Updated on: Dec 04, 2022 | 7:05 PM
ಮಾಜಿ ನೀಲಿ ತಾರೆ, ಬಾಲಿವುಡ್ ಚೆಲುವೆ ಸನ್ನಿ ಲಿಯೋನ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ತಾವು ಭೇಟಿ ನೀಡುವ ಸ್ಥಳಗಳಿಂದ ಹಿಡಿದು ತಮ್ಮ ಹೊಸ ಬಗೆಯ ಉಡುಪುಗಳ ಕುರಿತು ಅವರು ಫೋಟೋಗಳನ್ನು ಶೇರ್ ಮಾಡುತ್ತಾರೆ.
ನಟಿ ಸನ್ನಿ ಲಿಯೋನ್ ಸದ್ಯ ವೆಕೇಷನ್ ಮೂಡ್ನಲ್ಲಿದ್ದು, ಬೀಚ್ ಒಂದರಲ್ಲಿ ಕೂಲ್ ಕನ್ನಡಕ ಹಾಕೊಂಡು ಸಖತ್ ಆಗಿ ಪೊಸ್ ನೀಡಿದ್ದಾರೆ.
ಬೀಚ್ ಬಳಿ ಸನ್ನಿ ಬಿಳಿ ಮತ್ತು ಹಸಿರು ಬಣ್ಣದ ಬಟ್ಟೆ ಧರಿಸಿದ್ದು, ಸೂರ್ಯನ ಕಿರಣಗಳಿಗೆ ಮೈ ಒಡ್ಡಿದ್ದಾರೆ.
ಸನ್ನಿ ಹಂಚಿಕೊಂಡಿರುವ ಫೋಟೋಗಳನ್ನು ನೋಡಿದ ಫ್ಯಾನ್ಸ್ 'ನೀ ಹಿಂಗ ನೋಡಬ್ಯಾಡ ನನ್ನ' ಎಂದು ಫನ್ನಿ ಆಗಿ ಕಮೆಂಟ್ ಮಾಡಿದ್ದಾರೆ.
ನಟಿ ಸನ್ನಿ ಲಿಯೋನ್ ಬಾಲಿವುಡ್ ಮಾತ್ರವಲ್ಲದೆ, ಬೇರೆ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ನಟ ಉಪೇಂದ್ರ ಅವರ 'ಯುಐ' ಚಿತ್ರಕ್ಕೆ ಸನ್ನಿಯನ್ನು ಕರೆತರಲಾಗುತ್ತಿದೆ ಎಂಬ ಟಾಕ್ ಕೇಳಿಬರುತ್ತಿದೆ.