ಅವಳಿ ಮಕ್ಕಳ ತಾಯಾದ ಅಮೂಲ್ಯ: ಫೋಟೋ ಹಂಚಿಕೊಂಡ ಪತಿ, ಸೆಲೆಬ್ರಿಟಿಗಳಿಂದ ಶುಭಾಶಯ

Edited By:

Updated on: Mar 01, 2022 | 3:52 PM

ನಟಿಯರಾದ ರಮ್ಯಾ, ಆಶಿಕಾ ರಂಗನಾಥ್, ಅದ್ವಿತಿ ಶೆಟ್ಟಿ, ಹರ್ಷಿಕಾ ಪೂಣಚ್ಚ, ಸೋನು ಗೌಡ ಮೊದಲಾದವರು ದಂಪತಿಗೆ ಶುಭಾಶಯ ಹೇಳಿದ್ದಾರೆ.

1 / 6
ನಟಿ ಅಮೂಲ್ಯ ಅವರು ಇತ್ತೀಚೆಗೆ ವೈಯಕ್ತಿಕ ಜೀವನದ ವಿಚಾರದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರು ಪ್ರೆಗ್ನೆಂಟ್​ ಆದ ನಂತರ ಫೋಟೋ ಹಂಚಿಕೊಂಡಿದ್ದರು. ಈ ವಿಚಾರ ಸೋಶಿಯಲ್​ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಈಗ ಅಮೂಲ್ಯ ಅವರು ಅವಳಿ ಮಕ್ಕಳ ತಾಯಿ ಆಗಿದ್ದಾರೆ.

2 / 6

ಅಮೂಲ್ಯಗೆ ಮಗು ಜನಿಸಿದ ವಿಚಾರವನ್ನು ಅವರ ಪತಿ ಜಗದೀಶ್​ ಆರ್. ಚಂದ್ರ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಮೂಲ್ಯ ಜತೆ ನಿಂತಿರುವ ಫೋಟೋ ಹಂಚಿಕೊಂಡಿರುವ ಅವರು, ಖುಷಿಯ ಸಮಾಚಾರ ತಿಳಿಸಿದ್ದಾರೆ.

3 / 6

‘ಅವಳಿ ಮಕ್ಕಳು ಜನಿಸಿವೆ. ಇಬ್ಬರು ಗಂಡು ಮಕ್ಕಳು ಹಾಗೂ ಅಮೂಲ್ಯ ಆರೋಗ್ಯವಾಗಿದ್ದಾರೆ. ಈ ಪಯಣದಲ್ಲಿ ಜತೆ ನಿಂತು ಹಾರೈಸಿದ ಎಲ್ಲರಿಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ ಜಗದೀಶ್​ ಅವರು. ಈ ಫೋಟೋ ವೈರಲ್​ ಆಗುತ್ತಿದೆ.

4 / 6

ಅಮೂಲ್ಯ ಅವರು ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗೆ 11.45ರ ಸುಮಾರಿಗೆ ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಮಕ್ಕಳು ಇಬ್ಬರೂ ಆರೋಗ್ಯವಾಗಿರುವ ಸುದ್ದಿ ಕೇಳಿ ಅವರ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

5 / 6

ನಟಿಯರಾದ ರಮ್ಯಾ, ಆಶಿಕಾ ರಂಗನಾಥ್, ಅದ್ವಿತಿ ಶೆಟ್ಟಿ, ಹರ್ಷಿಕಾ ಪೂಣಚ್ಚ, ಸೋನು ಗೌಡ ಮೊದಲಾದವರು ದಂಪತಿಗೆ ಶುಭಾಶಯ ಹೇಳಿದ್ದಾರೆ.

6 / 6

ಇತ್ತೀಚೆಗೆ ಸ್ಯಾಂಡಲ್​ವುಡ್​ಮಂದಿ ಅಮೂಲ್ಯಗೆ ಸೀಮಂತ ನಡೆಸಿದ್ದರು. ಈ ಫೋಟೋಗಳನ್ನು ಅಮೂಲ್ಯ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದರು.

Published On - 3:39 pm, Tue, 1 March 22

Loading...
Unable to load recommendations.
Follow Us