Updated on: Nov 12, 2022 | 6:06 PM
ಆ್ಯಂಕರ್ ಅನುಶ್ರೀ ಅವರು ಕರ್ನಾಟಕದಲ್ಲಿ ಸಾಕಷ್ಟು ಫೇಮಸ್ ಆಗಿದ್ದಾರೆ. ಹಲವು ರಿಯಾಲಿಟಿ ಶೋಗಳನ್ನು ನಿರೂಪಿಸಿ ಅವರು ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಅನುಶ್ರೀ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 20 ಲಕ್ಷ ಹಿಂಬಾಲಕರಿದ್ದಾರೆ.
ಈಗ ಅನುಶ್ರೀ ಅವರು ಇನ್ಸ್ಟಾಗ್ರಾಮ್ನಲ್ಲಿ ಚಿತ್ರ ವಿಚಿತ್ರ ಪೋಸ್ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗುತ್ತಿದೆ. ಈ ಫೋಟೋ ಕ್ಯಾಪ್ಶನ್ನಲ್ಲಿ ಅವರು ಪ್ರಶ್ನೆಯನ್ನೂ ಇಟ್ಟಿದ್ದಾರೆ.
ಕಿಸ್ಸಿಂಗ್ ಎಮೋಜಿ, ಕಣ್ಣು ಹೊಡೆಯುವ ಎಮೋಜಿ ಹಾಗೂ ಬೇಸರದ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಅವರ ಮುಖದ ಎಕ್ಸ್ಪ್ರೆಷನ್ ಇದೆ. ಇದರಲ್ಲಿ ನಿಮ್ಮ ಮೂಡ್ ಯಾವುದು ಎಂದು ಪ್ರಶ್ನೆ ಮಾಡಿದ್ದಾರೆ ಅನುಶ್ರೀ.
ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈ ಫೋಟೋ ಕೆಲವೇ ಗಂಟೆಗಳಲ್ಲಿ 50 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದಿದೆ.