Nabha Natesh: ಭೀಕರ ರಸ್ತೆ ಅಪಘಾತ: ನಟಿ ನಭಾ ನಟೇಶ್ ಭುಜಕ್ಕೆ ಹಲವು ಬಾರಿ ಸರ್ಜರಿ; ತಡವಾಗಿ ಹೊರಬಿತ್ತು ಸುದ್ದಿ
TV9 Web | Updated By: ರಾಜೇಶ್ ದುಗ್ಗುಮನೆ
Updated on:
Jan 10, 2023 | 1:20 PM
ಬಳಿಕ ಕೆಲವು ತೆಲುಗು ಸಿನಿಮಾಗಳಲ್ಲಿ ನಭಾ ನಟಿಸಿದರು. 2021ರ ಬಳಿಕ ಅವರ ನಟನೆಯ ಯಾವ ಚಿತ್ರಗಳೂ ರಿಲೀಸ್ ಆಗಿಲ್ಲ. ಅವರು ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಹೀಗೇಕೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು.
1 / 5
ನಟಿ ನಭಾ ನಟೇಶ್ ಅವರು 2015ರಲ್ಲಿ ರಿಲೀಸ್ ಆದ ಕನ್ನಡದ ‘ವಜ್ರಕಾಯ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. 2019ರಲ್ಲಿ ರಿಲೀಸ್ ಆದ ತೆಲುಗಿನ ‘ಇಸ್ಮಾರ್ಟ್ ಶಂಕರ್’ ಚಿತ್ರ ಅವರ ವೃತ್ತಿ ಜೀವನಕ್ಕೆ ಮೈಲೇಜ್ ನೀಡಿತು.
2 / 5
ಬಳಿಕ ಕೆಲವು ತೆಲುಗು ಸಿನಿಮಾಗಳಲ್ಲಿ ನಭಾ ನಟಿಸಿದರು. 2021ರ ಬಳಿಕ ಅವರ ನಟನೆಯ ಯಾವ ಚಿತ್ರಗಳೂ ರಿಲೀಸ್ ಆಗಿಲ್ಲ. ಅವರು ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಹೀಗೇಕೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು.
3 / 5
ಇದಕ್ಕೆ ಈಗ ಉತ್ತರ ಸಿಕ್ಕಿದೆ. 2022ರಲ್ಲಿ ನಭಾ ನಟೇಶ್ ಅವರು ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಈ ವೇಳೆ ಎಡಗೈ ಹಾಗೂ ಎಡ ಭುಜಕ್ಕೆ ಪೆಟ್ಟಾಗಿತ್ತು. ಇದರಿಂದ ಹಲವು ಬಾರಿ ಅವರು ಸರ್ಜರಿಗೆ ಒಳಗಾಗಿದ್ದರು.
4 / 5
ಈ ವಿಚಾರವನ್ನು ನಭಾ ಅವರು ಸೋಶಿಯಲ್ ಮೀಡಿಯಾದಲ್ಲಿ ಈಗ ರಿವೀಲ್ ಮಾಡಿದ್ದಾರೆ. ಅವರು ಈಗ ಚೇತರಿಕೆ ಕಂಡಿದ್ದು, ಮತ್ತೆ ಕಂಬ್ಯಾಕ್ ಮಾಡುವ ಸೂಚನೆ ನೀಡಿದ್ದಾರೆ.
5 / 5
ನಭಾ ಅವರು ಹಂಚಿಕೊಂಡಿರುವ ಫೋಟೋದಲ್ಲಿ ಎಡ ಭುಜದ ಸಮೀಪ ಸರ್ಜರಿ ಮಾಡಿದ ಗುರುತು ಕಾಣುತ್ತಿದೆ. ಅವರು ಬೇಗ ಕಂಬ್ಯಾಕ್ ಮಾಡಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.