
ಆ್ಯಂಕರ್ ಅನುಶ್ರೀ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ನಿತ್ಯ ಹೊಸಹೊಸ ಫೋಟೋ ಹಂಚಿಕೊಂಡು ಫ್ಯಾನ್ಸ್ನ ಖುಷಿಪಡಿಸುತ್ತಾರೆ.

ಅನುಶ್ರೀ ಅವರು ಈ ಬಾರಿ ಹಸಿರು ಬಣ್ಣದ ಇಳ್ಕಲ್ ಸೀರೆ ಉಟ್ಟು ಮಿಂಚಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅನುಶ್ರೀ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಇತ್ತೀಚೆಗೆ ಅನುಶ್ರೀ ಅವರು ಚಿಕ್ಕಮಗಳೂರು ಟ್ರಿಪ್ಗೆ ತೆರಳಿದ್ದರು. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಅನುಶ್ರೀ ಅವರಿಗೆ ಪುನೀತ್ ರಾಜ್ಕುಮಾರ್ ಅವರ ಮೇಲೆ ವಿಶೇಷ ಅಭಿಮಾನ ಇತ್ತು. ಅವರನ್ನು ಕಳೆದುಕೊಂಡ ನಂತರದಲ್ಲಿ ಅನುಶ್ರೀ ಅವರು ಸಾಕಷ್ಟು ದುಃಖಿತರಾಗಿದ್ದಾರೆ.

ಅನುಶ್ರೀ ಅವರು ಜೀ ಕನ್ನಡದ ಅನೇಕ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಅವರ ಆ್ಯಂಕರಿಂಗ್ನ ಅನೇಕರು ಇಷ್ಟಪಡುತ್ತಾರೆ.