Kannada News » Photo gallery » According to Vastu shastra these 5 things should not slip out of hand or spill at home often know why in kannada
ಮನೆಯಲ್ಲಿ ಈ ಐದು ವಸ್ತುಗಳು ಪದೇ ಪದೇ ಚೆಲ್ಲಬಾರದು, ಅದರಿಂದ ತೊಂದರೆಯೇ ಹೆಚ್ಚು! ಅವು ಯಾವುವು?
ವಾಸ್ತು ಶಾಸ್ತ್ರವನ್ನು ಚಾಚೂ ತಪ್ಪದೆ ಅನುಸರಿಸಿದರೆ ಮನೆಯಲ್ಲಿ ಸುಖ ಸಮೃದ್ಧಿ, ಯಶಸ್ಸು, ಶಾಂತಿ ನೆಲೆಸುವುದು ಖಚಿತ. ವಾಸ್ತು ಶಾಸ್ತವನ್ನು ಜಗತ್ತಿನಾದ್ಯಂತ ಬಹುತೇಕ ಜನರು ಆಚರಿಸುತ್ತಾರೆ. ವಾಸ್ತು ಶಾಸ್ತ್ರದ ಅನುಸಾರ ರೂಢಿಗತವಾಗಿ ಕೆಲವೊಂದು ನಿರ್ದಿಷ್ಟ ನೀತಿ ನಿಯಮಗಳನ್ನು ಪಾಲಿಸುವುದು ಉಚಿತ. ಅದು ಶುಭ ಮತ್ತು ಶ್ರೇಯಸ್ಕರವೂ ಹೌದು. ಅದರಿಂದ ಮನೆಯಲ್ಲಿ ಧನಾತ್ಮಕತೆ ಹೆಚ್ಚಾಗಿ ಖುಣಾತ್ಮಕ ಪ್ರಭಾವನ್ನು ತಗ್ಗಿಸುತ್ತದೆ. ಆದರೆ ಕೆಲವು ಇರುತ್ತದೆ. ಅದನ್ನು ಮಾಡುವುದರಿಂದ ಮನೆಯಲ್ಲಿ ಖುಣಾತ್ಮಕತೆ ಹೆಚ್ಚಾಗಿಬಿಡುತ್ತದೆ. ಮನೆಯಲ್ಲಿ ಕೆಲವು ವಸ್ತುಗಳು ಪದೇ ಪದೇ ಚೆಲ್ಲುವುದು ಅಶುಭ ಎಂದು ಪರಿಗಣಿಸಲಾಗಿದೆ. ವಾಸ್ತು ಪ್ರಕಾರ ಈ ಐದು ವಸ್ತುಗಳು ಆಗಾಗ ಕೈಯಿಂದ ಜಾರುವುದು ಅಥವಾ ಚೆಲ್ಲುವುದು ನಿಷಿದ್ಧ. ಅದು ಮುಂಬರುವ ಅಶುಭ, ತೊಂದರೆಯ ಸಂಕೇತವಾದೀತು. ಅವು ಯಾವುವು ತಿಳಿಯೋಣ ಬನ್ನೀ.
1. ಉಪ್ಪು ಚೆಲ್ಲುವುದು (Salt Spilling):
ವಾಸ್ತು ಪ್ರಕಾರ ಉಪ್ಪು ಆಗಾಗ ಚೆಲ್ಲಬಾರದು. ಅದರಿಂದ ನಿಮ್ಮ ಕುಟುಂಬಸ್ಥರ ಮೇಲೆ ಶುಕ್ರ ಮತ್ತು ಚಂದ್ರ ಗ್ರಹಗಳ ನಕಾರಾತ್ಮಕ ಪ್ರಭಾವ ತಲೆದೋರುತ್ತದೆ. ಇದರಿಂದ ಮನೆಯಲ್ಲಿ ಧನ ಹಾನಿ ಸಂಭವಿಸುತ್ತದೆ. ಮಾನಸಿಕ ಕ್ಷೋಭೆಯೂ ಉಂಟಾದೀತು. ಇದನ್ನು ವಾಸ್ತು ದೋಷ ಎಂದು ಕರೆಯುತ್ತಾರೆ.
1 / 5
2. ಹಾಲು ಚೆಲ್ಲುವುದು (Milk Spilling): ಒಲೆಯ ಮೇಲೆ ಇಟ್ಟಿರುವ ಪಾತ್ರೆಯಿಂದ ಹಾಕು ಉಕ್ಕುವುದು ಶುಭ. ಆದರೆ ಅದು ಗೃಹಪ್ರವೇಶದಂತಹ ಶೂಭ ಘಲಿಗೆಯಲ್ಲಿ ಅಷ್ಟೆ. ಪದೇ ಒದೇ ಹಾಕು ಉಕ್ಕವುದು ಚಾಸ್ತು ಶಾಸ್ತ್ರದ ಪ್ರಕಾರ ಶುಭ ಸೂಚನೆಯಲ್ಲ. ಹಾಕು ಉಲ್ಲುವುದು ಅಷ್ಟೇ ಅಶುಭ ಅಲ್ಲ; ಮಾಮೂಲಿಯಾಗಿ ಹಾಲು ಚೆಲ್ಲುವುದೂ ಸಹ ಒಳ್ಳೆಯ ಲಕ್ಷಣವಲ್ಲ. ಇದರಿಂದ ಮನೆಯಲ್ಲಿ ವಾಸ್ತು ದೋಷ ಕಾಣಿಸಿಕೊಂಡು, ನಕಾರಾತ್ಮಕತೆ ಹೆಚ್ಚಾಗುತ್ತದೆ.
2 / 5
3. ಕರಿ ಮೆಣಸು ಚೆಲ್ಲುವುದು (Black Pepper Spilling):
ಆಗಾಗ ಕರಿ ಮೆಣಸು ಚೆಲ್ಲುವುದು ಸಹ ಅಶುಭವೇ. ಇದರಿಂದ ದಾಂಪತ್ಯದ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪತಿ- ಪತ್ನಿ ಮಧ್ಯೆ ಸಂಕಟದ ಸ್ಥಿತಿ ಎದುರಾಗುತ್ತದೆ.
3 / 5
4. ಎಣ್ಣೆ ಚೆಲ್ಲುವುದು (Oil Spilling)
ಮನೆಯಲ್ಲಿ ಬಳಸುವ ಎಣ್ಣೆ ಅಂದರೆ ಶನಿ ದೇವರಿಗೆ ಪ್ರಿಯವಾದ ವಸ್ತು. ಇಂತಹ ಚೆಲ್ಲುವುದು ಸಾಮಾನ್ಯ. ಆದರೆ ಇದು ಪದೇಪದೇ ಆಗುತ್ತಿದ್ದರೆ ಒಳ್ಳೆಯದಲ್ಲ. ಹಾಗೆ ಎಣ್ಣೆ ಚೆಲ್ಲುವುದರಿಂದ ಶನಿ ದೇವರ ವಕ್ರ ದೃಷ್ಟಿಗೆ ಗುರಿಯಾಗಬೇಕಾದೀತು. ಇದರಿಂದ ನಿಮ್ಮ ಕುಟುಂಬದಲ್ಲಿ ಕೆಲ ತೊಂದರೆಗಳು ಕಾಣಿಸಿಕೊಳ್ಳಬಹುದು.
4 / 5
5. ಅಕ್ಕಿ ಚೆಲ್ಲುವುದು (Rice Spilling):
ಅಕ್ಕಿ ಅಥವಾ ಅನ್ನ ಕೈಯಿಂದ ಕೆಳಗೆ ಬೀಳುವುದು ಒಳ್ಳೆಯದಲ್ಲ. ಇದರಿಂದ ಅನ್ನಪೂರ್ಣೆ ಕೋಪಗೊಳ್ಳುತ್ತಾಳೆ. ಹಾಗೆ ಅಕ್ಕಿ ಅಥವಾ ಅನ್ನ ಕೈಯಿಂದ ಕೆಳಗೆ ಬಿದ್ದಾಗ ಅನ್ನಪೂರ್ಣೆಯಲ್ಲಿ ಕ್ಷಮೆ ಕೇಳಬೇಕಾಗುತ್ತದೆ.