
67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಅಕ್ಟೋಬರ್ 25ರಂದು ಪ್ರದಾನ ಮಾಡಲಾಯಿತು. ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಯನ್ನು ‘ಅಕ್ಷಿ’ ಚಿತ್ರ ಪಡೆದುಕೊಂಡಿದೆ.

‘ಅಕ್ಷಿ’ ಚಿತ್ರತಂಡವು ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ ಹಾಗೂ ಖ್ಯಾತ ಕಲಾವಿದರೊಂದಿಗೆ ಸಂತಸದಿಂದ ತೆಗೆಸಿಕೊಂಡ ಚಿತ್ರಗಳು ಇಲ್ಲಿವೆ.

‘ಅಕ್ಷಿ’ ಚಿತ್ರವನ್ನು ಮನೋಜ್ ಕುಮಾರ್ ನಿರ್ದೇಶನ ಮಾಡಿದ್ದು, ಗೋವಿಂದೇ ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಶೇಷವೆಂದರೆ ಈ ಚಿತ್ರದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಮ್ ಅವರು ಹಾಡಿರುವ ಹಾಡೊಂದಿದೆ. ಅದು ಅವರು ಚಿತ್ರಗಳಲ್ಲಿ ಹಾಡಿರುವ ಕೊನೆಯ ಗೀತೆಯಾಗಿದ್ದು, ಚಿತ್ರವನ್ನು ಎಸ್.ಪಿ.ಬಿ ಅವರಿಗೆ ಅರ್ಪಿಸಲಾಗಿದೆ.

ಚಿತ್ರವನ್ನು ಕಲಾದೇಗುಲ ಶ್ರೀನಿವಾಸ್ ನಿರ್ಮಾಣ ಮಾಡಿದ್ದು, ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಒಟಿಟಿ ಕಡೆಗೂ ಅವರ ಒಲವಿದೆ.

ಚಿತ್ರಕ್ಕೆ ಕಲಾದೇಗುಲ ಶ್ರೀನಿವಾಸ್ ಅವರೇ ಸಂಗೀತ ನಿಡಿದ್ದು, ಮುಕುಲ್ ಗೌಡ ಛಾಯಾಗ್ರಹಣ ಮಾಡಿದ್ದಾರೆ.

‘ಅಕ್ಷಿ’ ಚಿತ್ರವು ನೇತ್ರದಾನದ ಕುರಿತಾದ ಕತೆಯನ್ನು ಹೊಂದಿದೆ.

ಡಾ.ರಾಜ್ಕುಮಾರ್ ಅವರ ನೇತ್ರದಾನವು ಚಿತ್ರಕ್ಕೆರ ಪ್ರೇರಣೆ ಎನ್ನುವುದು ನಿರ್ದೇಶಕರ ನುಡಿ.
Published On - 6:34 pm, Tue, 26 October 21