AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಡಿಕೇರಿಯಲ್ಲಿ ಸುಂದರ ಪರಿಸರದ ಮಧ್ಯೆ ಪ್ರವಾಸಿಗರಿಗೆ ಸಾಹಸಮಯ ಚಟುವಟಿಕೆಗಳು: ಇಲ್ಲಿದೆ ನೋಡಿ ಝಲಕ್​

ಮಡಿಕೇರಿ ಪ್ರವಾಸ ಬರುವವರಿಗೆ, ಆಕ್ಟಿವಿಟಿಗಳನ್ನ ಬಯಸುವವರಿಗೆ ಅಂತಾನೆ ಮಡಿಕೇರಿಯ ರಾಜಾಸೀಟ್​ನಲ್ಲಿ ವಿವಿಧ ಮಾದರಿಯ ಸಾಹಸಮಯ ಚಟುವಟಿಕೆಗಳನ್ನ ಆರಂಭ ಮಾಡಲಾಗಿದೆ. ಸುಂದರ ಪರಿಸರವನ್ನ ಎಂಜಾಯ್ ಮಾಡುವುದರ ಜೊತೆಗೆ ಅದೇ ಪರಿಸರದ ಮಧ್ಯದಲ್ಲಿ ಸಾಹಸ ಚಟುವಟಿಕೆಗಳನ್ನ ಮಾಡಿಯೂ ಸಖತ್ ಥ್ರಿಲ್ ಆಗಬಹುದು. ಅದರ ಝಲಕ್​ ಇಲ್ಲಿದೆ ನೋಡಿ

ಕಿರಣ್ ಹನುಮಂತ್​ ಮಾದಾರ್
|

Updated on: Jun 09, 2023 | 1:33 PM

Share
ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಛಂಗನೆ ಬಿಟ್ಟ ಬಾಣದಂತೆ ಮೇಲೆಕ್ಕೆ ನೆಗೆಯುವ ಜನರು ಒಂದ್ಕಡೆ. ಮತ್ತೊಂದ್ಕಡೆ ಜಿಪ್ ಲೈನ್​ನಲ್ಲಿ ಬಂಧಿಯಾಗಿ ಮುಗಿಲೆತ್ತರದಲ್ಲಿ ಶರವೇಗದಲ್ಲಿ ಚಲಿಸುವ ಸಾಹಸಿಗಳು. ಒಂದಾ ಎರಡ, ಎಷ್ಟೊಂದು ಸಾಹಸಗಳು ಗೊತ್ತಾ. ಇವೆಲ್ಲಾ ನೋಡಲು ಸಿಗುವುದು ಮಡಿಕೇರಿಯ ವಿಶ್ವ ಪ್ರಸಿದ್ಧ ವೀವ್ ಪಾಯಿಂಟ್ ರಾಜಾಸೀಟ್​ನಲ್ಲಿ.

1 / 8
ಹೌದು ರಾಜಾಸೀಟ್​ನ ಸುಂದರ ಉದ್ಯಾನವನಕ್ಕೆ ಮನಸೋಲದವರಿಲ್ಲ. ಆಕರ್ಷಕ ಹೂ ರಾಶಿಗಳ ಮಧ್ಯೆ ಹೆಜ್ಜೆ ಹಾಕುತ್ತಾ, ಮಂಜಿನ ರಾಶಿಯನ್ನ ಹೊದ್ದು ಮಲಗುವ ಬೆಟ್ಟಗುಡ್ಡಗಳನ್ನ ಎಂಜಾಯ್ ಮಾಡುತ್ತಾ ಸುತ್ತವುದೇ ಒಂದು ಆನಂದ. ಇಂತಹ ಪರಿಸರದಲ್ಲೇ ಇದೀಗ ಜಿಲ್ಲಾಡಳಿತ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಡ್ವೆಂಚರಸ್ ಆಕ್ಟಿವಿಟಿಗಳನ್ನ ಏರ್ಪಾಡು ಮಾಡಲಾಗಿದೆ.

2 / 8
ಒಟ್ಟು ನಾಲ್ಕು ಬಗೆಯ ಸಾಹಸಗಳನ್ನ ಇಲ್ಲಿ ಪ್ರವಾಸಿಗರಿಗೆ ಪರಿಚಯಿಸಲಾಗಿದೆ. ಪುಟ್ಟ ಮಕ್ಕಳಿಗಾಗಿ ಕಿಡ್ಸ್​ ಝೋನ್ ಆಕ್ಟಿವಿಟಿ, ಹಾಗೆಯೇ ಟ್ರೆಕ್ಕಿಂಗ್ ಅನುಭವ ನೀಡುವ ಲೋ ರೋಪ್ ಆಕ್ಟಿವಿಟಿ ಒಂದೆಡೆಯಾದ್ರೆ, ಗುಂಡಿಗೆ ಗಟ್ಟಿ ಇರುವವರಿಗಾಗಿಯೇ ರಾಕೆಟ್ ಇಜೆಕ್ಟರ್ ಸಿದ್ಧಪಡಿಸಲಾಗಿದೆ.

3 / 8
ಇಲಾಸ್ಟಿಕ್ ಮಾದರಿಯ ಹಗ್ಗವನ್ನು ಸೊಂಟಕ್ಕೆ ಕಟ್ಟಿಕೊಂಡ ಜನರನ್ನ ಚಂಗನೆ ಮೇಲಕ್ಕೆ ಚಿಮ್ಮಿಸಲಾಗುತ್ತದೆ. ಈ ಸಂದರ್ಭ ಜೀವವೇ ಬಾಯಿಗೆ ಬಂದಂತಾಗುತ್ತದೆ. ಆದ್ರೆ ಇದು ಸಖತ್ ಥ್ರಿಲ್ ನೀಡುತ್ತದೆ. ಹಾಗಾಗಿಯೇ ಈ ಸಾಹಸಕ್ಕೆ ಜನರು ಮುಗಿ ಬೀಳುತ್ತಾರೆ.

4 / 8
ಇನ್ನು ಜಿಪ್ ಲೈನ್ ಅಂತೂ ಅಕ್ಷರಶಃ ಆಕಾಶದಲ್ಲೇ ಹಾರಾಡಿದ ಅನುಭವ ನೀಡುತ್ತದೆ. ಸುಮಾರು 380 ಮೀಟರ್ ದೂರ ಶರವೇಗದಲ್ಲಿ ಬಾನಾಡಿಯಂತೆ ಇಲ್ಲಿ ಚಲಿಸಬಹುದು. ಜಿಪ್ ಲೈನ್​ ಅನ್ನ ವಿವಿಧ ವಯೋಮಾನದವರೆಗೆ ಎಂಜಾಯ್ ಮಾಡಬಹುದು.

5 / 8
ಇನ್ನು ಇದುವರೆಗೆ ರಾಜಾಸೀಟ್​ನಲ್ಲಿ​ ಬರುವ ಪ್ರವಾಸಿಗರು ಕೇವಲ ಪ್ರಕೃತಿ ಸೌಂದರ್ಯ ಮಾತ್ರ ವೀಕ್ಷಿಸಬಹುದಿತ್ತು. ಆದ್ರೆ, ಇದೀಗ ಪ್ರಕೃತಿಯ ಮಧ್ಯದಲ್ಲೇ ಇಂತಹ ಆಕ್ಟಿವಿಟೀಸ್​ ಎಂಜಾಯ್ ಮಾಡುತ್ತಾ ಇನ್ನಿಲ್ಲದ ಥ್ರಿಲ್ ಪಡೆಯುತ್ತಿದ್ದಾರೆ.

6 / 8
ಹಾಗೆ ನೋಡಿದ್ರೆ, ಇದು ಕೇವಲ ಯುವ ಜನರಿಗೆ ಸೀಮಿತವಲ್ಲ. ಮೂರು ವರ್ಷದಿಂದ 80 ವರ್ಷದವರೆಗೂ ಇಲ್ಲಿ ಸಾಹಸ ಚಟುವಟೆಕೆಗಳನ್ನ ಎಂಜಾಯ್ ಮಾಡಬಹುದು. ಹಾಗಾಗಿ ಮಡಿಕೇರಿ ಪ್ರವಾಸ ಬರುವವರಿಗೆ ಇದು ಬೋನಸ್ ಆಗಿ ದೊರಕಿದಂತಾಗಿದೆ. ಜೊತೆಗೆ ಭದ್ರತಾ ವ್ಯವಸ್ಥೆಯೊಂದಿಗೇ ಈ ಸಾಹಸ ಚಟುವಟಿಕೆ ನಡೆಯುತ್ತದೆ ಎನ್ನುವುದು ವಿಶೇಷ.

7 / 8
ಒಟ್ಟಾರೆ, ಕೊಡಗು ಪ್ರವಾಸ ಅನ್ನುವುದೇ ಒಂದು ಅಡ್ವೆಂಚರಸ್​. ಅಂತಹದರಲ್ಲಿ ಇಂತಹ ಕೃತಕ ಸಾಹಸ ಚಟುವಟಿಕೆಗಳು ಪ್ರವಾಸಿಗರಿಗೆ ಇನ್ನಷ್ಟು ಥ್ರಿಲ್ ನೀಡುವುದರ ಜೊತೆಗೆ ಅವರ ಪ್ರವಾಸವನ್ನ ಮತ್ತಷ್ಟು ಸ್ಮರಣೀಯವಾಗಿಸುತ್ತಿದೆ.

8 / 8
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!