ರಣ್ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಆದರೆ ಅವರಿಗಿಂತಲೂ ಹೆಚ್ಚು ಜನಪ್ರಿಯವಾಗಿದ್ದು ನಟಿ ತೃಪ್ತಿ ದಿಮ್ರಿ.
ಕೆಲವೇ ದೃಶ್ಯಗಳಿಗೆ ಬಂದು ಹೋದರೂ ಸಹ ನಟಿ ತೃಪ್ತಿ ದಿಮ್ರಿ ತಮ್ಮ ಗ್ಲಾಮರ್ ಹಾಗೂ ನಟನೆಯಿಂದ ಪ್ರೇಕ್ಷಕರನ್ನು ಸೆಳೆದಿದ್ದಾರೆ.
ತೃಪ್ತಿ ದಿಮ್ರಿಯನ್ನು ಪ್ರೇಕ್ಷಕರು ಹೊಸ ಕ್ರಶ್ ಎಂದು, ‘ಬಾಬಿ 2’ (ಅತ್ತಿಗೆ 2) ಎಂದು ಕರೆಯುತ್ತಿದ್ದಾರೆ. ಸೋಷಿಯಲ್ ಮೀಡಿಯಾನಲ್ಲಿ ಸಖತ್ ಟ್ರೆಂಡ್ ಆಗುತ್ತಿದ್ದಾರೆ ತೃಪ್ತಿ.
‘ಅನಿಮಲ್’ ಸಿನಿಮಾದ ಬಳಿಕ ತೃಪ್ತಿ ದಿಮ್ರಿಗೆ ಒಂದರ ಹಿಂದೊಂದು ಅವಕಾಶಗಳು ಅರಸಿ ಬರುತ್ತಿವೆ. ಬಾಲಿವುಡ್ ಜೊತೆ ದಕ್ಷಿಣದ ಚಿತ್ರರಂಗದಿಂದಲೂ ಆಫರ್ಗಳು ಹೋಗಿವೆ.
ತೆಲುಗು ಸಿನಿಮಾ ಒಂದರಲ್ಲಿ ನಟಿ ತೃಪ್ತಿ ದಿಮ್ರಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ವಿಜಯ್ ದೇವರಕೊಂಡ ಎದುರು ತೃಪ್ತಿ ನಟಿಸಲಿದ್ದಾರೆ.
ಇದರ ಜೊತೆಗೆ ಒಂದು ತಮಿಳು ಸಿನಿಮಾಕ್ಕೂ ಸಹ ಸಹ ತೃಪ್ತಿ ದಿಮ್ರಿ ಓಕೆ ಎಂದಿದ್ದಾರೆ. ಆದರೆ ಆ ಸಿನಿಮಾದಲ್ಲಿ ವಿಶೇಷ ಹಾಡಿನಲ್ಲಿ ಮಾತ್ರವೇ ತೃಪ್ತಿ ಕಾಣಿಸಿಕೊಳ್ಳಲಿದ್ದಾರೆ.
ತೃಪ್ತಿ ದಿಮ್ರಿ ಬಾಲಿವುಡ್ನ ಕೆಲವು ಸಿನಿಮಾಗಳನ್ನು ಸಹ ಒಪ್ಪಿಕೊಂಡಿದ್ದಾರೆ. ‘ಅನಿಮಲ್’ ಸಿನಿಮಾದ ಮುಂದಿನ ಭಾಗದಲ್ಲಿಯೂ ಸಹ ತೃಪ್ತಿ ನಟಿಸಲಿದ್ದಾರೆ.