
ರಸ್ತೆಯಲ್ಲಿ ಕಾರ್ ವೇಗವಾಗಿ ಓಡಿಸೋ ಕ್ರೇಝ್ ಇರೋರಿಗೆ ಸ್ಪರ್ಧೆಯ ಹುಚ್ಚು ಹಿಡಿಸೋ ಈ ರೇಸ್ ಗಳು ನಿಜಕ್ಕೂ ರೇಸರ್ ಗಳಿಗೆ ಉತ್ತಮ ಅವಕಾಶ ನೀಡುವಲ್ಲಿ ನೆರವಾಗುತ್ತಿವೆ.

ಮಳೆಗಾಲ ಮುಗಿಯುತ್ತಲೆ ಹಾಸನದಲ್ಲಿ ಆರಂಭವಾಗೋ ಬೈಕ್ ಕಾರ್ ರೇಸ್ ಗಳು ಸರಣಿಯಾಗಿ ಶುರುವಾಗುತ್ತವೆ


11. ರೇಸರ್ ಗಳ ಕಸರತ್ತು ನೋಡುಗರಿಗೆ ಮಸ್ತ್ ರಂಜನೆ ನೀಡುತ್ತೆ ಜೀಪ್, ಜಿಪ್ಸಿ, ಕಾರ್ ಗಳು ಸೇರಿ ಎಲ್ಲಾ ರೀತಿಯ ಮೋಟಾರ್ ವಾಹನಗಳ ವಿಭಾಗದಲ್ಲಿ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.

10. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿರೋ ರೇಸರ್ ಗಳು ಬಾಗುತ್ತಾ ಬಳುಕುತ್ತಾ, ಉಬ್ಬು ತಗ್ಗುಗಳು, ಹೊಂಡಗುಂಡಿಗಳ ಸವಾಲಿನ ದಾರಿಯಲ್ಲಿ ಚಾಣಾಕ್ಷತೆಯಿಂದ ಶರವೇಗದಲ್ಲಿ ಸಾಗಿ ಎಲ್ಲೂ ಯಡವಟ್ಟು ಮಾಡಿಕೊಳ್ಳದೆ ಗುರಿ ಮುಟ್ಟಿದ್ರೆ ಅವರು ಗೆದ್ದಂತೆ.

9. ರಾಲಿಗೆಂದೇ ವಿಶೇಷವಾಗಿ ಸಿದ್ದಗೊಂಡಿದ್ದ 1.5 ಮೀಟರ್ ಟ್ರ್ಯಾಕ್ ನಲ್ಲಿ ಒಮ್ಮೆಗೆ ಒಂದು ಕಾರ್ ಅನ್ನು ರೇಸ್ ಗೆ ಬಿಡಲಾಗುತ್ತೆ, ಒಟ್ಟು ಎರಡು ಸುತ್ತಿನಲ್ಲಿ ನಡೆಯೋ ಸ್ಪರ್ಧೆಯಲ್ಲಿ ಯಾವ ರೇಸರ್ ವೇಗವಾಗಿ ಗುರಿ ಮುಟ್ಟುತ್ತಾರೋ ಅವರನ್ನೇ ವಿಜಯಿ ಎಂದು ಘೋಷಣೆ ಮಾಡಲಾಗುತ್ತೆ.

ಅಮೆಚೂರ್ ವಿಭಾಗ, 800 ಸಿಸಿ ಕ್ಲಾಸ್, 1000 ಸಿಸಿ, 1200 ಸಿಸಿ, ಜಿಪ್ಸಿ ಕ್ಲಾಸ್, ಜನರಲ್ ಕ್ಲಾಸ್, ಒಪನ್ ಕ್ಲಾಸ್, ಇಂಡಿಯನ್ ಕ್ಲಾಸ್, ಪೆಟ್ರೋಲ್ ಕ್ಲಾಸ್, ಡೀಸಲ್ ಕ್ಲಾಸ್ ಸೇರಿ 10 ಕ್ಕೂ ಹೆಚ್ಚು ವಿಭಾಗಗಳಲ್ಲಿ ಸ್ಪರ್ಧೆ ಆಯೋಜನೆಗೊಂಡಿತ್ತು.

8. ಹಾಸನದ ಟೀಂ ಹಾಸನ್ ಆಫ್ ರೋಡರ್ಸ್ ಸಂಸ್ಥೆ ಆಯೋಜನೆ ಮಾಡಿದ್ದ ರೋಚಕ ಮೋಟಾರ್ ರಾಲಿಯಲ್ಲಿ ಕಾರ್ ರೇಸ್ ಆಯೋಜನೆ ಮಾಡಲಾಗಿತ್ತು.

7. ಕಾರ್ ಮುಂದೆ ಮುಂದೆ ಹೋಗುತ್ತಿದ್ದರೆ ಹಿಂದೆ ಹಿಂದೆ ಧೂಳಿನ ರಾಶಿ ರಾಲಿಯ ರೋಚಕತೆಯನ್ನ ಸಾರಿ ಹೇಳುತ್ತಿತ್ತು. ರಸ್ತೆಯಲ್ಲಿ ಕಾರ್ ವೇಗವಾಗಿ ಓಡಿಸೋ ಕ್ರೇಝ್ ಇರೋರಿಗೆ ಸ್ಪರ್ಧೆಯ ಹುಚ್ಚು ಹಿಡಿಸೋ ಈ ರೇಸ್ ಗಳು ನಿಜಕ್ಕೂ ರೇಸರ್ ಗಳಿಗೆ ಉತ್ತಮ ಅವಕಾಶ ನೀಡುವಲ್ಲಿ ನೆರವಾಗುತ್ತಿವೆ.

5. ಡರ್ಟ್ ಟ್ರ್ಯಾಕ್ ರೇಸ್ ಗೆ ಹೇಳಿ ಮಾಡಿಸಿದಂತಿದ್ದ ಟ್ರ್ಯಾಕ್ ನಲ್ಲಿ ವೇಗವಾಗಿ ಕಾರ್ ಚಲಾಯಿಸಿ ಗುರಿಯತ್ತ ಮುನ್ನುಗ್ಗಿ ಗೆಲುವಿಗಾಗಿ ಸವಾರರು ಪೈಪೋಟಿ ನಡೆಸಿದ್ರೆ ನೆರೆದಿದ್ದ ರಾಲಿಪ್ರಿಯರು ತುದಿಗಾಲಲ್ಲಿ ನಿಂತು ಆಟ ವೀಕ್ಷಣೆ ಮಾಡಿದ್ರು.

6. ಹಾಸನ, ಮೈಸೂರು, ಬೆಂಗಳೂರು, ಚಿಕ್ಕಮಗಳೂರು, ಹುಬ್ಬಳ್ಳಿ, ಕೊಡಗು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ನೂರಾರು ರೇಸರ್ ಗಳು ಶರವೇಗದಲ್ಲಿ ಕಾರು ಚಲಾಯಿಸಿದ್ರೆ ರಸ್ತೆಯಲ್ಲಿ ರಾಕೆಟ್ ಗಳು ಹರಿದಾಡುತ್ತಿವೆಯೇನೋ ಎಂದು ಭಾಸವಾಗೋ ರೀತಿಯಲ್ಲಿ ರೊಯ್ಯನೆ ಸದ್ದು ಮಾಡುತ್ತಾ ಮಿಂಚಿನಂತೆ ಮಾಯವಾಗೋ ಕಾರುಗಳು ನೋಡುಗರೆದೆಯಲ್ಲಿ ನಡುಕ ಹುಟ್ಟಿಸಿದವು.

13. ಮಳೆಗಾಲ ಮುಗಿಯುತ್ತಲೆ ಹಾಸನದಲ್ಲಿ ಆರಂಭವಾಗೋ ಬೈಕ್ ಕಾರ್ ರೇಸ್ ಗಳು ಸರಣಿಯಾಗಿ ಶುರುವಾಗುತ್ತವೆ, ರಾಷ್ಟ್ರೀಯ ಹಾಗು ಅಂತರಾಷ್ಟ್ರಿಯಮಟ್ಟದಲ್ಲಿ ರೇಸರ್ ಗಳಾಗಿ ಮಿಂಚಬೇಕೆಂಬ ಮಹದಾಸೆ ಹೊಂದಿರೋ ಯುವ ಉತ್ಸಾಹಿ ಚಾಲಕರುಗಳಿಗೆ ಪ್ರೋತ್ಸಾಹ ನೀಡಬೇಕು ಆ ಮೂಲಕ ರೇಸರ್ ಗಳನ್ನ ತರಬೇತಿಗೊಳಿಸಬೇಕೆಂಬ ಉದ್ದೇಶದಿಂದ ನಡೆಯೋ ಇಂತಹ ಮೋಟಾರ್ ರೇಸ್ ಗಳು ನೋಡುಗರಿಗೂ ರೋಮಾಂಚನಕಾರಿ ಮನೋರಂಜನೆ ನೀಡುತ್ತಿವೆ. (ಮಂಜುನಾಥ್ ಕೆ.ಬಿ, ಟಿವಿ 9, ಹಾಸನ)

4. ಮಂಗಳವಾರ ಹಾಸನದಲ್ಲಿ ನಡೆದ ಮೋಟಾರ್ ಸ್ಪೋರ್ಟ್ಸ್ ರಾಲಿಯ ರೋಮಾಂಚನಕಾರಿ ಝಲಕ್ ಗಳು ನೋಡುಗರಿಗೆ ಮಸ್ತ್ ಮಸ್ತ್ ಖುಷಿ ನೀಡಿದ್ವು, ಹಾಸನ ಹೊರವಲಯದ ಹಳೆಬೀಡು ರಸ್ತೆಯ ಗ್ಯಾರಹಳ್ಳಿ ಬಳಿಯ ಲೇಔಟ್ ಒಂದರ ಸಮೀಪದ ವಿಶಾಲ ಮೈದಾನದಲ್ಲಿ ನಡೆದ ರಾಲಿ ಅಕ್ಷರಶಃ ಎದೆ ನಡುಗಿಸುವಂತಿತ್ತು.

12. ಗೆದ್ದವರಿಗೆ 30 ಸಾವಿರ, 20, ಸಾವಿರ, 10 ಸಾವಿರ ಹೀಗೆ ಪ್ರೋತ್ಸಾಹದಾಯಕ ಕ್ಯಾಷ್ ಪ್ರೈಸ್ ಜೊತೆಗೆ ದೊಡ್ಡ ದೊಡ್ಡ ಟ್ರೋಫಿಗಳನ್ನ ನೀಡೋ ಮೂಲಕ ಮೊಟಾರ್ ಸ್ಟೋರ್ಟ್ಸ್ ಕ್ರೇಜ್ ಹೊಂದಿರೋ ರೇಸರ್ ಗಳಿಗೆ ಪ್ರೋತ್ಸಾಹ ನೀಡಲು ಇಂತಹ ರೇಸ್ ಆಯೋಜನೆ ಮಾಡಲಾಗುತ್ತಿದ್ದು, ಅಪರೂಪಕ್ಕೆ ನಡೆಯೋ ರೇಸ್ ಗಳನ್ನ ಕಣ್ತುಂಬಿಕೊಳ್ಳೋ ಜನರು ಕೂಡ ಖುಷಿ ಪಡ್ತಿದ್ದಾರೆ.

2. ಗೆಲುವಿಗಾಗಿ ರೇಸರ್ ಗಳ ಸರ್ಕಸ್, ಶರವೇಗದಲ್ಲಿ ನೆಲದಲ್ಲಿ ರಾಕೆಟ್ ಹರಿದಾಡಿದಂತೆ ಸಾಗೋ ಕಾರ್ ಗಳ ಝಲಕ್ ನೋಡುಗರಿಗೆ ರೋಮಾಂಚನಕಾರಿ ಅನುಭವ ನೀಡಿದ್ರೆ ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆಯೋ ರೋಮಾಂಚನಕಾರಿ ಗೇಮ್ ನಂತಿತ್ತು.

1. ಹಾಸನದ ಅಂದ್ರೆ ಸಾಹಸಮಯ ಕ್ರೀಡೆಗಳಿಗೆ ಹೆಸರುವಾಸಿ, ಇಲ್ಲಿನ ಜನತೆಗೆ ಅದೇನೋ ಕ್ರೇಝ್.. ಆಗಾಗ ನಡೆಯೋ ಕಾರ್ ಬೈಕ್ ರೇಸ್ ಗಳು ರ್ಯಾಲಿಪ್ರಿಯರನ್ನ ರೋಮಾಂಚನಗೊಳಿಸೋದು ಅಷ್ಟೇ ಅಲ್ಲ, ರಾಲಿಪಟುಗಳ ಕಸರತ್ತು, ಚಾಣಾಕ್ಷತೆಯನ್ನ ಸಾಬೀತು ಮಾಡೋಕು ವೇದಿಕೆ ಒದಗಿಸುತ್ತೆ. ಬಹಳ ದಿನಗಳ ಬಳಿಕ ಹಾಸನದಲ್ಲಿ ನಿನ್ನೆ ಮಂಗಳವಾರ ನಡೆದ ಕಾರ್ ರೇಸ್ ನಿಜಕ್ಕೂ ಸಖತ್ ರೋಚಕ ಅನುಭವ ನೀಡ್ತು.