James Anderson: 3 ವಿಶ್ವ ದಾಖಲೆಗಳನ್ನು ಬದಿಗಿಟ್ಟು ನಿವೃತ್ತಿ ಘೋಷಿಸಿದ ಜೇಮ್ಸ್ ಅ್ಯಂಡರ್ಸನ್

James Anderson: ಇಂಗ್ಲೆಂಡ್ ಪರ 188 ಟೆಸ್ಟ್ ಪಂದ್ಯಗಳನ್ನಾಡಿರುವ ಜೇಮ್ಸ್ ಅ್ಯಂಡರ್ಸನ್ ಒಟ್ಟು 704 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ 194 ಏಕದಿನ ಪಂದ್ಯಗಳಿಂದ 269 ವಿಕೆಟ್ ಪಡೆದಿದ್ದಾರೆ. ಇನ್ನು 19 ಟಿ20 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದ 19 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ ವೇಗದ ಬೌಲರ್ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

ಝಾಹಿರ್ ಯೂಸುಫ್
|

Updated on: Jul 13, 2024 | 3:08 PM

ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಅ್ಯಂಡರ್ಸನ್ (James Anderson) ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. 2002 ರಲ್ಲಿ ಇಂಟರ್​ನ್ಯಾಷನಲ್ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದ ಅ್ಯಂಡರ್ಸನ್ ಇದೀಗ 22 ವರ್ಷಗಳ ಬಳಿಕ ಗುಡ್ ಬೈ ಹೇಳಿದ್ದಾರೆ. ಅದು ಕೂಡ ಮೂರು ವಿಶ್ವ ದಾಖಲೆಗಳನ್ನು ಬರೆಯುವ ಹೊಸ್ತಿಲಲ್ಲಿರುವಾಗ ಎಂಬುದು ವಿಶೇಷ.

1 / 5
ಅಂದರೆ ಜೇಮ್ಸ್ ಅ್ಯಂಡರ್ಸನ್ ತಮ್ಮ ನಿವೃತ್ತಿಯನ್ನು ಕೆಲ ಪಂದ್ಯಗಳಿಗೆ ಮುಂದೂಡಿದ್ದರೆ ಮೂರು ವಿಶ್ವ ದಾಖಲೆಗಳನ್ನು ತಮ್ಮದಾಗಿಸಿಕೊಳ್ಳಬಹುದಿತ್ತು. ಆದರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಅ್ಯಂಡರ್ಸನ್ ಲಾರ್ಡ್ಸ್ ಮೈದಾನದಲ್ಲಿ ಕೊನೆಯ ಪಂದ್ಯವಾಡುವ ಮೂಲಕ ವಿದಾಯ ಹೇಳಿದ್ದಾರೆ. ಹಾಗಿದ್ರೆ ಅ್ಯಂಡರ್ಸನ್ ಮಿಸ್ ಮಾಡಿಕೊಂಡ ಮೂರು ವಿಶ್ವ ದಾಖಲೆಗಳಾವುವು ಎಂದು ನೋಡೋಣ...

2 / 5
ಟೆಸ್ಟ್ ರೆಕಾರ್ಡ್​: ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ಪಂದ್ಯಗಳನ್ನಾಡಿದ ವಿಶ್ವ ದಾಖಲೆ ಬರೆಯಲು ಜೇಮ್ಸ್ ಅ್ಯಂಡರ್ಸನ್​ಗೆ ಕೇವಲ 12 ಪಂದ್ಯಗಳ ಅವಶ್ಯಕತೆಯಿತ್ತು. ಆದರೆ 188 ಟೆಸ್ಟ್ ಪಂದ್ಯಗಳ ಬಳಿಕ ವಿದಾಯ ಘೋಷಿಸುವ ಮೂಲಕ ಜಿಮ್ಮಿ ಈ ಅವಕಾಶವನ್ನು ತಪ್ಪಿಸಿಕೊಂಡರು. ಇದರೊಂದಿಗೆ ಈ ವಿಶ್ವ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿಯೇ ಉಳಿಯಿತು. ಮಾಸ್ಟರ್ ಬ್ಲಾಸ್ಟರ್ ಒಟ್ಟು 200 ಟೆಸ್ಟ್ ಪಂದ್ಯಗಳನ್ನಾಡುವ ಮೂಲಕ ಈ ವಿಶ್ವ ದಾಖಲೆ ಬರೆದಿದ್ದಾರೆ.

3 / 5
ವಾರ್ನರ್ ದಾಖಲೆ: ಜೇಮ್ಸ್ ಅ್ಯಂಡರ್ಸನ್ ಅವರಿಗೆ ಆಸ್ಟ್ರೇಲಿಯಾ ಲೆಜೆಂಡ್ ಶೇನ್ ವಾರ್ನ್ (708 ವಿಕೆಟ್) ಅವರ ವಿಶ್ವ ದಾಖಲೆ ಮುರಿಯುವ ಉತ್ತಮ ಅವಕಾಶವಿತ್ತು. ವಿಂಡೀಸ್ ವಿರುದ್ಧದ ಪಂದ್ಯಕ್ಕೂ ಮುನ್ನ 700 ವಿಕೆಟ್ ಕಬಳಿಸಿದ್ದ ಅ್ಯಂಡರ್ಸನ್ 8 ವಿಕೆಟ್ ಪಡೆದಿದ್ದರೆ, ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ 2ನೇ ಬೌಲರ್ ಎನಿಸಿಕೊಳ್ಳುತ್ತಿದ್ದರು. ಆದರೆ ಲಾರ್ಡ್ಸ್​ನಲ್ಲಿ 4 ವಿಕೆಟ್ ಕಬಳಿಸುವುದರೊಂದಿಗೆ ಅ್ಯಂಡರ್ಸನ್ 704 ವಿಕೆಟ್​ಗಳೊಂದಿಗೆ ವಿದಾಯ ಹೇಳಿದ್ದಾರೆ.

4 / 5
1000 ವಿಕೆಟ್: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸಾವಿರ ವಿಕೆಟ್ ಪೂರೈಸಲು ಜೇಮ್ಸ್ ಅ್ಯಂಡರ್ಸನ್​ಗೆ ಬೇಕಿದದ್ದು ಕೇವಲ 9 ವಿಕೆಟ್​ ಮಾತ್ರ. ಅಂದರೆ 991 ವಿಕೆಟ್ ಕಬಳಿಸಿರುವ ಅ್ಯಂಡರ್ಸನ್ ಒಂಭತ್ತು ವಿಕೆಟ್ ಪಡೆದಿದ್ದರೆ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸಾವಿರ ವಿಕೆಟ್ ಪಡೆದ ವಿಶ್ವದ ಮೊದಲ ವೇಗಿ ಎನಿಸಿಕೊಳ್ಳುತ್ತಿದ್ದರು. ಆದರೆ ಈ ದಾಖಲೆಗಳ ಬಗ್ಗೆ ಚಿಂತಿಸದೇ ಜೇಮ್ಸ್ ಅ್ಯಂಡರ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವುದು ವಿಶೇಷ.

5 / 5
Follow us