- Kannada News Photo gallery Amit Shah held a breakfast meeting at BS Yediurappa's residence in Bengaluru on Friday
Photos: ಅಮಿತ್ ಶಾಗೆ ಉಪಹಾರ ಬಡಿಸಿದ ಬಿವೈ ವಿಜಯೇಂದ್ರ, ಟಿಫನ್ ನೆಪದಲ್ಲಿ ಮಹತ್ವದ ರಾಜಕೀಯ ಚರ್ಚೆ
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉಪಹಾರ ಕೂಟದಲ್ಲಿ ರಾಜ್ಯ ನಾಯಕರೊಂದಿಗೆ ಮಹತ್ವದ ಚರ್ಚೆ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿವಾಸದಲ್ಲಿ ನಡೆದ ಉಪಹಾರಕೂಟದ ವೇಳೆ ಶಾ, ರಾಜ್ಯ ರಾಜಕೀಯ ಪರಿಸ್ಥಿತಿ ಬಗ್ಗೆ ನಾಯಕರೊಂದಿಗೆ ಚರ್ಚೆ ಮಾಡಿದ್ದಾರೆ.
Updated on: Mar 24, 2023 | 1:12 PM

Amit Shah held a breakfast meeting at BS Yediurappa's residence in Bengaluru

ಅಮಿತ್ ಶಾಗೆ ಇಡ್ಲಿ, ದೋಸೆ, ಪೊಂಗಲ್, ಉಪ್ಪಿಟ್ಟು, ರಸ್ ಮಲಾಯ್ ಖಾದ್ಯಗಳನ್ನು ಸಿದ್ಧ ಪಡಿಸಲಾಗಿತ್ತು.

ಉಪಾಹಾರ ಕೂಟದಲ್ಲಿ ಸಿಎಂ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ ಪಾಲ್ಗೊಂಡಿದ್ದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಅಮಿತ್ ಶಾಗೆ ಉಪಹಾರ ಬಡಿಸಿ ಗಮನ ಸೆಳೆದರು.

ಈ ವೇಳೆ ಪ್ರಸ್ತುತ ಸ್ಥಿತಿಗತಿಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಿದ್ದು, ಮತ್ತೆ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಣತಂತ್ರದ ಬಗ್ಗೆ ಮಾತುಕತೆ ನಡೆಯಿತು,

ಈ ವೇಳೆ ಶಾ ಬಿಎಸ್ವೈಗಿಂತ ಅವರ ಪುತ್ರ ವಿಜಯೇಂದ್ರಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ಇದು ರಾಜ್ಯ ಬಿಜೆಪಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಟಿಫನ್ಗೆ ಅಂತ ಬಂದ ಅಮಿತ್ ಶಾ ಬಿಎಸ್ ಯಡಿಯೂರಪ್ಪನ ಕೈಯಲ್ಲಿದ್ದ ಹೂಗುಚ್ಛ ವಿಜಯೇಂದ್ರನಿಗೆ ನೀಡುವಂತೆ ಹೇಳಿದರು

ಅಮಿತ್ ಶಾ ಯಡಿಯೂರಪ್ಪಗಿಂತ ವಿಜಯೇಂದ್ರಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದು ಕುತೂಹಲ ಮೂಡಿಸಿದೆ.




