Ayodhya Deepotsav 2023: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಲಕ್ಷ ದೀಪೋತ್ಸವ ಮೂಲಕ ವಿಶ್ವದಾಖಲೆ, ಫೋಟೋಸ್ ಇಲ್ಲಿದೆ
ಶ್ರೀರಾಮ ಜನ್ಮಸ್ಥಳ ಅಯೋಧ್ಯೆಯಲ್ಲಿ ದೀಪೋತ್ಸವದ ಸಂಭ್ರಮ ಮನೆ ಮಾಡಿದೆ. ಉತ್ತರ ಪ್ರದೇಶದ ಸರಯೂ ನದಿಯ ದಡದಲ್ಲಿರುವ ರಾಮನಗರಿ ಅಯೋಧ್ಯೆಯಲ್ಲಿ ಶನಿವಾರ ಅದ್ಭುತ ದೀಪೋತ್ಸವವನ್ನ ಆಚರಿಸಲಾಗಿದೆ. 51 ಘಾಟ್ ಗಳಲ್ಲಿ 24 ಲಕ್ಷ ಮಣ್ಣಿನ ದೀಪಗಳನ್ನ ಬೆಳಗಿಸುವ ಮೂಲಕ ‘ಗಿನ್ನಿಸ್ ವಿಶ್ವ ದಾಖಲೆ'ಯನ್ನು ನಿರ್ಮಿಸಲಾಗಿದೆ.
1 / 11
ಶ್ರೀರಾಮ ಜನ್ಮಸ್ಥಳ ಅಯೋಧ್ಯೆಯಲ್ಲಿ ದೀಪೋತ್ಸವದ ಸಂಭ್ರಮ ಮನೆ ಮಾಡಿದೆ. ಉತ್ತರ ಪ್ರದೇಶದ ಸರಯೂ ನದಿಯ ದಡದಲ್ಲಿರುವ ರಾಮನಗರಿ ಅಯೋಧ್ಯೆಯಲ್ಲಿ ಶನಿವಾರ ಅದ್ಭುತ ದೀಪೋತ್ಸವವನ್ನ ಆಚರಿಸಲಾಗಿದೆ.
2 / 11
51 ಘಾಟ್ ಗಳಲ್ಲಿ 22.23 ಲಕ್ಷ ಮಣ್ಣಿನ ದೀಪಗಳನ್ನ ಬೆಳಗಿಸುವ ಮೂಲಕ ‘ಗಿನ್ನಿಸ್ ವಿಶ್ವ ದಾಖಲೆ'ಯನ್ನು ನಿರ್ಮಿಸಲಾಗಿದೆ. ಈ ಮೂಲಕ ನಗರದ ಹಿಂದಿನ 17 ಲಕ್ಷ ದೀಪಗಳ ದಾಖಲೆಯನ್ನು ಮುರಿದಿದೆ.
3 / 11
ಒಂದು ಕಡೆ ಲಕ್ಷ ದೀಪೋತ್ಸವ ಮತ್ತೊಂದು ಕಡೆ ಲೇಸರ್ ಬೆಳಕಿನಾಟ ರಾಮನಗರಿಯಲ್ಲಿ ನಿನ್ನೆ ಹೊಸ ಲೋಕವನ್ನೇ ಸೃಷ್ಟಿ ಮಾಡಿತ್ತು. ಬಣ್ಣ ಬಣ್ಣದ ಚಿತ್ತಾರ. ಎಲ್ಲಿ ನೋಡಿದ್ರು ಹೊಂಬೆಳಕು ಸೂಸುವ ಹಣತೆಗಳು, ಮನಸೂರೆಗೋಳಿಸುವ ಲೇಸರ್ ಬೆಳಕಿನಾಟ.
4 / 11
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಸ್ವರ್ಗವೇ ಧರೆಗಿಳಿದಿತ್ತು. ಎಲ್ಲರ ಮನೆ ಮನಗಳಲ್ಲಿ ಹಬ್ಬದ ವಾತಾವರಣ ಮೂಡಿತ್ತು. ದೀಪಾವಳಿ ಹಿನ್ನಲೆ ಅಯೋಧ್ಯೆಯಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಪ್ರಯುಕ್ತ 24ಲಕ್ಷ ದೀಪಗಳನ್ನು ಹಚ್ಚಲಾಗಿತ್ತು. 51 ಘಾಟ್‌ಗಳಲ್ಲಿ 24 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಹಚ್ಚಿ ಗಿನ್ನಿಸ್ ದಾಖಲೆ ಬರೆಯಲಾಗಿದೆ.
5 / 11
ಕಾರ್ಯಕ್ರಮಕ್ಕೂ ಮುನ್ನ ಶನಿವಾರ ಬೆಳಗ್ಗೆ ಸಂಭ್ರಮಾಚರಣೆಯಲ್ಲಿ ಶೋಭಾ ಯಾತ್ರೆಗೆ ಚಾಲನೆ ನೀಡಿ ರಾಮಾಯಣವನ್ನು ಆಧರಿಸಿದ ಹದಿನಾರು ಕೋಷ್ಟಕಗಳು ಯಾತ್ರೆಯಲ್ಲಿ ಭಾಗವಹಿಸಿದ್ದವು. ನಗರದಲ್ಲಿ ಶ್ರೀರಾಮನ ಜೀವನಗಾಥೆಯನ್ನು ಬಿಂಬಿಸುವ ಮರಳು ಕಲೆಯನ್ನೂ ಮಾಡಲಾಗಿದೆ.
6 / 11
ದೀಪೋತ್ಸವಕ್ಕೆ ಚಾಲನೆ ನೀಡುವ ಮುನ್ನ ಬಳಿಕ ಶ್ರೀರಾಮ, ಸೀತೆ, ಲಕ್ಷ್ಮಣ ವೇಷಾಧಾರಿಗಳು ಪುಷ್ಪಕ ವಿಮಾನದ ರೂಪದಲ್ಲಿ ಹೆಲಿಕಾಪ್ಟರ್‌ನಲ್ಲಿ ಅಯೋಧ್ಯೆಯನ್ನು ತಲುಪುವ ರೂಪಕ ಮಾಡಲಾಗಿತ್ತು. ಸಿಎಂ ಯೋಗಿ ಮತ್ತು ರಾಜ್ಯಪಾಲ ಆನಂದಿ ಬೆನ್ ಪಟೇಲ್ ಅವರನ್ನು ಬರಮಾಡಿಕೊಂಡ್ರು. ಇದಾದ ಬಳಿಕ ಸಿಎಂ ಯೋಗಿ ವಶಿಷ್ಠರ ಪಾತ್ರದಲ್ಲಿ ಶ್ರೀರಾಮನ ಪಟ್ಟಾಭಿಷೇಕ ನೆರವೇರಿಸಿದ್ರು.
7 / 11
ಈ ಕಾರ್ಯಕ್ರಮವನ್ನು ವೀಕ್ಷಿಸಲು ಸುಮಾರು ಐದು ಸಾವಿರ ಅತಿಥಿಗಳು ರಾಮಕಥಾ ಪಾರ್ಕ್‌ನಲ್ಲಿ ಭಾಗವಹಿಸಿದ್ರು. ಬಳಿಕ ಈ ಬಾರಿ ಸರಯೂ ಸೇತುವೆ ಮೇಲೆ 20 ನಿಮಿಷಗಳ ಕಾಲ ಹಸಿರು ಪಟಾಕಿ ಸಿಡಿಸಿ ಶ್ರೀರಾಮಪಟ್ಟಾಭಿಷೇಕವನ್ನು ಸಂಭ್ರಮಿಸಲಾಯ್ತು.
8 / 11
2017 ರಿಂದ ರಾಮಮಂದಿರ ಪ್ರದೇಶದಲ್ಲಿ ಉತ್ಸವವನ್ನು ಆಯೋಜಿಸಲಾಗುತ್ತಿದೆ ಮತ್ತು ಪ್ರತಿ ವರ್ಷ ಹೊಸ ದಾಖಲೆಯನ್ನು ಸೃಷ್ಟಿಸುತ್ತಿದೆ. ಈ ಬಾರಿಯ ದೀಪೋತ್ಸವದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ 50ಕ್ಕೂ ಹೆಚ್ಚು ದೇಶಗಳ ರಾಯಭಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ರು.
9 / 11
2017ರಲ್ಲಿ 51,000, 2019ರಲ್ಲಿ 4.10 ಲಕ್ಷ, 2020ರಲ್ಲಿ 6 ಲಕ್ಷಕ್ಕೂ ಹೆಚ್ಚು, 2021 ರಲ್ಲಿ 9 ಲಕ್ಷಕ್ಕೂ ಹೆಚ್ಚು, 2022ರಲ್ಲಿ ಸುಮಾರು 15 ಲಕ್ಷ ದೀಪಗಳನ್ನು ಹಚ್ಚಲಾಗಿತ್ತು. ಇದು ವಿಶ್ವ ದಾಖಲೆಗೆ ಸಾಕ್ಷಿಯಾಗಿತ್ತು. ಈ ವರ್ಷ 24 ಲಕ್ಷ ದೀಪ ಹಚ್ಚುವ ಮೂಲಕ ಹೊಸ ಗಿನ್ನಿಸ್ ದಾಖಲೆ ಬರೆದಿದೆ.
10 / 11
ಸರಯೂ ನದಿಯ ದಡದಲ್ಲಿರುವ ರಾಮ್ ಕಿ ಪೈಡಿಯಲ್ಲಿ 24 ಲಕ್ಷ ದೀಪಗಳನ್ನು ಬೆಳಗಿಸಲಾಗಿದೆ, 20 ಕೋಟಿ ರೂ.ಗಳ ಬೃಹತ್ ಬಜೆಟ್‌ನಲ್ಲಿ ಜಿಲ್ಲಾಡಳಿತ ಬೆಳಕು-ಧ್ವನಿ ಕಾರ್ಯಕ್ರಮಕ್ಕೆ ವ್ಯವಸ್ಥೆ, ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದೆ.
11 / 11
ರಾಮ್ ಕಿ ಪೈಡಿಯಲ್ಲಿ ಬೆಳಗುವ ಒಂದು ದೀಪಕ್ಕೆ 51 ರೂ ಮತ್ತು 51 ದೀಪಗಳಿಗೆ 1,100 ರೂಗಳನ್ನು ನೀಡುವ ಮೂಲಕ ಈವೆಂಟ್‌ನ ಭಾಗವಾಗಲು ಸಾಮಾನ್ಯ ಜನರಿಗೆ ಸರ್ಕಾರ ಅವಕಾಶ ನೀಡಿದೆ.