
ನಿರ್ದೇಶಕ ಅಟ್ಲೀ ಅವರು ಈವರೆಗೆ ನಿರ್ದೇಶನ ಮಾಡಿದ್ದು ನಾಲ್ಕು ಸಿನಿಮಾಗಳು ಮಾತ್ರ. ಈ ನಾಲ್ಕೂ ಚಿತ್ರಗಳು ಹಿಟ್ ಆಗಿವೆ. ‘ರಾಜ ರಾಣಿ’ ಅವರ ಮೊದಲ ಸಿನಿಮಾ. ಈ ಚಿತ್ರ 2013ರಲ್ಲಿ ರಿಲೀಸ್ ಆಯಿತು.

‘ರಾಜಾ ರಾಣಿ’ ಬಳಿಕ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳನ್ನು ದಳಪತಿ ವಿಜಯ್ ಜತೆ ಮಾಡಿದರು. ಸದ್ಯ ಅಟ್ಲೀ ಅವರು ದಳಪತಿ ವಿಜಯ್ ಜತೆ ಸಿನಿಮಾ ಮಾಡುತ್ತಿದ್ದಾರೆ.

ಅಟ್ಲೀ ಅವರು 2014ರಲ್ಲಿ ನಟಿ ಪ್ರಿಯಾ ಅವರನ್ನು ಮದುವೆ ಆದರು. ಇಬ್ಬರೂ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ.

ಪ್ರಿಯಾ ಅವರು ಈಗ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಸಮಯ ಸಿಕ್ಕಾಗ ಅಟ್ಲೀ ಜತೆ ಅವರು ಸುತ್ತಾಟ ನಡೆಸುತ್ತಾರೆ.

ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾಗೆ ಅಟ್ಲೀ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಸಿನಿಮಾದ ಶೂಟಿಂಗ್ ಪ್ರಗತಿಯಲ್ಲಿದೆ.