Updated on: May 04, 2022 | 9:44 PM
ಅರ್ಜುನ್ ರೆಡ್ಡಿ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು ಶಾಲಿನಿ ಪಾಂಡೆ. ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ನಂತರ ಸತತವಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರಸ್ತುತ ಶಾಲಿನಿ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದು, ಎರಡೂ ಹಿಂದಿ ಚಿತ್ರಗಳು ಎನ್ನುವುದು ವಿಶೇಷ.
ತೆಲುಗು ಚಿತ್ರದ ಮೂಲಕ ಪದಾರ್ಪಣೆ ಮಾಡಿದ್ದರೂ ನಟಿ ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಆದರೆ ‘ಅರ್ಜುನ್ ರೆಡ್ಡಿ’ ನೀಡಿದಷ್ಟು ದೊಡ್ಡ ಖ್ಯಾತಿಯನ್ನು ಮತ್ತೊಂದು ಚಿತ್ರ ನೀಡಲು ಸಾಧ್ಯವಾಗಿಲ್ಲ.
ಶಾಲಿನಿ ಪಾಂಡೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್.
ಹೊಸ ಫೋಟೋಶೂಟ್ ಮಾಡಿಸಿಕೊಳ್ಳುವ ನಟಿ, ಅವುಗಳನ್ನು ಹಂಚಿಕೊಂಡು ಅಭಿಮಾನಿಗಳ ಮನಗೆಲ್ಲುತ್ತಾರೆ.
ಇತ್ತೀಚೆಗೆ ಶಾಲಿನಿ ಪಾಂಡೆ ಹಂಚಿಕೊಂಡಿರುವ ಫೋಟೋಗಳು ವೈರಲ್ ಆಗಿವೆ.
ಕಪ್ಪು ಬಣ್ಣದ ದಿರಿಸಿನಲ್ಲಿ ಫ್ಯಾಶನ್ ಪ್ರಿಯರ ಮನಗೆದ್ದಿದ್ದಾರೆ ನಟಿ.
ಕಾಮೆಂಟ್ಗಳ ಮೂಲಕ ಫ್ಯಾನ್ಸ್ ಶಾಲಿನಿ ಪಾಂಡೆ ಫೋಟೊಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ.
Published On - 8:16 pm, Wed, 4 May 22