ಗದಗಿನಲ್ಲೊಂದು ಹೈಟೆಕ್ ಹಾಸ್ಟೆಲ್: ಬಡ ವಿದ್ಯಾರ್ಥಿಗಳ ಪಾಲಿಗೆ ವರವಾದ ಸರ್ಕಾರಿ ವಸತಿ ನಿಲಯ
ಸರ್ಕಾರಿ ವಸತಿ ನಿಲಯಗಳು ಅಂದ್ರೆ ಅವ್ಯವಸ್ಥೆ ಆಗರ ಅನ್ನೋದು ಸಾಮಾನ್ಯ. ಆದ್ರೆ, ಈ ಹಾಸ್ಟೇಲ್ ತ್ರೀ ಸ್ಟಾರ್ ಹೊಟೆಲ್ ಗೂ ಏನೂ ಕಮ್ಮಿಯಿಲ್ಲ. ವಿದ್ಯಾರ್ಥಿಗಳಿಗೆ ಓದಲು ಒಳ್ಳೆಯ ವ್ಯವಸ್ಥೆ, ಸ್ವಚ್ಛ ಪರಿಸರ, ಹೈಟೆಕ್ ಲೈಬ್ರರಿ, ಕಂಪ್ಯೂಟರ್ ಲ್ಯಾಬ್, ವಿದ್ಯಾರ್ಥಿಗಳ ಮನಸ್ಸಿಗೆ ಬೇಜಾರ್ ಆದ್ರೆ, ಮನತಣೀಸಲು ಕಲರ್ ಫುಲ್ ಕಾರಂಜಿ ವ್ಯವಸ್ಥೆ ಇದೆ.
1 / 8
ಸರ್ಕಾರಿ ವಸತಿ ನಿಲಯಗಳು ಅಂದರೆ ಅವ್ಯವಸ್ಥೆ ಆಗರ ಅನ್ನೋದು ಸಾಮಾನ್ಯ. ಆದರೆ ಈ ಹಾಸ್ಟೆಲ್ ತ್ರೀ ಸ್ಟಾರ್ ಹೊಟೆಲ್ಗೂ ಏನೂ ಕಮ್ಮಿಯಿಲ್ಲ. ಇಲ್ಲಿನ ವ್ಯವಸ್ಥೆ ನೋಡಿದ್ರೆ, ಅಬ್ಬಾ ಇದು ಸರ್ಕಾರಿ ಹಾಸ್ಟೆಲಾ ಅನ್ನೋ ಪ್ರಶ್ನೆ ಕಾಡದೇ ಇರದು. ಈ ಹೈಟೆಕ್ ಹಾಸ್ಟೇಲ್ ಇರೋದು ಎಲ್ಲಿ ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.
2 / 8
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ಮಾದರಿ ವಸತಿ ನಿಲಯ ಗದಗ ನಗರದ ಮುಳಗುಂದ ರಸ್ತೆಯಲ್ಲಿದೆ. ಹೆಸರಲ್ಲಿ ಮಾತ್ರ ಮಾದರಿಯಲ್ಲ ವ್ಯವಸ್ಥೆಯಲ್ಲೂ ಮಾದರಿಯಾಗಿದೆ.
3 / 8
ಅಂದಹಾಗೇ 180 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವಸತಿ ನಿಯದಲ್ಲಿ ಇದ್ದಾರೆ. ಕಟ್ಟಡವನ್ನು ಬಹಳ ಅಚ್ಚುಕಟ್ಟಾಗಿ ಇಡಲಾಗಿತ್ತು. ಹಾಸ್ಟೆಲ್ ಮುಂದೆ ಗಾರ್ಡ ಮಾಡಲಾಗಿದೆ. ಕಟ್ಟಡದ ಗೋಡೆಗಳ ಮೇಲೆ ಮನಸ್ಸು ಪರಿವರ್ತನೆಯಾಗುವ ಗೋಡೆ ಬರಹಳನ್ನು ಬರೆಯಲಾಗಿದೆ. ಇಡೀ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳ ಚಿತ್ರಗಳನ್ನು ಬಿಡಿಸಲಾಗಿದೆ.
4 / 8
ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡುವ ವಾತಾವರಣ ಸೃಷ್ಠಿ ಮಾಡಲಾಗಿದೆ. ಸ್ವಚ್ಛವಾದ ಪರಿಸರ. ಹೈಟೆಕ್ ಲೈಬ್ರರಿ, ಕಂಪ್ಯೂಟರ್ ಲ್ಯಾಬ್ ಸೇರಿದಂತೆ ಸಾಕಷ್ಟು ಸೌಲಭ್ಯ ನೀಡಲಾಗಿದೆ. ಜಿಲ್ಲೆಯಲ್ಲಿ ಇದೊಂದು ಮಾದರಿ ವಸತಿ ನಿಲಯವೆಂದೆ ಫೇಮಸ್ ಆಗಿದೆ.
5 / 8
ದಿಗಂತದ ದೇವರಾಜ್ ಅರಸು ಅವರ ಪುತ್ಥಳಿಯನ್ನು ನಿರ್ಮಾಣ ಮಾಡಲಾಗಿದ್ದು, ಅದಕ್ಕೆ ಕಲರ್ ಫುಲ್ ಕಾರಂಜಿ ವ್ಯವಸ್ಥೆ ಮಾಡಲಾಗಿದೆ. ಹಾಗೇ ಹೈಟೆಕ್ ಗ್ರಂಥಾಲಯ ಇರೋದರಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಎಲ್ಲಾ ತರಹದ ಪುಸ್ತಕ ವ್ಯವಸ್ಥೆ ಮಾಡಲಾಗಿದೆ.
6 / 8
ಇಲ್ಲಿನ ವಸತಿ ನಿಲಯದ ಅಧಿಕಾರಿ ಬಸವರಾಜ್ ಬಳ್ಳಾರಿ ಅವರು ಮುತುವರ್ಜಿಯಿಂದ ಹಳೇ ವಿದ್ಯಾರ್ಥಿಗಳ ಸಂಘವನ್ನು ಮಾಡಿಕೊಂಡು, ಅವರ ಹಣಕಾಸಿನ ಸಹಯೋಗದಲ್ಲಿ ಹೈಟೆಕ್ ಸ್ಪರ್ಶ ನೀಡಿದ್ದಾರೆ. ಈ ವಸತಿ ನಿಲಯದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಒಳ್ಳೆಯ ಸಾಧನೆ ಮಾಡಿದ್ದಾರೆ.
7 / 8
ಇಡೀ ಜಿಲ್ಲೆಗೆ ಮಾದರಿ ವಸತಿ ನಿಲಯ ಎಂದು ಖ್ಯಾತಿ ಪಡೆದಿದೆ. ಹೀಗಾಗಿ ಇದೇ ಮಾದರಿಯಲ್ಲಿ ಗದಗ ಜಿಲ್ಲೆಯ ಏಳು ತಾಲೂಕಿನಲ್ಲಿ ಇಂಥಹ ಹಾಸ್ಟೆಲ್ ಒಂದೊಂದು ಹಾಸ್ಟೆಲ್ ಮಾಡ್ಬೇಕು ಎನ್ನುವ ಗುರಿಯನ್ನು ಇಲಾಖೆ ಇಟ್ಟುಕೊಂಡಿದೆ.
8 / 8
ವಿದ್ಯಾರ್ಥಿಗಳಿಗೆ ಬೆಡ್ ವ್ಯವಸ್ಥೆ ಹಾಗೂ ಊಟ ಉಪಹಾರದ ವ್ಯವಸ್ಥೆಯನ್ನು ಬಹಳ ಅಚ್ಚುಕಟ್ಟಾಗಿ ಮಾಡಲಾಗಿದೆ.
Published On - 9:46 pm, Mon, 17 June 24