Anasuya Bharadwaj: ಆ್ಯಂಕರ್​ಗೆ ಆಂಟಿ ಎಂದ ಪುಂಡರು; ಹಿರಿಯ ನಟಿ ಕೊಟ್ಟರು ತಿರುಗೇಟು

Updated on: Feb 28, 2023 | 10:31 AM

ಅನಸೂಯಾ ಅವರು ಹೆಚ್ಚು ಟ್ರೋಲ್ ಆಗುತ್ತಾರೆ. ಇದಕ್ಕೆಲ್ಲ ಅವರು ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಈಗ ಅವರ ಪರವಾಗಿ ಹಿರಿಯ ನಟಿ ಕಸ್ತೂರಿ ಮಾತನಾಡಿದ್ದಾರೆ.

1 / 5
ತೆಲುಗು ನಟಿ, ಆ್ಯಂಕರ್ ಅನಸೂಯಾ ಭಾರದ್ವಾಜ್​ಗೆ ಇತ್ತೀಚೆಗೆ ಕೆಲವರು ಆಂಟಿ ಎಂದು ಕರೆದಿದ್ದರು. ಈ ಬಗ್ಗೆ ಪರ-ವಿರೋಧ ಚರ್ಚೆ ನಡೆದಿತ್ತು. ಕೆಲವರು ನಟಿಯ ಪರವಾಗಿ ಮಾತನಾಡಿದ್ದರು. ಆದರೆ, ಅನಸೂಯಾ ಈ ವಿಚಾರದಲ್ಲಿ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.

2 / 5

ಅನಸೂಯಾ ಅವರು ಹೆಚ್ಚು ಟ್ರೋಲ್ ಆಗುತ್ತಾರೆ. ಇದಕ್ಕೆಲ್ಲ ಅವರು ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಈಗ ಅವರ ಪರವಾಗಿ ಹಿರಿಯ ನಟಿ ಕಸ್ತೂರಿ ಮಾತನಾಡಿದ್ದಾರೆ.

3 / 5

ಆಂಟಿ ಎನ್ನುವ ಪದಕ್ಕೆ ಹಲವು ಅರ್ಥವಿದೆ. ಮಕ್ಕಳು ಕರೆದರೆ ಅದಕ್ಕೆ ಒಂದು ಅರ್ಥ, ವಯಸ್ಸಾದವರು ಕರೆದರೆ ಮತ್ತೊಂದು ಅರ್ಥ ಅನ್ನೋದು ಕಸ್ತೂರಿ ಅಭಿಪ್ರಾಯ. ಹೀಗಾಗಿ ಮಹಿಳೆಯನ್ನು ಮೇಡಂ ಎಂದು ಕರೆಯುವಂತೆ ಅವರು ಸೂಚಿಸಿದ್ದಾರೆ. 

4 / 5

‘ಅರ್ಜುನ್ ರೆಡ್ಡಿ’ ಚಿತ್ರದಲ್ಲಿ ತಾಯಿ ಬಗ್ಗೆ ಬೈಗುಳ ಇದೆ. ಇದರ ವಿರುದ್ಧ ಅನಸೂಯಾ ಧ್ವನಿ ಎತ್ತಿದ್ದರು. ವಿಜಯ್ ದೇವರಕೊಂಡ ವಿರುದ್ಧ ಅವರು ಕಿಡಿಕಾರಿದ್ದರು.

5 / 5

ಅಲ್ಲಿಂದ ಅನಸೂಯಾ ಅವರು ಟ್ರೋಲ್ ಆಗುತ್ತಿದ್ದಾರೆ. ಅವರನ್ನು ‘ಆಂಟಿ’ ಎಂದು ಕೆಲವರು ಕರೆಯೋಕೆ ಶುರು ಮಾಡಿದ್ದಾರೆ. ಅದು ಇನ್ನೂ ನಿಂತಿಲ್ಲ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us