ಛಾಯಾಗ್ರಾಹಕಿಯಾದ ನಟಿ ಅನುಪಮಾ ಪರಮೇಶ್ವರನ್​; ಸುಂದರಿಯ ಕ್ಯಾಮೆರಾ ಕಣ್ಣಲ್ಲಿ ‘ಐ ಮಿಸ್​ ಯೂ’

|

Updated on: Apr 11, 2023 | 7:06 PM

Anupama Parameswaran: ಅನುಪಮಾ ಪರಮೇಶ್ವರನ್​ ಅವರು ನಟಿ ಮಾತ್ರವಲ್ಲ, ಛಾಯಾಗ್ರಾಹಕಿ ಕೂಡ ಹೌದು. ‘ಐ ಮಿಸ್​ ಯೂ’ ಕಿರುಚಿತ್ರಕ್ಕೆ ಅವರು ಕ್ಯಾಮೆರಾ ವರ್ಕ್​ ಮಾಡಿದ್ದಾರೆ.

1 / 5
ನಟಿ ಅನುಪಮಾ ಪರಮೇಶ್ವರನ್​ ಅವರು ಬಹುಭಾಷೆಯಲ್ಲಿ ಬೇಡಿಕೆ ಹೊಂದಿದ್ದಾರೆ. ನಟನೆ ಮಾತ್ರವಲ್ಲದೇ ಸಿನಿಮಾದ ಇನ್ನುಳಿದ ವಿಭಾಗಗಳ ಬಗ್ಗೆಯೂ ಅವರು ಆಸಕ್ತಿ ತೋರಿಸುತ್ತಿದ್ದಾರೆ ಎಂಬುದು ಗಮನಿಸಬೇಕಾದ ಅಂಶ.

2 / 5
ನಟನೆಯ ಜೊತೆಗೆ ಛಾಯಾಗ್ರಹಣದಲ್ಲೂ ಅನುಪಮಾ ಪರಮೇಶ್ವರನ್​ ಅವರಿಗೆ ಆಸಕ್ತಿ ಇದೆ. ಹಾಗಾಗಿ ‘ಐ ಮಿಸ್​ ಯೂ’ ಕಿರುಚಿತ್ರಕ್ಕೆ ಅವರು ಕ್ಯಾಮೆರಾ ವರ್ಕ್​ ಮಾಡಿದ್ದಾರೆ. ಅವರ ಈ ಪ್ರತಿಭೆ ಬಗ್ಗೆ ಅಭಿಮಾನಿಗಳಿಗೆ ಹೆಮ್ಮೆ ಎನಿಸಿದೆ.

3 / 5
ತೆಲುಗು ಭಾಷೆಯ ‘ಐ ಮಿಸ್​ ಯೂ’ ಕಿರುಚಿತ್ರ ಯೂಟ್ಯೂಬ್​ನಲ್ಲಿ ಲಭ್ಯವಿದೆ. ಇದಕ್ಕೆ ಸಂಕಲ್ಪ ಗೋರಾ ನಿರ್ದೇಶನ ಮಾಡಿದ್ದಾರೆ. 10 ನಿಮಿಷ ಅವಧಿಯ ಈ ಶಾರ್ಟ್​ ಫಿಲ್ಮ್​ಗೆ ನೋಡುಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

4 / 5
ಕೆಲವು ನಟಿಯರು ಕೇವಲ ಗ್ಲಾಮರ್​ ಗೊಂಬೆಯಾಗಿ ಇರುವ ಬದಲು ಸಿನಿಮಾದ ವಿವಿಧ ವಿಭಾಗಗಳಲ್ಲಿ ತೊಡಗಿಸಿಕೊಳ್ಳಲು ಬಯಸುತ್ತಾರೆ. ದುಲ್ಕರ್​ ಸಲ್ಮಾನ್​ ನಿರ್ಮಾಣದ ಮೊದಲ ಚಿತ್ರದಲ್ಲಿ ಅನುಪಮಾ ಪರಮೇಶ್ವರನ್​ ಅವರು ಸಹಾಯಕ ನಿರ್ದೇಶಕಿ ಆಗಿದ್ದರು.

5 / 5
ಪುನೀತ್​ ರಾಜ್​ಕುಮಾರ್​ ಅಭಿನಯದ ‘ನಟ ಸಾರ್ವಭೌಮ’ ಚಿತ್ರದಲ್ಲಿ ಅನುಪಮಾ ಪರಮೇಶ್ವರನ್​ ಅವರು ನಾಯಕಿಯಾಗಿ ನಟಿಸಿದರು. ಆ ಮೂಲಕ ಅವರು ಕನ್ನಡದ ಸಿನಿಪ್ರಿಯರಿಗೆ ಪರಿಚಯಗೊಂಡರು.

Published On - 7:06 pm, Tue, 11 April 23