
'ಹೆಬ್ಬುಲಿ' ನಟಿ ಅಮಲಾ ಪೌಲ್ ಎರಡನೇ ಬಾರಿ ಮದುವೆಯಾಗಿದ್ದಾರೆ.

ತಮ್ಮ ಬಾಯ್ಫ್ರೆಂಡ್ ಜಗತ್ ಸಾಯಿ ಅವರೊಡನೆ ಅಮಲಾ ಪೌಲ್ ಕೊಚ್ಚಿಯಲ್ಲಿ ಇಂದು ವಿವಾಹವಾಗಿದ್ದಾರೆ.

2014ರಲ್ಲಿ ತಮಿಳು ಸಿನಿಮಾ ನಿರ್ದೇಶಕ ವಿಜಯ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು ನಟಿ ಅಮಲಾ ಪೌಲ್.

ಆದರೆ ವಿಜಯ್ ಜೊತೆ ಭಿನ್ನಾಭಿಪ್ರಾಯಗಳಿಂದ ಅವರಿಂದ ದೂರವಾದರು ನಟಿ ಅಮಲಾ.

ಅದಾದ ಬಳಿಕ ಗಾಯಕ ಭುವೀಂದರ್ ಜೊತೆಗೆ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡಿತು.

ಆದರೆ ತಮ್ಮ ಬಾಯ್ಫ್ರೆಂಡ್ ಭುವೀಂದರ್ ತಮಗೆ ಕಿರುಕುಳ ನೀಡಿದ್ದಾನೆ ಎಂದು ಅಮಲಾ ಆರೋಪ ಮಾಡಿ ಭುವೀಂದರ್ ಇಂದ ದೂರಾದರು.

ಈಗ ತಮ್ಮ ಬಾಯ್ಫ್ರೆಂಡ್ ಜಗತ್ ಸಾಯಿ ಜೊತೆಗೆ ಕೊಚ್ಚಿಯ ರೆಸಾರ್ಟ್ ಒಂದರಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.