
ಸೆಲೆಬ್ರಿಟಿಗಳ ಮಕ್ಕಳ ಬಗ್ಗೆ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ದೊಡ್ಡ ಸೆಲೆಬ್ರಿಟಿಗಳ ಮಕ್ಕಳು ಎಲ್ಲೇ ಹೋದರೂ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಈಗ ಐಶ್ವರ್ಯಾ ರೈ ಬಚ್ಚನ್ ಮಗಳು ಆರಾಧ್ಯಾ ಕೂಡ ಚರ್ಚೆ ಆಗುತ್ತಿದ್ದಾರೆ.

ಆರಾಧ್ಯಾಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರು ಆಗಾಗ ಅಮ್ಮನ ಜೊತೆ ಕಾಣಿಸಿಕೊಂಡು ಗಮನ ಸೆಳೆಯುತ್ತಾರೆ. ಅವರು ಮೊದಲಿಗಿಂತ ಸಖತ್ ಕ್ಯೂಟ್ ಆಗಿದ್ದಾರೆ. ಈ ಕಾರಣಕ್ಕೆ ಎಲ್ಲರ ಗಮನ ಅವರ ಮೇಲೆ ಹೋಗುತ್ತಿದೆ.

ಜುಲೈ 12ರಂದು ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ವಿವಾಹ ನಡೆದಿದೆ. ಈ ಮದುವೆ ಕಾರ್ಯಕ್ರಮಕ್ಕೆ ಆರಾಧ್ಯಾ ಅವರು ತಾಯಿ ಜೊತೆ ಆಗಮಿಸಿದ್ದಾರೆ.

ಆರಾಧ್ಯಾ ತಾಯಿಯ ಸೌಂದರ್ಯವನ್ನೂ ಮೀರಿಸುತ್ತಿದ್ದಾರೆ. ಅವರು ಮುಂದೆ ಚಿತ್ರರಂಗಕ್ಕೆ ಕಾಲಿಡಬಹುದು ಎಂದು ಅನೇಕರು ಮಾತನಾಡಿಕೊಂಡಿದ್ದಾರೆ. ಸೆಲೆಬ್ರಿಟಿ ಮಗಳಾಗಿರುವುದರಿಂದ ಸುಲಭದಲ್ಲಿ ಅವರಿಗೆ ಅವಕಾಶ ಸಿಗಲಿದೆ.

ಅನಂತ್ ಅಂಬಾನಿ ಮದುವೆಗೆ ಐಶ್ವರ್ಯಾ ಅವರು ಬಚ್ಚನ್ ಕುಟುಂಬದ ಜೊತೆ ಬಂದಿಲ್ಲ. ಮಗಳ ಜೊತೆ ಅವರು ಪ್ರತ್ಯೇಕವಾಗಿ ಬಂದಿರೋದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.