
36 ವರ್ಷಗಳ ಕಾಯುವಿಕೆ ಕೊನೆಗೊಂಡಿದೆ. ಡಿಯೊಗೊ ಮರಡೋನಾ ನಾಯಕತ್ವದಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಅರ್ಜೇಂಟಿನಾ ಇದೀಗೆ ಮೆಸ್ಸಿ ನಾಯಕತ್ವದಲ್ಲಿ ಟ್ರೋಫಿಗೆ ಮುತ್ತಿಕ್ಕಿದೆ.

ಇದರೊಂದಿಗೆ ಅರ್ಜೆಂಟೀನಾದ ಮೂರೂವರೆ ದಶಕಗಳ ಕಾಯುವಿಕೆ ಕೊನೆಗೊಂಡಿದ್ದು, ಇಡೀ ಅರ್ಜೇಂಟಿನಾ ದೇಶವೇ ಸಂತಸದ ಅಲೆಯಲ್ಲಿ ತೇಲುತ್ತಿದೆ.

ಮೆಸ್ಸಿ ತಂಡ ವಿಶ್ವಕಪ್ ಗೆದ್ದ ಬಳಿಕ ಅರ್ಜೇಂಟಿನಾದ ಪ್ರಜೆಗಳು ರಾತ್ರಿ ಇಡೀ ಸಂಭ್ರಮಾಚರಣೆ ನಡೆಸಿದ್ದಾರೆ.

ಅದರಲ್ಲೂ ಬ್ಯೂನಸ್ ಐರಿಸ್‌ನ ಬೀದಿಗಳಲ್ಲಿ 20 ಲಕ್ಷಕ್ಕೂ ಅಧಿಕ ಜನ ಸೇರಿದ್ದರು ಎಂದು ವರದಿಯಾಗಿದೆ. ಅದರ ಕೆಲವು ಫೋಟೋಗಳು ಇಲ್ಲಿವೆ.

ಫಿಫಾ ವಿಶ್ವಕಪ್ ಮಾದರಿ ಟ್ರೋಪಿಯೊಂದಿಗೆ ಪುಟ್ಟ ಅಭಿಮಾನಿ

ಎಲ್ಲೆಲ್ಲೂ ಅರ್ಜೇಂಟಿನಾ ತಂಡದ ಬಾವುಟಗಳ ಹಾರಾಟ

ಮಹಿಳಾ ಅಭಿಮಾನಿಗಳ ಸಂಭ್ರಮಾಚರಣೆ

ಟ್ರಾಫಿಕ್ ಸಿಗ್ನಲ್ ಕಂಬಗಳ ಮೇಲೇರಿ ಸಂಭ್ರಮಿಸುತ್ತಿರುವ ಫ್ಯಾನ್ಸ್

ಇಡೀ ಆಗಸಕ್ಕೆ ಬಿಳಿ- ನೀಲಿ ಬಣ್ಣ ಹಚ್ಚುವ ಸಂಭಮದಲ್ಲಿ ಅರ್ಜೇಂಟಿನಾ ಅಭಿಮಾನಿಗಳು
