃಷಿ ಮಾಡಿ ವರ್ಷಕ್ಕೆ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದಾರೆ. ಆ ಮೂಲಕ ರೈತ ಮನಸ್ಸು ಮಾಡಿದರೆ ಬರಡು ಭೂಮಿಯಲ್ಲಿ ಕೂಡ ಚಿನ್ನ ತೆಗೆಯಬಹುದು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.
1 / 7
ಆ ರೈತ ಬರಡು ಭೂಮಿಯನ್ನೇ ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಿದ್ದಾರೆ. ಆ ಜಮೀನಿನಲ್ಲಿ ಪಪ್ಪಾಯಿ ಬೆಳೆಸಿ ವರ್ಷಕ್ಕೆ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದಾರೆ. ರೈತ ಮನಸ್ಸು ಮಾಡಿದರೆ ಏನುಬೇಕಾದರೂ ಜಮೀನಿನಲ್ಲಿ ಬೆಳೆದು ಕೈ ತುಂಬಾ ಹಣ ಗಳಿಸಬಹುದೆಂದು ತೋರಿಸಿಕೊಟ್ಟಿದ್ದಾರೆ.
2 / 7
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಟಕಚಿಂಚೊಳ್ಳಿ ಗ್ರಾಮದ ರೈತ ಮಲ್ಲಿಕಾರ್ಜುನ್ ಮಸಾನೆ ಬರಡು ಭೂಮಿಯಲ್ಲಿ ಉತ್ತಮ ಫಲ ತೆಗೆದಿದ್ದಾರೆ. ತಮ್ಮ 12 ಎಕರೆ ಜಮೀನಿನಲ್ಲಿ ಐದಾರು ಎಕರೆಯಷ್ಟು ಜಮೀನು ಪಕ್ಕಾ ಬರಡು ಭೂಮಿಯಾಗಿತ್ತು. ಈ ಜಮೀನಿನಲ್ಲಿ ಏನು ಬೆಳೆಯೋದಿಲ್ಲಾ ಎಂದು ಹತ್ತಾರು ವರ್ಷದಿಂದ ಆ ಜಮೀನಿನನ್ನ ಖಾಲಿ ಬಿಟ್ಟಿದ್ದರು. ಆದರೂ ಮಲ್ಲಿಕಾರ್ಜುನ್ ಮಸಾನೆ ಎಂಬ ರೈತ ಯಾಕೆ ಈ ಜಮೀನಿನಲ್ಲಿಯೂ ಕೃಷಿ ಮಾಡಬಹುದೆಂದು ಯೋಚನೆ ಮಾಡಿ ಅದೇ ಬರಡು ಭೂಮಿಯಲ್ಲಿ ಇದೀಗ ಪಪ್ಪಾಯ ಬೆಳೆದಿದ್ದಾರೆ.
3 / 7
ಕಲ್ಲುಗಳಿಂದ ತುಂಬಿದ್ದ ಜಮೀನನ್ನ ಸ್ವಚ್ಚ ಮಾಡಿ, ಜಮೀನು ಫಲವತ್ತತೆಯನ್ನ ಹೆಚ್ಚು ಮಾಡಲು ಅದಕ್ಕೆ ಬೇಕಾದ ಮೇಕೆ, ಆಕಳು, ಎಮ್ಮೇಯ ಗೊಬ್ಬರವನ್ನ ತಂದು ಹೊಲಕ್ಕೆ ಹಾಕಿದ್ದಾರೆ. ಆನಂತರ ಮೊದಲು ಕಬ್ಬನ್ನ ನಾಟಿ ಮಾಡಿದ್ದಾರೆ. ಕಬ್ಬು ಅಷ್ಟೊಂದು ಹೇಳಿಕೊಳ್ಳುವಷ್ಟು ಇಳುವರಿ ಬಾರದೆ ಇದ್ದಾಗ ಕಳೆದ ವರ್ಷ ಅದೆ ಹೊಲದಲ್ಲಿ 15 ನಂಬರ್ನ ಪಪ್ಪಾಯಿಯನ್ನ ಹಾಕಿದ್ದು ಆ ಪಪ್ಪಾಯಿ ಕಳೆದ ಆರು ತಿಂಗಳಿಂದ ಕಾಯಿ ಬಿಡಲು ಆರಂಭಿಸಿದ್ದು, ಆರು ತಿಂಗಳಲ್ಲಿ ಮೂರು ಎಕರೆಯಷ್ಟು ಜಮೀನಿನಲ್ಲಿ ಸುಮಾರು 18 ಲಕ್ಷ ರೂಪಾಯಿ ಆದಾಯವನ್ನು ಗಳಿಸಿದ್ದಾರೆ.
4 / 7
ಬರಡು ಭೂಮಿ ಎಂದು ಹಾಗೆ ಆ ಹೊಲವನ್ನ ಬಿಟ್ಟಿದ್ದರೆ ನಾನು ಲಕ್ಷಾಧಿಪತಿಯಾಗುತ್ತಿರಲಿಲ್ಲ. ಹೀಗಾಗಿ ಬರಡು ಭೂಮಿ ಎಂದು ನಿರ್ಲಕ್ಷ್ಯ ಮಾಡದೆ ಅದೇ ಜಮೀನನ್ನ ಫಲವತ್ತಾದ ಜಮೀನಾಗಿ ಪರಿವರ್ತನೆ ಮಾಡಿ, ಕೃಷಿಯಲ್ಲಿ ಆದಾಯ ಗಳಿಸಿ ಎಂದು ರೈತ ಮಲ್ಲಿಕಾರ್ಜುನ್ ಹೇಳುಳುತ್ತಾರೆ.
5 / 7
ಇವರು ಪಪ್ಪಾಯಿ ಸಸಿಯನ್ನ ಮಹಾರಾಷ್ಟ್ರದಿಂದ 10 ರೂಪಾಯಿಗೆ ಒಂದರಂತೆ ಸುಮಾರಿ ಮೂರು ಸಾವಿರ ಸಸಿಗಳನ್ನ ತಂದು ನಾಟಿ ಮಾಡಿದ್ದಾರೆ. ಒಂದು ಸಾಲಿನಿಂದ ಇನ್ನೊಂದು ಸಾಲಿಗೆ ಎಂಟು ಅಡಿಯಷ್ಟು ಮತ್ತು ಗಿಡದಿಂದ ಗಿಡಕ್ಕೆ 6 ಅಡಿ ಅಂತರದಲ್ಲಿ ಪಪ್ಪಾಯಿ ಸಸಿಗಳನ್ನ ನಾಟಿ ಮಾಡಿದ್ದಾರೆ.
6 / 7
ನಾಟಿ ಮಾಡಿದ ಆರು ತಿಂಗಳಲ್ಲಿ ಪಪ್ಪಾಯಿ ಹಣ್ಣು ಕಟಾವಿಗೆ ಬಂದಿದ್ದು 6 ತಿಂಗಳ ಅವಧಿಯಲ್ಲಿ ಸುಮಾರು 18 ಲಕ್ಷ ರೂಪಾಯಿ ಪಪ್ಪಾಯಿ ಮಾರಾಟ ಮಾಡಿದ್ದಾರೆ. ಇನ್ನೂ ಇವರ ಪಪ್ಪಾಯಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದ್ದು, ದೆಹಲಿ, ಹೈದ್ರಾಬಾದ್, ರಾಜಸ್ಥಾನದವರು ಇವರ ಹೊಲಕ್ಕೆ ಬಂದು ಪಪ್ಪಾಯಿ ಕಟಾವು ಮಾಡಿಕೊಂಡು ಹೋಗುತ್ತಿದ್ದಾರೆ.
7 / 7
ಇವರು ಬೆಳೆದಿರುವ ಈ 15ನೇ ನಂಬರ್ ಪಪ್ಪಾಯಿ ಉದ್ದವಾಗಿದ್ದು, ಒಂದು ಹಣ್ಣು ಎರಡು ಕೆಜಿಯಷ್ಟು ತೂಕ ಬರುತ್ತದೆ. ಜೊತೆಗೆ ತಿನ್ನಲು ಕೂಡ ರುಚಿಯಾಗಿರುತ್ತದೆ. ಹೀಗಾಗಿ ಇವರು ಬೆಳೆದ ಪಪ್ಪಾಯಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕೂಡ ಇದೆ.