Baby Elephant Birthday: ಬನ್ನೇರುಘಟ್ಟ ಉದ್ಯಾನವನದಲ್ಲಿ ಮರಿ ಆನೆ ಹುಟ್ಟಹಬ್ಬ ಸಂಭ್ರಮ, ವಿಭಿನ್ನ ಕೇಕ್ ತಯಾರಿಸಿದ ಸಿಬ್ಬಂದಿ

| Updated By: ಆಯೇಷಾ ಬಾನು

Updated on: Aug 27, 2023 | 12:02 PM

ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನ ಒಂದಲ್ಲ ಒಂದು ವಿಶೇಷತೆಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆನೆಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಇಂದು ವಿಭಿನ್ನ ರೀತಿಯಲ್ಲಿ ಮರಿ ಆನೆಯ ಹುಟ್ಟುಹಬ್ಬವನ್ನು ಆಚರಿಸಲಾಗಿದೆ.

1 / 7
ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನ ವನ್ಯ ಜೀವಿಗಳ ತಾಣವಾಗಿದೆ. ರಾಷ್ಟ್ರ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿದೆ. ಕೆಲ ದಿನಗಳ ಹಿಂದೆ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ ಆಗಮನವಾಗಿತ್ತು. ಕಬಿನಿ ಎಂಬ ಜೀಬ್ರಾ ಮುದ್ದಾದ ಮರಿಗೆ ಜನ್ಮ ನೀಡಿತ್ತು.

2 / 7
ಈಗ ಮತ್ತೊಂದು ವಿಶೇಷ ಆಚರಣೆಗೆ ಬನ್ನೇರುಘಟ್ಟ ಉದ್ಯಾನವನ ಸಾಕ್ಷಿಯಾಗಿದೆ. ಬನ್ನೇರುಘಟ್ಟ ಉದ್ಯಾನವನ ಅಂದ್ರೇನೆ ವಿಭಿನ್ನ ವಿಶೇಷ. ಈ ಬಾರಿಯ ವಿಶೇಷತೆಗೆ ಸಾಕ್ಷಿಯಾಗಿದ್ದು ಆನೆ ಮರಿ ಓಂ ಗಂಗಾ. ಅತಿ ಹೆಚ್ಚಿನ ಆನೆಗಳಿರುವ ಬನ್ನೇರುಘಟ್ಟ ಉದ್ಯಾನವನದಲ್ಲಿ ಆನೆ ಹುಟ್ಟುಹಬ್ಬ ಆಚರಿಸಲಾಗಿದೆ.

3 / 7
ಆನೆ ಮರಿ ಓಂ ಗಂಗಾಗೆ ಹುಟ್ಟು ಹಬ್ಬದ ಸಂಭ್ರಮ. ಹೀಗಾಗಿ ಉದ್ಯಾನವನ ಸಿಬ್ಬಂದಿ ಮನುಷ್ಯರಂತೆ ಆನೆ ಮರಿಗೆ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ.  ವನಶ್ರೀ ಎಂಬ ಆನೆಗೆ ಜನಿಸಿದ ಓಂ ಗಂಗಾ ಎಂಬ ಮರಿ ಆನೆಗೆ ಹುಟ್ಟು ಹಬ್ಬ ಆಚರಿಸಲಾಗಿದೆ.

4 / 7
ಓಂ ಗಂಗಾಗೆ ಒಂದು ವರ್ಷ ಆಗಿರುವ ಹಿನ್ನೆಲೆ ವಿಶೇಷ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಲಾಯಿತು. ಇತರೆ ಆನೆಗಳ ಸಮ್ಮುಖದಲ್ಲಿ ಬರ್ತಡೇ ಮಾಡಲಾಯಿತು. ಬರ್ತಡೇ ಹಿನ್ನೆಲೆ ವಿಭಿನ್ನ ಕೇಕ್ ತಯಾರಿಸಲಾಗಿತ್ತು. ಪೊಂಗಲ್, ಬೆಲ್ಲ, ತೆಂಗಿನಕಾಯಿ, ಕ್ಯಾರೆಟ್, ಬಾಳೆಹಣ್ಣು, ಕಬ್ಬಿನಿಂದ ಸಿಬ್ಬಂದಿ ಕೇಕ್ ತಯಾರಿಸಿದ್ದರು.

5 / 7
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಬ್ಬಂದಿ ಓಂ ಗಂಗಾಗೆ ಜನ್ಮದಿನದ ಶುಭ ಕೋರಿದರು. ಆನೆ ಮರಿ ಓಂ ಗಂಗಾಳನ್ನು ಬೆಂಗಳೂರಿನ ಖಾಸಗಿ ಕಂಪನಿ ದತ್ತು ಪಡೆದಿದೆ. ಸದ್ಯ ಮರಿ ಆನೆಯ ಹುಟ್ಟಹಬ್ಬ ಆಚರಣೆ ಹಿನ್ನೆಲೆ ಬನ್ನೇರುಘಟ್ಟ ಉದ್ಯಾನವನದಲ್ಲಿ ಸಂತಸ ಮನೆ ಮಾಡಿದೆ.

6 / 7
ವನ್ಯ ಜೀವಿಗಳ ಪ್ರವಾಸಿ ತಾಣವಾದ ಬನ್ನೇರುಘಟ್ಟ ಜೈವಿಕ ಉದ್ಯಾನವನ ದಿನೇ ದಿನೇ ತನ್ನ ಖ್ಯಾತಿಯನ್ನ ಹೆಚ್ಚಿಸಿಕೊಳ್ಳುವುದರ ಜೊತೆಗೆ ಪ್ರವಾಸಿಗರ ನೆಚ್ಚಿನ ಆಕರ್ಷಣಿಯ ತಾಣವಾಗಿದೆ. ಜೊತೆಗೆ ವಿಶೇಷ ಕಾರ್ಯಕ್ರಮಗಳನ್ನೂ ಮಾಡುತ್ತಿದೆ.

7 / 7
ಸಿಬ್ಬಂದಿ ಮಾಡಿದ ವಿಭಿನ್ನ ರೀತಿಯ ಕೇಕನ್ನು ಆನೆಗಳು ಹಂಚಿ ತಿಂದವು. ಮರಿ ಆನೆಯ ಹುಟ್ಟಹಬ್ಬ ಆಚರಣೆ ವಿಶೇಷವಾಗಿತ್ತು.