ಬಜೆಟ್ 2024: ಎಂಎಸ್​ಎಂಇ, ಮ್ಯೂಚುವಲ್ ಫಂಡ್, ಆರೋಗ್ಯ, ರಿಯಲ್ ಎಸ್ಟೇಟ್ ವಲಯಗಳ ನಿರೀಕ್ಷೆಗಳಿವು

ನವದೆಹಲಿ, ಜೂನ್ 17: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಏಳನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಜುಲೈ ಕೊನೆಯ ವಾರದಲ್ಲಿ ಇರುವ ಬಜೆಟ್​ಗಾಗಿ ನಿರ್ಮಲಾ ಸೀತಾರಾಮನ್ ಮತ್ತು ಟೀಮ್ ಈಗಾಗಲೇ ತುರುಸಿನ ತಯಾರಿ ನಡೆಸುತ್ತಿದೆ. ಎಂಎಸ್​ಎಂಇ, ಆರೋಗ್ಯ, ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ವಲಯಗಳು ಬಜೆಟ್​ನಿಂದ ಬಹಳಷ್ಟು ನಿರೀಕ್ಷಿಸುತ್ತಿವೆ. ಈ ಬಗ್ಗೆ ಒಂದು ಪುಟ್ಟ ವರದಿ...

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 17, 2024 | 4:13 PM

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಜೂನ್ 22ರಂದು ನವದೆಹಲಿಯಲ್ಲಿ ಜಿಎಸ್​ಟಿ ಮಂಡಳಿ ಸಭೆ ನಡೆಸಲಿದ್ದಾರೆ. ಜುಲೈ 21ರ ಬಳಿಕ ಆ ವಾರದಲ್ಲಿ ಬಜೆಟ್ ಮಂಡನೆ (Union Budget 2024) ಆಗಬಹುದು. ವಿವಿಧ ವಲಯಗಳು ತಮಗೆ ಅನುಕೂಲವಾಗುವ ರೀತಿಯಲ್ಲಿ ಒಂದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿವೆ. ಅಂಥ ಕೆಲ ವಲಯಗಳು ಮತ್ತು ಅವುಗಳ ನಿರೀಕ್ಷೆಗಳೇನು ಈ ವಿವರ ಮುಂದಿನ ಫೋಟೋಗಳಲ್ಲಿ ಓದಬಹುದು.

1 / 7
ರಿಯಲ್ ಎಸ್ಟೇಟ್ ವಲಯ: ಜಿಎಸ್​ಟಿ ಸರಳೀಕರಣ ಸೇರಿದಂತೆ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆಗಳಾಗಬೇಕು. ಅಗ್ಗದ ದರಕ್ಕೆ ವಸತಿ ಲಭ್ಯತೆ ಆಗುವುದಕ್ಕೆ ಸರ್ಕಾರ ಅದ್ಯತೆ ಕೊಡಬೇಕು. ಇದರಿಂದ ರಿಯಲ್ ಎಸ್ಟೇಟ್ ಉದ್ಯಮ ಗಟ್ಟಿಗೊಳ್ಳಲು ಸಾಧ್ಯ ಎನ್ನುವ ಅಭಿಪ್ರಾಯ ಇದೆ.

2 / 7
ಆಯುಷ್ ವಲಯ: ಆಲೋಪಥಿಗೆ ಪರ್ಯಾಯವಾದ ಆರೋಗ್ಯ ಕ್ಷೇತ್ರ ಬಹಳ ಜನಪ್ರಿಯವಾಗುತ್ತಿದೆ. ಮುಂದಿನ ವರ್ಷದಲ್ಲಿ ಈ ವಲಯ 70 ಬಿಲಿಯನ್ ಡಾಲರ್​ನಷ್ಟು ಬೃಹತ್ತಾಗಿರಬಹುದು. ಸಂಶೋಧನೆಗೆ ಹೂಡಿಕೆ, ಆಯುಷ್ ಉತ್ಪನ್ನಗಳಿಗೆ ಸಬ್ಸಿಡಿ ಇತ್ಯಾದಿ ಸೇರಿದಂತೆ ಈ ವಲಯಕ್ಕೆ ವಿಶೇಷ ಪ್ಯಾಕೇಜ್ ಅನ್ನು ನಿರೀಕ್ಷಿಸಲಾಗುತ್ತಿದೆ.

3 / 7
ಆರೋಗ್ಯ ವಲಯ: ಉತ್ತಮ ವೈದ್ಯಕೀಯ ವ್ಯವಸ್ಥೆ ಇರುವುದು ಜನರ ಆರೋಗ್ಯಕ್ಕೆ ಮಾತ್ರವಲ್ಲ ದೇಶದ ಆರ್ಥಿಕ ಆರೋಗ್ಯಕ್ಕೂ ಪೂರಕವಾಗಿರುತ್ತದೆ. ಆಧುನಿಕ ವೈದ್ಯಕೀಯ ತಂತ್ರಜ್ಞಾನಗಳನ್ನು ಪಡೆಯುವುದರಿಂದ ಹಿಡಿದು ವಿವಿಧ ಇನ್​ಫ್ರಾಸ್ಟ್ರಕ್ಚರ್​ಗಳಿಗೆ ಸರ್ಕಾರ ಬಂಡವಾಳ ವೆಚ್ಚ ಹೆಚ್ಚಿಸಬೇಕು ಎನ್ನುವ ಅಪೇಕ್ಷೆ ಈ ವಲಯದಿಂದ ಕೇಳಿಬರುತ್ತಿದೆ.

4 / 7
ಎಂಎಸ್​ಎಂಇ ವಲಯ: ಸೈಬರ್ ಸೆಕ್ಯೂರಿಟಿ ಅಪಾಯ, ಆರ್ಥಿಕ ಹಿಂಜರಿತ, ಸರಬರಾಜು ಸರಪಳಿ ಸ್ಥಗಿತ ಇತ್ಯಾದಿ ಬಾಹ್ಯ ಅಂಶಗಳಿಂದ ಎಂಎಸ್​ಎಂಇ ಉದ್ದಿಮೆ ವಲಯವನ್ನು ರಕ್ಷಿಸುವಂತಹ ಕ್ರಮವನ್ನು ಸರ್ಕಾರ ಕೈಗೊಳ್ಳಬೇಕು. ತಳಮಟ್ಟದಲ್ಲಿ ಸರ್ಕಾರ, ಶಿಕ್ಷಣ ಸಂಸ್ಥೆಗಳು, ಖಾಸಗಿ ವಲಯಗಳ ನಡುವೆ ಸಮನ್ವತೆ ಸಾಧಿಸಲು ಹೊಸ ಸರ್ಕಾರ ಆದ್ಯತೆ ಕೊಡಬೇಕು ಎನ್ನುವ ಬೇಡಿಕೆ ಇದೆ.

5 / 7
ಮ್ಯೂಚುವಲ್ ಫಂಡ್: ಈ ವಲಯದಲ್ಲಿ ಹೂಡಿಕೆಗಳಿಗೆ ತೆರಿಗೆ ವಿನಾಯಿತಿ, ನಿಯಮ ಸ್ಪಷ್ಟತೆ, ಹೂಡಿಕೆದಾರರಿಗೆ ಹಣಕಾಸು ಅರಿವು ಮೂಡಿಸುವುದು ಇವೇ ಮುಂತಾದ ಕ್ರಮಗಳನ್ನು ಕೈಗೊಳ್ಳುವುದರಿಂದ ಉದ್ಯಮ ಗಟ್ಟಿಗೊಳ್ಳುತ್ತದೆ. ಭಾರತದಲ್ಲಿ ವಿವಿಧ ಮ್ಯೂಚುವಲ್ ಫಂಡ್ ಕಂಪನಿಗಳ ಅಡಿಯಲ್ಲಿ ನಿರ್ವಹಣೆ ಆಗುತ್ತಿರುವ ಹೂಡಿಕೆ ಮೊತ್ತ ಬರೋಬ್ಬರಿ 57 ಲಕ್ಷಕೋಟಿ ರೂಗಿಂತಲೂ ಹೆಚ್ಚು ಎಂಬುದು ಗಮನಾರ್ಹ ಸಂಗತಿ.

6 / 7
ಆರ್ ಅಂಡ್ ಡಿ: ದೀರ್ಘಾವಧಿಯಲ್ಲಿ ದೇಶದ ಬೆಳವಣಿಗೆಗೆ ಬಹಳ ಮುಖ್ಯವಾಗಿರುವ ವಲಯ ಎಂದರೆ ಅದು ಸಂಶೋಧನೆ ಕ್ಷೇತ್ರದ್ದು. ಇಲ್ಲಿ ಪ್ರತೀ ಬಜೆಟ್​ನಲ್ಲೂ ಆರ್ ಅಂಡ್ ಡಿ ವಲಯಕ್ಕೆ ಹೆಚ್ಚಿನ ಅನುದಾನದ ನಿರೀಕ್ಷೆ ಇದ್ದೇ ಇರುತ್ತದೆ. ಬಹುತೇಕ ಎಲ್ಲಾ ಬಜೆಟ್​ಗಳಲ್ಲೂ ನಿರಾಸೆಯೇ ಪಡೆಯುತ್ತಿದೆ ಈ ವಲಯ. ಈ ಬಾರಿಯ ಬಜೆಟ್​ನಲ್ಲಿ ಆರ್ ಅಂಡ್ ಡಿ ಕ್ಷೇತ್ರಕ್ಕೆ ಬಂಡವಾಳ ವೆಚ್ಚ ಹೆಚ್ಚುತ್ತದಾ ನೋಡಬೇಕು.

7 / 7
Follow us
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ

ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್

Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು

ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ

ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ

ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ