Adah Sharma: ‘ದಿ ಕೇರಳ ಸ್ಟೋರಿ’ ಟ್ರೇಲರ್​ನಲ್ಲಿ ಐಸಿಸ್ ಕಥೆ; ಗಮನ ಸೆಳೆದ ನಟಿ ಅದಾ ಶರ್ಮಾ

Updated on: Apr 27, 2023 | 12:40 PM

ಅದಾ ಶರ್ಮಾ ಅವರು ಗ್ಲಾಮರ್ ಪಾತ್ರದ ಮೂಲಕ ಗಮನ ಸೆಳೆದವರು. ಈಗ ಅವರು ಹೊಸ ಪ್ರಯೋಗಕ್ಕೆ ಇಳಿದಿದ್ದಾರೆ. ಗ್ಲಾಮರ್ ಅವತಾರ ಬದಿಗಿಟ್ಟು, ನಟನೆಗೆ ಹೆಚ್ಚು ಅವಕಾಶ ಇರುವ ಪಾತ್ರ ಒಪ್ಪಿದ್ದಾರೆ.

1 / 5
ನಟಿ ಅದಾ ಶರ್ಮಾ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿ ಎಲ್ಲ ಕಡೆಗಳಲ್ಲಿ ಚರ್ಚೆ ಆಗುತ್ತಿದೆ. ಈ ಚಿತ್ರದಿಂದ ಅದಾ ಶರ್ಮಾ ವೃತ್ತಿ ಬದುಕಿಗೆ ಮೈಲೇಜ್ ಸಿಗುವ ಸೂಚನೆ ಸಿಕ್ಕಿದೆ.

ನಟಿ ಅದಾ ಶರ್ಮಾ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿ ಎಲ್ಲ ಕಡೆಗಳಲ್ಲಿ ಚರ್ಚೆ ಆಗುತ್ತಿದೆ. ಈ ಚಿತ್ರದಿಂದ ಅದಾ ಶರ್ಮಾ ವೃತ್ತಿ ಬದುಕಿಗೆ ಮೈಲೇಜ್ ಸಿಗುವ ಸೂಚನೆ ಸಿಕ್ಕಿದೆ.

2 / 5

ಅದಾ ಶರ್ಮಾ ಅವರು ಗ್ಲಾಮರ್ ಪಾತ್ರದ ಮೂಲಕ ಗಮನ ಸೆಳೆದವರು. ಈಗ ಅವರು ಹೊಸ ಪ್ರಯೋಗಕ್ಕೆ ಇಳಿದಿದ್ದಾರೆ. ಗ್ಲಾಮರ್ ಅವತಾರ ಬದಿಗಿಟ್ಟು, ನಟನೆಗೆ ಹೆಚ್ಚು ಅವಕಾಶ ಇರುವ ಪಾತ್ರ ಒಪ್ಪಿದ್ದಾರೆ.

3 / 5

ಕೇರಳದ ಹಿಂದೂ ಹುಡುಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುತ್ತಾಳೆ. ನಂತರ ಆಕೆ ಐಸಿಸ್ ಸೇರುತ್ತಾಳೆ. ಈ ಕಥೆಯನ್ನು ‘ದಿ ಕೇರಳ ಸ್ಟೋರಿ’ಯಲ್ಲಿ ಹೇಳಲಾಗುತ್ತಿದೆ.

4 / 5

ಇದು ನೈಜ ಘಟನೆ ಆಧಾರಿತ ಸಿನಿಮಾ ಎಂದು ನಿರ್ದೇಶಕ ಸುದಿಪ್ತೋ ಸೇನ್ ಹೇಳಿದ್ದಾರೆ. ಈ ಕಾರಣಕ್ಕೂ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

5 / 5

ಈ ಮೊದಲು ಪುನೀತ್ ರಾಜ್​ಕುಮಾರ್ ನಟನೆಯ ‘ರಣ ವಿಕ್ರಮ’ ಸಿನಿಮಾದಲ್ಲಿ ಅದಾ ಶರ್ಮಾ ನಟಿಸಿದ್ದರು. ಈ ಮೂಲಕ ಅವರು ಕನ್ನಡಕ್ಕೆ ಪರಿಚಯಗೊಂಡಿದ್ದರು.

Published On - 12:33 pm, Thu, 27 April 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us