ಮಂತ್ರಾಲಯಕ್ಕೆ ಮತ್ತೊಂದು ಹೆಗ್ಗುರುತು: ರಾಯರ ಸನ್ನಿಧಿಯಲ್ಲಿ ಶ್ರೀರಾಮನ ಬೃಹತ್​​ ಪಂಚಲೋಹದ ಪ್ರತಿಮೆ ನಿರ್ಮಾಣಕ್ಕೆ ಅಮಿತಾ ಶಾ ಶಂಕುಸ್ಥಾಪನೆ

ಸಾಧು ಶ್ರೀನಾಥ್​

Updated on: Jul 24, 2023 | 2:50 PM

ಮಂತ್ರಾಲಯದಲ್ಲಿ 108 ಅಡಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಭೂಮಿಪೂಜೆ ಕಾರ್ಯಕ್ರಮ ರಾಘವೇಂದ್ರ ಸ್ವಾಮಿ ಮಠದ ಶ್ರೀಗಳಿಂದ ವೈಭವದಿಂದ ನಡೆಯಿತು. 300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ರಾಮನ ಪ್ರತಿಮೆಗೆ ಕೇಂದ್ರ ಸಚಿವ ಅಮಿತ್ ಶಾ ಅವರು ವರ್ಚುಯಲ್ ಶಂಕುಸ್ಥಾಪನೆ ನೆರವೇರಿಸಿದರು.

1 / 5

2 / 5

ಕಾರ್ಯಕ್ರಮದಲ್ಲಿ ಮಂತ್ರಾಲಯದ ಪೀಠಾಧಿಪತಿ ಡಾ. ಸುಬುಧೇಂದ್ರ ತೀರ್ಥರು ಭೂಮಿಪೂಜೆ ನೆರವೇರಿಸಿದರು. ಆಂಧ್ರ ಪ್ರದೇಶದ ಸಚಿವರು ಹಾಗೂ ಉನ್ನತಾಧಿಕಾರಿಗಳು ಭಾಗವಹಿಸಿದ್ದು, ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

3 / 5

ಇದೇ ವೇಳೆ ಕೇಂದ್ರ ಮಂತ್ರಿ ಅಮಿತ್ ಶಾ ಅವರು ತಾವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತಮ್ಮ ಪೂರ್ವ ಜನ್ಮದ ಪುಣ್ಯ ಎಂದು ಹೇಳಿದ್ದಾರೆ. ಜೈ ಶ್ರೀ ರಾಮ್ ಫೌಂಡೇಶನ್ ಆಶ್ರಯದಲ್ಲಿ ಈ ಪಂಚಲೋಹ ಮೂರ್ತಿ ನಿರ್ಮಾಣ ನಡೆಯಲಿದೆ.

4 / 5

ಶ್ರೀ ರಾಘವೇಂದ್ರಸ್ವಾಮಿ ಮಠದ ಅಧ್ಯಕ್ಷ ಸುಬುಧೇಂದ್ರ ತೀರ್ಥರು, 'ಜೈ ಶ್ರೀರಾಮ್ ಫೌಂಡೇಶನ್' ಸಂಸ್ಥಾಪಕರಾದ ರಾಮು, ಶ್ರೀಧರ್, ಸಚಿವ ಗುಮ್ಮನೂರು ಜಯರಾಂ, ಬಿಜೆಪಿ ಮುಖಂಡ ಟಿ.ಜಿ. ವೆಂಕಟೇಶ್ ಸೇರಿದಂತೆ ಅಪಾರ ಸಂಖ್ಯೆಯ ಗ್ರಾಮಸ್ಥರು ಈ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

5 / 5

ಎರಡು ವರ್ಷಗಳಲ್ಲಿ ಈ ಮೂರ್ತಿಯ ತಯಾರಿ ಪೂರ್ಣಗೊಂಡು ನಂತರ ಪ್ರತಿಷ್ಠಾಪನೆ ನಡೆಯಲಿದೆ. ನಂತರ ಪ್ರತಿಮೆಯ ಮುಂಭಾಗದಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ.

Published On - 2:49 pm, Mon, 24 July 23

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us