Kannada News Photo gallery Assam Flood: Heavy Rainfall and Flood situation in Meghalaya and Assam Death toll Raises Photos here
Assam Flood: ಅಸ್ಸಾಂನಲ್ಲಿ ಭಾರೀ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತ; 19 ಲಕ್ಷ ಜನರಿಗೆ ಸಂಕಷ್ಟ
TV9 Web | Updated By: ಸುಷ್ಮಾ ಚಕ್ರೆ
Updated on:
Jun 18, 2022 | 3:29 PM
ಅಸ್ಸಾಂನ 28 ಜಿಲ್ಲೆಗಳಲ್ಲಿ ಸುಮಾರು 19 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ 1 ಲಕ್ಷ ಜನರು ಪರಿಹಾರ ಶಿಬಿರಗಳಲ್ಲಿದ್ದಾರೆ. ಕಳೆದ ಎರಡು ದಿನಗಳಲ್ಲಿ ಸಂಭವಿಸಿದ ಪ್ರವಾಹದಲ್ಲಿ ಅಸ್ಸಾಂನಲ್ಲಿ 12 ಮತ್ತು ಮೇಘಾಲಯದಲ್ಲಿ 19 ಮಂದಿ ಸಾವನ್ನಪ್ಪಿದ್ದಾರೆ. ಅಸ್ಸಾಂನ ಪ್ರವಾಹದ ಭೀಕರತೆಯನ್ನು ಬಿಚ್ಚಿಡುವ ಫೋಟೋಗಳು ಇಲ್ಲಿವೆ.
1 / 13
ಅಸ್ಸಾಂ ಮತ್ತು ಮೇಘಾಲಯದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ 31 ಜನರು ಸಾವನ್ನಪ್ಪಿದ್ದಾರೆ.
2 / 13
ಅಸ್ಸಾಂನ 28 ಜಿಲ್ಲೆಗಳಲ್ಲಿ ಸುಮಾರು 19 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ 1 ಲಕ್ಷ ಜನರು ಪರಿಹಾರ ಶಿಬಿರಗಳಲ್ಲಿದ್ದಾರೆ.
3 / 13
ಕಳೆದ ಎರಡು ದಿನಗಳಲ್ಲಿ ಸಂಭವಿಸಿದ ಪ್ರವಾಹದಲ್ಲಿ ಅಸ್ಸಾಂನಲ್ಲಿ 12 ಮತ್ತು ಮೇಘಾಲಯದಲ್ಲಿ 19 ಮಂದಿ ಸಾವನ್ನಪ್ಪಿದ್ದಾರೆ. ಮೇಘಾಲಯದ ಚಿರಾಪುಂಜಿಯಲ್ಲಿ ಕಳೆದ 82 ವರ್ಷಗಳಲ್ಲೇ ಅತಿ ಹೆಚ್ಚು ಮಳೆಯಾಗಿದೆ.
4 / 13
ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ ಕೂಡ ಭಾರೀ ಪ್ರವಾಹ ಉಂಟಾಗುತ್ತಿದೆ. ನಗರದಲ್ಲಿ ಕೇವಲ 6 ಗಂಟೆಗಳಲ್ಲಿ 145 ಮಿಮೀ ಮಳೆಯಾಗಿದೆ. ತ್ರಿಪುರಾ ಉಪಚುನಾವಣೆಯ ಪ್ರಚಾರದ ಮೇಲೂ ಇದು ಪರಿಣಾಮ ಬೀರಿದೆ.
5 / 13
ಮೇಘಾಲಯದ ಮೌಸಿನ್ರಾಮ್ ಮತ್ತು ಚಿರಾಪುಂಜಿಯಲ್ಲಿ 1940ರಿಂದ ಈಚೆಗೆ ಅಂದರೆ 82 ವರ್ಷಗಳಲ್ಲೇ ದಾಖಲೆಯ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
6 / 13
ಕಳೆದ 60 ವರ್ಷಗಳಲ್ಲಿ ಅಗರ್ತಲಾದಲ್ಲಿ ಇದು ಮೂರನೇ ಅತಿ ಹೆಚ್ಚು ಮಳೆಯಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಹಠಾತ್ ಪ್ರವಾಹದಿಂದಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿದೆ.
7 / 13
ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
8 / 13
ಅಸ್ಸಾಂನಲ್ಲಿ ಸುಮಾರು 3,000 ಗ್ರಾಮಗಳು ಜಲಾವೃತವಾಗಿದ್ದು, 43,000 ಹೆಕ್ಟೇರ್ ಬೆಳೆ ಹಾನಿಯಾಗಿದೆ.
9 / 13
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಕರೆ ಮಾಡಿ ಪ್ರವಾಹ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.
10 / 13
ಅಸ್ಸಾಂನ ಪ್ರವಾಹಪೀಡಿತ ಸ್ಥಳಗಳಿಗೆ ಕೇಂದ್ರದಿಂದ ಎಲ್ಲಾ ಸಹಾಯವನ್ನು ನೀಡುವ ಭರವಸೆ ನೀಡಿದ್ದಾರೆ. ಪ್ರವಾಹ ಮತ್ತು ಭೂಕುಸಿತದಿಂದ ಸಿಲುಕಿರುವ ಜನರಿಗಾಗಿ ಅಸ್ಸಾಂ ಸರ್ಕಾರವು ಗುವಾಹಟಿ ಮತ್ತು ಸಿಲ್ಚಾರ್ ನಡುವೆ ವಿಶೇಷ ವಿಮಾನಗಳನ್ನು ವ್ಯವಸ್ಥೆ ಮಾಡಿದೆ.
11 / 13
ಅಸ್ಸಾಂನಲ್ಲಿ 373 ಪರಿಹಾರ ಶಿಬಿರಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಇರಿಸಲಾಗಿದೆ.
12 / 13
ಎಲ್ಲಾ ಪ್ರವಾಹ ಪೀಡಿತ ಪ್ರದೇಶಗಳಲ್ಲಿ, ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಮತ್ತು ಅಸ್ಸಾಂ ಪೊಲೀಸರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿಯೋಜನೆ ಮಾಡಲಾಗಿದೆ.
13 / 13
ಅಸ್ಸಾಂನಲ್ಲಿ ಪ್ರವಾಹದಲ್ಲಿ ಸಿಲುಕಿರುವ ಜನರು
Published On - 3:26 pm, Sat, 18 June 22