ಸ್ಮಾರ್ಟ್​ಫೋನ್​ಗಳಿಗೆ ಜೀವಿತಾವಧಿ ಇದೆಯೇ?: ಒಂದು ಫೋನನ್ನು ಎಷ್ಟು ಸಮಯ ಬಳಸಬಹುದು?

Tech Tips: ಮಾರುಕಟ್ಟೆಗೆ ಪ್ರತಿದಿನ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿವೆ. ಹೆಚ್ಚಿನ ಕಂಪನಿಗಳು ಹೊಸ ಫೋನ್‌ನೊಂದಿಗೆ ಮೂರು ವರ್ಷಗಳವರೆಗೆ ಓಎಸ್ (ಆಪರೇಟಿಂಗ್ ಸಿಸ್ಟಮ್) ಅಪ್‌ಗ್ರೇಡ್ ಮಾಡುವುದಾಗಿ ಗ್ರಾಹಕರಿಗೆ ಭರವಸೆ ನೀಡುತ್ತವೆ. ಆದರೆ, ನೀವು ಬಳಸುತ್ತಿರುವ ಮೊಬೈಲ್‌ನ ಜೀವಿತಾವಧಿ ಎಷ್ಟು ಎಂದು ಎಂದಾದರೂ ಯೋಚಿಸಿದ್ದೀರಾ?.

Vinay Bhat
|

Updated on: Nov 13, 2023 | 6:55 AM

ಸ್ಮಾರ್ಟ್‌ಫೋನ್‌ಗಳು ಇಂದು ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ನಾವೆಲ್ಲರೂ ಚಿಕ್ಕ-ಪುಟ್ಟ ಕೆಲಸದಿಂದ ಹಿಡಿದು ದೊಡ್ಡ ಕೆಲಸಗಳಿಗೆ ಮೊಬೈಲ್ ಅನ್ನು ಅವಲಂಬಿಸಿದ್ದೇವೆ. ಆದರೆ, ನೀವು ಬಳಸುತ್ತಿರುವ ಮೊಬೈಲ್‌ನ ಜೀವಿತಾವಧಿ ಎಷ್ಟು ಎಂದು ಎಂದಾದರೂ ಯೋಚಿಸಿದ್ದೀರಾ?.

1 / 6
ಮಾರುಕಟ್ಟೆಗೆ ಪ್ರತಿದಿನ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿವೆ. ಹೆಚ್ಚಿನ ಕಂಪನಿಗಳು ಹೊಸ ಫೋನ್‌ನೊಂದಿಗೆ ಮೂರು ವರ್ಷಗಳವರೆಗೆ ಓಎಸ್ (ಆಪರೇಟಿಂಗ್ ಸಿಸ್ಟಮ್) ಅಪ್‌ಗ್ರೇಡ್ ಮಾಡುವುದಾಗಿ ಗ್ರಾಹಕರಿಗೆ ಭರವಸೆ ನೀಡುತ್ತವೆ. ಇಷ್ಟೇ ಅಲ್ಲ, ಓಎಸ್ ಅಪ್‌ಗ್ರೇಡ್‌ಗಳ ಹೊರತಾಗಿ, ಕೆಲವು ಕಂಪನಿಗಳು ಗ್ರಾಹಕರ ಸುರಕ್ಷತೆಗಾಗಿ ಐದು ವರ್ಷಗಳವರೆಗೆ ಭದ್ರತಾ ನವೀಕರಣಗಳನ್ನು ಕೂಡ ನೀಡುತ್ತಿವೆ.

2 / 6
ನಿಮ್ಮ ಫೋನ್‌ಗೆ ನವೀಕರಣಗಳು ಅಂದರೆ ಅಪ್ಡೇಟ್ ಬರುವುದು ನಿಂತಾಗ, ಫೋನ್ ಬದಲಾಯಿಸುವ ಸಮಯ ಬಂದಿದೆ ಎಂದು ಅರ್ಥಮಾಡಿಕೊಳ್ಳಿ. ಕಂಪನಿಗಳು ಅಪ್ಡೇಟ್ ನೀಡುವುದು ಏಕೆಂದರೆ ನಿಮ್ಮ ಸ್ಮಾರ್ಟ್​ಫೋನ್​ಗಳಿಗೆ ಯಾವುದೇ ತೊಂದರೆ ಅಥವಾ ವೈರಸ್ ಅಟ್ಯಾಕ್ ಆಗದಿರಲಿ ಮತ್ತು ಸುರಕ್ಷತೆಗಾಗಿ ನವೀಕರಣಗಳನ್ನು ನೀಡಲಾಗುತ್ತದೆ. ಈ ಅಪ್ಡೇಟ್ ನೀಡುವುದನ್ನು ಕಂಪನಿ ನಿಲ್ಲಿಸಿದಾಗ ಫೋನ್ ಬದಲಾವಣೆ ಮಾಡುವುದು ಉತ್ತಮ.

3 / 6
ಇದರಲ್ಲಿ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್ ಅಥವಾ ದುಬಾರಿ ಬೆಲೆಯ ಫೋನ್ ಎಂಬ ಬೇಧಭಾವ ಬರುವುದಿಲ್ಲ. ಯಾವುದೇ ಫೋನಾಗಿದ್ದರೂ ಸಾಫ್ಟ್‌ವೇರ್ ಅಪ್ಡೇಟ್ ನೀಡುವುದು ನಿಲ್ಲಿಸಿದರೆ ಅದರ ಆಯುಷ್ಯ ಮುಗಿಯಿತು ಎಂದರ್ಥ.

4 / 6
10,000 ರೂ. ಮೌಲ್ಯದ ಅಗ್ಗದ ಬಜೆಟ್ ಸ್ಮಾರ್ಟ್‌ಫೋನ್‌ಗಳ ಉತ್ಪಾದನಾ ಕಂಪನಿಗಳು ಸಾಮಾನ್ಯವಾಗಿ ಹೆಚ್ಚು ಸಮಯ ಗ್ರಾಹಕರಿಗೆ ಓಎಸ್ ನವೀಕರಣಗಳು ಮತ್ತು ಭದ್ರತಾ ನವೀಕರಣಗಳನ್ನು ಒದಗಿಸುವ ಭರವಸೆ ನೀಡುವುದಿಲ್ಲ.

5 / 6
ಆದರೆ ಮತ್ತೊಂದೆಡೆ, ಫ್ಲ್ಯಾಗ್‌ಶಿಪ್ ವೈಶಿಷ್ಟ್ಯಗಳೊಂದಿಗೆ ಬರುವ ದುಬಾರಿ ಮೊಬೈಲ್‌ಗಳ ಕಂಪನಿಗಳು ಗ್ರಾಹಕರಿಗೆ OS ನವೀಕರಣಗಳು ಮತ್ತು ಭದ್ರತಾ ನವೀಕರಣಗಳನ್ನು ಹೆಚ್ಚು ಸಮಯ ನೀಡುತ್ತವೆ. ಇದರಿಂದಾಗಿ ಈ ಮಾದರಿಗಳು ಸುರಕ್ಷಿತವಾಗಿ ಉಳಿಯುತ್ತವೆ ಮತ್ತು ದೀರ್ಘಾವಧಿಯ ವರೆಗೆ ಉಪಯೋಗಿಸಬಹುದು.

6 / 6
Follow us