
ಚಟುವಟಿಕೆಯಿಂದ ಇಲ್ಲದಿರುವುದು: ವರ್ಕ್ ಫ್ರಮ್ ಹೋಮ್ ನಂತಹ ವರ್ಕಿಂಗ್ ಕಲ್ಚರ್ ಅಳವಡಿಕೆಯಿಂದ ಬಹುತೇಕ ಮಂದಿ ಈಗ ಆ್ಯಕ್ಟಿವ್ ಆಗಿಲ್ಲ. ಅವರ ದೈಹಿಕ ಚಟುವಟಿಕೆಯು ತುಂಬಾ ಕಡಿಮೆಯಾಗಿದೆ. ಅಲ್ಲದೆ, ದೈನಂದಿನ ಕೆಲಸದಲ್ಲಿಯೂ ಸೋಮಾರಿಯಾಗುತ್ತೇವೆ. ಇದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಒತ್ತಡ: ಇದು ಕೂಡ ಮುಖ್ಯ ಸಮಸ್ಯೆಯಾಗಿದ್ದು, ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದು. ಇತ್ತೀಚಿನ ದಿನಗಳಲ್ಲಿ ಜನರು ಒತ್ತಡದಿಂದ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಜೊತೆಗೆ ಅವರ ಕೂದಲು ಕೂಡ ಅಕಾಲಿಕವಾಗಿ ಬೂದು ಬಣ್ಣಕ್ಕೆ ತಿರುಗುತ್ತಿದೆ. ನೀವು ಅತಿಯಾದ ಒತ್ತಡ ತೆಗೆದುಕೊಳ್ಳುವ ಅಭ್ಯಾಸವನ್ನು ಹೊಂದಿದ್ದರೆ, ಖಂಡಿತವಾಗಿಯೂ ಅದನ್ನು ನಿರ್ಲಕ್ಷಿಸಲು ಪ್ರಯತ್ನಿಸಿ.

ತಪ್ಪು ಆಹಾರ ಸೇವನೆ: ಆಹಾರ ಸರಿಯಾಗಿಲ್ಲದಿದ್ದರೆ ನಮ್ಮ ದೇಹವು ಸಮಯಕ್ಕಿಂತ ಮುಂಚೆಯೇ ಹಳೆಯದಾಗಿ ಕಾಣಲು ಪ್ರಾರಂಭಿಸುತ್ತದೆ ಎಂದು ಹೇಳಲಾಗುತ್ತದೆ. ಜಂಕ್ ಮತ್ತು ಸಂಸ್ಕರಿಸಿದ ಆಹಾರಗಳು ನಮ್ಮ ದಿನಚರಿಯ ಭಾಗವಾಗಿದೆ, ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕವೆಂದು ಪರಿಗಣಿಸಲಾಗಿದೆ.

ಅಮಲು ಪದಾರ್ಥ ಸೇವನೆ: ಸ್ವಲ್ಪ ಒತ್ತಡವಿದ್ದರೂ ಜನರು ಧೂಮಪಾನ ಅಥವಾ ಮದ್ಯಪಾನದ ಚಟಕ್ಕೆ ಬೀಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಇದು ಯುವಜನರಲ್ಲಿ ಒಂದು ಟ್ರೆಂಡ್ ಆಗಿದೆ. ಆದರೆ ಈ ಅಭ್ಯಾಸವು ನಿಮ್ಮನ್ನು ಅಕಾಲಿಕವಾಗಿ ಮುದುಕರನ್ನಾಗಿ ಮಾಡಬಹುದು, ಜೊತೆಗೆ ಇದು ಮಾರಣಾಂತಿಕವಾಗಬಹುದು.

ನಿದ್ದೆ ಮಾಡದಿರುವುದು: ಯುವಕರಲ್ಲಿ ಗ್ಯಾಜೆಟ್‌ಗಳನ್ನು ಬಳಕೆ ಮಾಡುವ ಅಭ್ಯಾಸ ಹೆಚ್ಚಾಗಿದ್ದು, ಅದು ಅವರ ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ. ನಿದ್ರೆಯ ಕೊರತೆಯು ಕಣ್ಣುಗಳ ಕೆಳಗೆ ಕಪ್ಪು ವಲಯಗಳಿಗೆ ಮತ್ತು ಮುಖದ ಮೇಲೆ ಸುಕ್ಕುಗಳಿಗೆ ಕಾರಣವಾಗುತ್ತದೆ. ಮತ್ತು ಈ ಸಮಸ್ಯೆಗಳು ನಿಮ್ಮನ್ನು ಬೇಗನೇ ವಯಸ್ಸಾದಂತೆ ಮಾಡುತ್ತದೆ.