
‘ಆ್ಯಂಕರ್ ಅನುಶ್ರೀ ವಿವಾಹ ಯಾವಾಗ’ ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಇಂದು (ಆಗಸ್ಟ್ 28) ಅದ್ದೂರಿಯಾಗಿ ರೋಷನ್ ಜೊತೆ ವಿವಾಹ ನೆರವೇರಿದೆ. ಈ ಸಂದರ್ಭದ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ.

ಪ್ರತಿ ಗಂಡು ಹಾಗೂ ಹೆಣ್ಣಿಗೆ ವಿವಾಹ ಅನ್ನೋದು ವಿಶೇಷ ಕ್ಷಣ. ಆ ವೇಳೆ ಕೆಲವರು ಕಣ್ಣೀರು ಹಾಕಿದ ಉದಾಹರಣೆ ಇದೆ. ಇದಕ್ಕೆ ನಟಿ ಅನುಶ್ರೀ ಕೂಡ ಹೊರತಾಗಿಲ್ಲ. ರೋಷನ್ ತಾಳಿ ಕಟ್ಟುವಾಗ ಅನುಶ್ರೀ ಭಾವುಕರಾಗಿದ್ದರು.

ಅನುಶ್ರೀ ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಆ್ಯಂಕರಿಂಗ್ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ. ಈ ವೇಳೆ ರೋಷನ್ ಪರಿಚಯ ಆಯಿತು. ಆ ಬಳಿಕ ಕೆಲ ಸಮಯ ಡೇಟ್ ಮಾಡಿ ಇವರು ಮದುವೆ ಆಗಿದ್ದಾರೆ.

ಬೆಂಗಳೂರಿನ ಹೊರ ವಲಯದಲ್ಲಿ ಈ ಮದುವೆ ನಡೆದಿದೆ. ಅನೇಕ ಸೆಲೆಬ್ರಿಟಿಗಳು ಮದುವೆಗೆ ಹಾಜರಿ ಹಾಕಿದ್ದರು. ಶಿವರಾಜ್ಕುಮಾರ್ ಹಾಗೂ ಅವರ ಪತ್ನಿ ಗೀತಕ್ಕ, ಧನಂಜಯ್-ಧನ್ಯತಾ ಸೇರಿದಂತೆ ಅನೇಕರು ಮದುವೆಗೆ ಬಂದು ಅನುಶ್ರೀಗೆ ಶುಭಕೋರಿದ್ದಾರೆ.

ಅನುಶ್ರೀ ಅವರು ಮದುವೆ ಆಗುವ ಸಂದರ್ಭದಲ್ಲಿ ಭಾವುಕರಾಗಿದ್ದರು. ಮತ್ತೊಂದು ಕಡೆ ತಾವು ಮದುವೆ ಆಗುತ್ತಿರುವ ಖುಷಿ ಕೂಡ ಮೊಗದಲ್ಲಿ ಎದ್ದು ಕಾಣಿಸುತ್ತಿತ್ತು ಅನ್ನೋದು ವಿಶೇಷ.

ಅನುಶ್ರೀ ಹಾಗೂ ರೋಷನ್ ಇಬ್ಬರೂ ಪುನೀತ್ ರಾಜ್ಕುಮಾರ್ ಫ್ಯಾನ್ಸ್. ಈ ಕಾರಣದಿಂದಲೇ ಪುನೀತ್ ಫೋಟೋನ ಅಲ್ಲಿ ಇಡಲು ಅನುಶ್ರೀ ಅವರು ಮರೆತಿಲ್ಲ. ಪುನೀತ್ ಸಮ್ಮುಖದಲ್ಲೇ ಮದುವೆ ಆದಂತೆ ಅವರಿಗೆ ಅನಿಸಿದೆ.