Updated on: May 23, 2023 | 6:30 AM
ನಟಿ ದೀಪಿಕಾ ದಾಸ್ ಅವರು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಅವರು ಹಿರಿತೆರೆಗೆ ಬರೋಕೂ ರೆಡಿ ಆಗಿದ್ದಾರೆ. ಇದರ ಜೊತೆ ಸೋಶಿಯಲ್ ಮೀಡಿಯಾದಲ್ಲೂ ಬ್ಯುಸಿ ಆಗಿದ್ದಾರೆ.
ದೀಪಿಕಾ ದಾಸ್ ಅವರು ಸಮುದ್ರದ ಅಂಚಲ್ಲಿ ನಿಂತು ಸಖತ್ ಆಗಿ ಪೋಸ್ ನೀಡಿದ್ದಾರೆ. ಈ ಬೋಲ್ಡ್ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ದೀಪಿಕಾ ದಾಸ್ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ. ಈ ಫೋಟೋಗಳನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ.
ದೀಪಿಕಾ ದಾಸ್ ಅಭಿಮಾನಿ ಬಳಗ ದಿನಕಳೆದಂತೆ ಹಿರಿದಾಗುತ್ತಿದೆ. ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದು ಇದಕ್ಕೆ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ.
ದೀಪಿಕಾ ದಾಸ್ ಅವರು ಕಳೆದ ವರ್ಷ ‘ಬಿಗ್ ಬಾಸ್ ಸೀಸನ್ 9’ಕ್ಕೆ ಬಂದಿದ್ದರು. ಇದು ಅವರಿಗೆ ಎರಡನೇ ಅವಕಾಶ. ಫಿನಾಲೆಯಲ್ಲಿ ಅವರು ಸೋತರು.