
ನಟಿ ಅನುಶ್ರೀ ಹಾಗೂ ಅವರ ಪತಿ ರೋಶನ್ ಹಾಯಾಗಿ ದಾಂಪತ್ಯ ನಡೆಸುತ್ತಿದ್ದಾರೆ. ಇಂದು (ಅಕ್ಟೋಬರ್ 14) ರೋಷನ್ ಜನ್ಮದಿನ. ಈ ವಿಶೇಷ ದಿನದಂದು ಪತಿಗೆ ಅನುಶ್ರೀ ವಿಶ್ ಮಾಡಿದ್ದಾರೆ. ವಿಶೇಷ ಸಾಲುಗಳನ್ನು ಕೂಡ ಬರೆದಿದ್ದಾರೆ.

ರೋಶನ್ ಜೊತೆ ಸಮಯ ಕಳೆದ ಕ್ಷಣಗಳ ಫೋಟೋಗಳನ್ನು ಅನುಶ್ರೀ ಅವರು ಹಂಚಿಕೊಂಡಿದ್ದಾರೆ. ಮದುವೆ ಸಂದರ್ಭದ ಫೋಟೋ, ಮದುವೆ ಬಳಿಕ ಇರೋ ಫೋಟೋಗಳು ಇದರಲ್ಲಿ ಇವೆ. ಇದನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ.

ಜೊತೆಯಲಿ ನಿನ್ನ ಜೊತೆಯಲಿ, ಸದಾ ಸಂತೋಷ ಇರಲಿ, ಜೊತೆಯಲಿ ನಿನ್ನ ಜೊತೆಯಲಿ, ನಿನ್ನೆಲ್ಲಾ ಕನಸು ನನಸಾಗಲಿ.. ಜೊತೆಯಲಿ ನಿನ್ನ ಜೊತೆಯಲಿ, ಅನು ನಾನಿರಲಿ, ಅನು ಮಾತ್ರ ಇರಲಿ..’ ಎಂದು ಕ್ಯಾಪ್ಶನ್ ನೀಡಿದ್ದಾರೆ.

ಅನುಶ್ರೀ ಅವರು ಸದಾ ಫನ್ ಆಗಿ ಇರೋಕೆ ಇಷ್ಟಪಡುತ್ತಾರೆ. ಈಗ ಪತಿಗೆ ವಿಶ್ ಮಾಡುವಾಗಲೂ ‘ನಿನ್ನ ಜೊತೆ ನಾನು ಮಾತ್ರ ಇರಬೇಕು’ ಎಂಬರ್ಥ ಬರುವ ಸಾಲುಗಳನ್ನು ಬರೆದು ಪತಿಯ ಕಾಲೆಳೆದಿದ್ದಾರೆ. ಈ ಫೋಸ್ಟ್ಗೆ ಭರ್ಜರಿ ಲೈಕ್ ಸಿಕ್ಕಿದೆ.

ಅನುಶ್ರೀ ಅವರು ಸದ್ಯ ಆ್ಯಂಕರಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಅವರು ಜೀ ಕನ್ನಡ ವಾಹಿನಿಯಲ್ಲಿ ಹಲವು ಶೋಗಳನ್ನು ನಡೆಸಿಕೊಡುತ್ತಿದ್ದಾರೆ. ಮುಂಬರುವ ರಿಯಾಲಿಟಿ ಶೋಗಳ ಭಾಗ ಆಗಲು ಅವರು ಕಾದಿದ್ದಾರೆ.