
ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಭಾರತದಲ್ಲಿ ಪ್ರೈಮ್ ಡೇ ಸೇಲ್ ಹಮ್ಮಿಕೊಂಡಿದೆ. ಇದೇ ಜುಲೈ 15 ರಿಂದ ಆರಂಭವಾಗಿ ಜುಲೈ 16ರ ವರೆಗೆ ನಡೆಯಲಿದೆ. ಈ ಬಾರಿ ಕೇವಲ 48 ಗಂಟೆಗಳ ಸೇಲ್ ಅನ್ನು ಮಾತ್ರ ಆಯೋಜನೆ ಮಾಡಿದೆ.

ಅಮೆಜಾನ್ ಹೇಳಿರುವ ಪ್ರಕಾರ ಈ ಸೇಲ್ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳಾದ ಲ್ಯಾಪ್ಟಾಪ್, ಇಯರ್ಫೋನ್ಸ್, ವಾಚ್ಗಳು ಸೇರಿದಂತೆ ಅನೇಕ ಪ್ರಾಡಕ್ಟ್ ಮೇಲೆ ಶೇ. 75 ರಷ್ಟು ರಿಯಾಯಿತಿ ಇರಲಿದೆಯಂತೆ. ಅಂತೆಯೆ ಸ್ಮಾರ್ಟ್ಫೋನ್ಗಳ ಮೇಲೆ ಶೇ. 40 ರಷ್ಟು ಮತ್ತು ಸ್ಮಾರ್ಟ್ ಟಿವಿ ಹಾಗೂ ಗೃಹುಪಯೋಗಿ ವಸ್ತುಗಳ ಮೇಲೆ ಶೇ. 60 ರಷ್ಟು ಡಿಸ್ಕೌಂಟ್ ಇರುತ್ತದಂತೆ.

ಅಮೆಜಾನ್ ಪ್ರೈಮ್ ಡೇ ಸೇಲ್ನಲ್ಲಿ ರಿಯಲ್ ಮಿ ನಾರ್ಜೊ N53, ನಾರ್ಡ್ CE 3 Lite 5G, ಒನ್ಪ್ಲಸ್ 11R 5G, ರೆಡ್ಮಿ, ಐಕ್ಯೂ ಸೇರಿದಂತೆ ಹಲವು ಸ್ಮಾರ್ಟ್‌ಫೋನ್‌ಗಳು ಭರ್ಜರಿ ರಿಯಾಯಿತಿ ದರದಲ್ಲಿ ಮಾರಾಟ ಕಾಣಲಿದೆ.

ಐಫೋನ್ 14 128GB ಆವೃತ್ತಿಯು ಭಾರತದಲ್ಲಿ 79,900 ರೂ. ಗೆ ಬಿಡುಗಡೆ ಆಗಿತ್ತು. ಇದು ಅಮೆಜಾನ್ ಪ್ರೈಮ್ ಡೇ ಸೇಲ್ನಲ್ಲಿ ಡಿಸ್ಕೌಂಟ್ ಪಡೆದುಕೊಂಡು ಕೇವಲ 66,499 ರೂ. ಗೆ ನಿಮ್ಮದಾಗಿಸಬಹುದು ಎಂದು ಅಮೆಜಾನ್ ಹೇಳಿದೆ. ಇದಿಷ್ಟೆ ಅಲ್ಲದೆ ಆಯ್ದ ಎಸ್ಬಿಐ ಬ್ಯಾಂಕ್ ಕಾರ್ಡ್ ಮತ್ತು ಐಸಿಐಸಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಶೇ. 10 ರಷ್ಟು ರಿಯಾಯಿತಿ ಪಡೆದುಕೊಳ್ಳಬಹುದು.

ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು, ಉಪಕರಣಗಳು, ಟಿವಿಗಳು ಮತ್ತು ಅನೇಕ ಉಪಕರಣಗಳು ಆಕರ್ಷಕ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಈ ದಿನದಂದು ಗ್ರಾಹಕರು ಎಕೋ (ಅಲೆಕ್ಸಾ ಜೊತೆ), ಫೈರ್ ಟಿವಿ ಮತ್ತು ಕಿಂಡಲ್ ಸಾಧನಗಳಲ್ಲಿ ಉತ್ತಮ ಡಿಸ್ಕೌಂಟ್ ಪಡೆಯುತ್ತಾರೆ.

ಜೊತೆಗೆ ಇತ್ತೀಚಿನ ಸ್ಮಾರ್ಟ್ ಸ್ಪೀಕರ್‌ಗಳು, ಸ್ಮಾರ್ಟ್ ಡಿಸ್ ಪ್ಲೇಗಳು ಮತ್ತು ಫೈರ್ ಟಿವಿ ಉತ್ಪನ್ನಗಳ ಮೇಲೆ ಶೇಕಡಾ 55 ರಷ್ಟು ರಿಯಾಯಿತಿ ಇರುತ್ತದೆ ಎಂದು ಅಮೆಜಾನ್ ಹೇಳಿದೆ.

ಭಾರತದ 25 ನಗರಗಳಿಂದ ಆರ್ಡರ್ ಮಾಡುವ ಪ್ರೈಮ್ ಸದಸ್ಯರು ಅದೇ ದಿನ ಅಥವಾ ಆರ್ಡರ್ ಮಾಡಿದ ಮರುದಿನ ಡೆಲಿವರಿ ಆಗುತ್ತದೆ.